Advertisment

ತುಮಕೂರಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ.. ಸಾವಿಗೂ ಮುನ್ನ ವಿಡಿಯೋ ಮಾಡಿದ ನತದೃಷ್ಟ ಹೇಳಿದ್ದೇನು?

author-image
admin
Updated On
ತುಮಕೂರಲ್ಲಿ ಒಂದೇ ಕುಟುಂಬದ ಐವರ ಆತ್ಮಹತ್ಯೆ.. ಸಾವಿಗೂ ಮುನ್ನ ವಿಡಿಯೋ ಮಾಡಿದ ನತದೃಷ್ಟ ಹೇಳಿದ್ದೇನು?
Advertisment
  • ಬಡತನ, ಸಾಲ, ನೆರೆಯವರ ಕಿರುಕುಳಕ್ಕೆ ಇಡೀ ಕುಟುಂಬವೇ ಬಲಿ
  • ಇಡೀ ಕುಟುಂಬದ ನಾಶಕ್ಕೆ ಕಾರಣವಾಯ್ತಾ ದುಬಾರಿ ಶಾಲೆಯ ಶಿಕ್ಷಣ?
  • ಬದುಕು ಕಟ್ಟಿಕೊಡದ ಕಬಾಬ್​ ಮಾರಾಟ, ನೆರೆ ಮನೆಯವರು ನಾಪತ್ತೆ!

ಅಕ್ಕಪಕ್ಕದ ಮನೆಯವರ ಕಿರುಕುಳ.. ಬಡತನದ ಸಿಟ್ಟು.. ವ್ಯಾಪಾರ ನಷ್ಟ.. ದುಬಾರಿ ಶಿಕ್ಷಣ.. ದುಡಿತಕ್ಕೆ ಸಿಗದ ಫಲ.. ಬಡತನಕ್ಕೆ ಸಮಸ್ಯೆಗಳು ನೂರಾರು.. ಹೀಗೆ ಬಡವನ ಹೆಗಲೇರಿದ ಸಮಸ್ಯೆಗಳ ಬೆಟ್ಟ ತುಮಕೂರಿನಲ್ಲಿ ಇಡೀ ಮನೆಯನ್ನೇ ಸ್ಮಶಾನವಾಗಿಸಿದೆ. ಒಂದೇ ಕುಟುಂಬದ ಐವರು ಸಾವಿನ ಹಾದಿ ತುಳಿದಿದ್ದು, ಇಡೀ ನಗರವೇ ಒಂದು ಕ್ಷಣ ಬೆಚ್ಚಿಬಿದ್ದಿದೆ.

Advertisment

ಬಡತನ, ಸಾಲ, ನೆರೆಯವರ ಕಿರುಕುಳಕ್ಕೆ ಕುಟುಂಬವೇ ಬಲಿ!
ಒಂದೇ ಕುಟುಂಬದ ಐವರು ಸಾವು, ಬೆಚ್ಚಿಬಿದ್ದ ತುಮಕೂರು!

ತುಮಕೂರಿನ ಸದಾಶಿವನಗರದಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ.. ಮೃತರನ್ನ ಮನೆ ಯಜಮಾನ ಗರೀಬ್‌ಸಾಬ್‌, ಆತನ ಹೆಂಡ್ತಿ ಸುಮಯಾ, ಮಕ್ಕಳಾದ ಹಾಜೀರಾ, ಮಹ್ಮಮದ್ ಶುಭಾನ್, ಮಹ್ಮದ್ ಮುನೀರ್ ಎಂದು ಗುರುತಿಸಲಾಗಿದೆ.. ಇನ್ನು, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ..

ನೇಣು ಬಿಗಿದ ಸ್ಥಿತಿಯಲ್ಲಿ ದಂಪತಿಯ ಶವ ಪತ್ತೆ!
ಮಕ್ಕಳ ಸಾವು ನಿಗೂಢ, ಕತ್ತಿನ ಮೇಲೆ ಮಾರ್ಕ್​​​!

