newsfirstkannada.com

ಪರಂ ಮಾತ್ರವಲ್ಲ.. ಒಟ್ಟು ಐವರು ಪ್ರಭಾವಿ ನಾಯಕರಿಂದ DCM ಪಟ್ಟಕ್ಕೆ ಪಟ್ಟು.. ಖರ್ಗೆಗೆ ಡಿಸಿಷನ್ ಕಗ್ಗಂಟು..!

Share :

19-05-2023

  ಒಕ್ಕಲಿಗ ನಾಯಕರಿಗೆ ಮಾತ್ರ ಡಿಸಿಎಂ ಪಟ್ಟನಾ?

  ದಲಿತ ಸಮುದಾಯಕ್ಕೆ ಸ್ಥಾನ ನೀಡಲು ಬಿಗಿಪಟ್ಟು

  ಹೈಕಮಾಂಡ್ ಮುಂದೆ ಪ್ರಬಲ ಆಕಾಂಕ್ಷಿಗಳ ಫೈಟ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಡಿಸಿಎಂ ಹುದ್ದೆ ಸೃಷ್ಟಿ ಮಾಡಿರೋದಕ್ಕೆ ಕಾಂಗ್ರೆಸ್​ ಹೈಕಮಾಂಡ್ ವಿರುದ್ಧ ಅಸಮಾಧಾನ ಭುಗಿಲೆದ್ದಿದೆ. ಶಿವಕುಮಾರ್​ಗೆ ಮಾತ್ರವಲ್ಲ, ನಮಗೂ ಡಿಸಿಎಂ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್​ನ ಹಿರಿಯ ನಾಯಕರು ವರಸೆ ಹೂಡಿದ್ದಾರೆ.

ಸಮುದಾಯವಾರು ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ಪ್ರಬಲ ನಾಯಕರು ಆಗ್ರಹಿಸಿದ್ದಾರೆ. ಪಕ್ಷದಲ್ಲಿನ ನಮ್ಮ ಸೇವೆ ಮತ್ತು ಹಿರಿತನಕ್ಕೆ ಗೌರವ ನೀಡಿ, ಡಿಸಿಎಂ ಸ್ಥಾನ ನೀಡವಂತೆ ಆಗ್ರಹಿಸಿದ್ದಾರೆ. ಮಾತ್ರವಲ್ಲ ಮುಂದಿನ ದಿನಗಳಲ್ಲಿ ಹೈಕಮಾಂಡ್​ ನಾಯಕರ ಭೇಟಿಗೂ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪ್ರಬಲ ಆಕಾಂಕ