Advertisment

ದಂಪತಿ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ಹಾಸಿಗೆ ಮೇಲೆ ಮಕ್ಕಳ ಮೃತದೇಹಗಳು ಪತ್ತೆಯಾಗಿವೆ.. ಮಕ್ಕಳು ಯಾವ ರೀತಿ ಸಾವನ್ನಪ್ಪಿದ್ದಾರೆ ಎಂಬುವುದು ಇನ್ನೂ ತಿಳಿದು ಬಂದಿಲ್ಲ.. ಮಕ್ಕಳ ಕತ್ತಿನ ಮೇಲೆ ಮಾರ್ಕ್ ಇದೆ. ಆತ್ಮಹತ್ಯೆಗೂ ಮುನ್ನ ವಾಟ್ಸ್ಯಾಪ್ ಮೂಲಕ ವಿಡಿಯೊ ಕಳುಹಿಸಿದ್ದಾರೆ.. ತನಿಖೆ ಬಳಿಕ ಮತ್ತಷ್ಟು ವಿವರಗಳು ತಿಳಿಯಲಿವೆ. ಒಂದು ವರ್ಷದ ಹಿಂದೆ ನಗರಕ್ಕೆ ಬಂದು ವಾಸವಿದ್ದರು ಎಂದು ಹೇಳಿದ್ದಾರೆ.

ಸಾವಿಗೂ ಮುನ್ನ ವಿಡಿಯೋ ಮಾಡಿದ ನತದೃಷ್ಟ!
ನೆರೆಯವರಿಗೆ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯ!

ಆತ್ಮಹತ್ಯೆಗೆ ಕಾರಣ ತಿಳಿಸಿದ ಗರೀಬ್​​ ಸಾಬ್​​​, ಪಕ್ಕದ ಮನೆಯವರ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾಗ್ತಿದ್ದೀವಿ ಅಂತ ವಿಡಿಯೋ ಮಾಡಿ ಸಾವಿನ ಮನೆ ಸೇರಿದ್ದಾರೆ.. ಆತ್ಮಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು. ನಾವು ಯಾರ ತಂಟೆಗೂ ಹೋಗುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರು ದೌರ್ಜನ್ಯ ನೀಡುತ್ತಿದ್ದರು. ಬಡವರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ನಮ್ಮ ದೇಹಗಳನ್ನು ಪೋಸ್ಟ್‌ಮಾರ್ಟಂ ಮಾಡಬೇಡಿ ಎಂದು ವಿಡಿಯೊದಲ್ಲಿ ಮನವಿ ಮಾಡಿದ್ದಾರೆ.

Advertisment

ಲಾಭವಿಲ್ಲದ ವ್ಯಾಪಾರ, ಸಂಸಾರದ ಭಾರ, ಸಾಲದ ಹೊರೆ!
ಇಡೀ ಕುಟುಂಬದ ನಾಶಕ್ಕೆ ಕಾರಣವಾಯ್ತಾ ದುಬಾರಿ ಶಿಕ್ಷಣ?

ದುಬಾರಿ ಶಿಕ್ಷಣವೇ ಇಡೀ ಕುಟುಂಬವನ್ನೇ ಬಲಿ ಪಡೆದಿದೆ. ಗರೀಬ್ ಸಾಬ್ ಅತ್ಯಂತ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು. ದುಡಿದಿದ್ದು ಸಾಲುತ್ತಿರಲಿಲ್ಲ. ಮಕ್ಕಳನ್ನು ಓದಿಸಲು ಸಾಲ ಮಾಡಿದ್ದರು. ಕೊನೆಗೆ ಸಾಲ ತೀರಿಸಲು ಪರದಾಡುತ್ತಿದ್ದರು. ಇದರ ಮಧ್ಯೆ ಅಕ್ಕಪಕ್ಕದ ಮನೆಯವರ ಕಿರುಕುಳವಿತ್ತು.

publive-image

ಡೆತ್‌ ನೋಟ್‌ನಲ್ಲಿ ಏನಿದೆ?

ನಮಗೆ ಸಾಲ ಹೆಚ್ಚಾಗಿದೆ, ವ್ಯಾಪಾರದಲ್ಲಿ ಲಾಭ ಇಲ್ಲ. ಕೆಲಸಕ್ಕೆ ಹೋದರೆ ಹಣ ಬರುತ್ತಿಲ್ಲ. ಸಂಸಾರ ಮಾಡುವುದು ಕಷ್ಟವಾಗಿದೆ. ಊಟಕ್ಕೂ ತೊಂದರೆಯಾಗುತ್ತಿದೆ. ಊರಲ್ಲಿದ್ದಾಗ ಸಂಬಂಧಿಕರು ವಿಷ ಕಾರಿದರು. ಅದಕ್ಕಾಗಿ ನಗರಕ್ಕೆ ಬಂದಿದ್ದೇವೆ. ಬಾಡಿಗೆ ಮನೆಗೆ 45 ಸಾವಿರ ಅಡ್ವಾನ್ಸ್ ನೀಡಲಾಗಿದೆ. ಮೂರು ತಿಂಗಳ ಬಾಡಿಗೆ ಕೊಡೋದು ಬಾಕಿಯಿದೆ. ಉಳಿದ ಹಣವನ್ನ ನಮ್ಮ ದೊಡ್ಡಮ್ಮನಿಗೆ ವಾಪಾಸ್ ಕೊಡಿ. ನಾವು ವಾಸಿಸುವ ಮನೆಯ ಕೆಳಗಿನವರು ನಮಗೆ ತುಂಬಾ ಕಾಟ ಕೊಟ್ಟಿದ್ದಾರೆ. ನಮ್ಮ ಮನೆಯ ಕೆಳಗಿನ ಖಲಂದರ್, ಅವರ ಮಗಳು ಸಾನಿಯಾ, ಹಿರಿಯ ಮಗ, ಮಹಡಿ ಮನೆಯ ಶಬಾನಾ ಮತ್ತು ಅವಳ ಮಗಳು ಸಾನಿಯಾ ಈ ಎಲ್ಲರೂ ನಮ್ಮ ಸಾವಿಗೆ ಕಾರಣ.
- ಗರೀಬ್​ ಸಾಬ್​, ಮೃತ ವ್ಯಕ್ತಿ

Advertisment

ಬದುಕು ಕಟ್ಟಿಕೊಡದ ಕಬಾಬ್​ ಮಾರಾಟ!
ಫ್ಯಾಮಿಲಿ ಸೂಸೈಡ್​​.. ನೆರೆಯವರು ನಾಪತ್ತೆ!

ಮಕ್ಕಳಿಗೆ ಶಿಕ್ಷಣ ಕೊಡಿಸಲು ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿಯಿಂದ ನಗರಕ್ಕೆ ಬಂದಿದ್ದರು.. ಕಳೆದ ಒಂದು ವರ್ಷದ ಹಿಂದೆ ಶಿರಾ ತಾಲ್ಲೂಕಿನ ಲಕ್ಕನಹಳ್ಳಿಯಿಂದ ಬಂದು ನಗರದಲ್ಲಿ ನೆಲೆಸಿದ್ದರು.. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕನಸು ನನಸಾಗಲೇ ಇಲ್ಲ.. ಕಬಾಬ್ ಮಾರಾಟ ಮಾಡಿ, ಅದರಲ್ಲಿ ಬಂದ ಹಣದಲ್ಲಿ ಮನೆ ಬಾಡಿಗೆ ಕಟ್ಟಿ ಕುಟುಂಬ ನಿರ್ವಹಣೆ ಮಾಡ್ತಿದ್ದರು. ಇನ್ನೊಂದ್ಕಡೆ, ಇಡೀ ಕುಟುಂಬ ಸಾವಿನ ಬೆನ್ನಲ್ಲೆ ನೆರೆಯ ಕುಟುಂಬಗಳು ನಾಪತ್ತೆ ಆಗಿವೆ.

ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆಗೆ ಐವರ ಸಂಸಾರ ಮುನ್ನಡೆಸಲು ನಡೆಸುತ್ತಿದ್ದ ವ್ಯಾಪಾರದಿಂದ ಬರುವ ಹಣ ಸಾಲುತ್ತಿರಲಿಲ್ಲ. ಅದಕ್ಕಾಗಿ ಸಾಲ ಮಾಡಿದ್ದ ಕುಟುಂಬಕ್ಕೆ ಈಗ ಅದೇ ಸಾಲವೇ ಶೂಲವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment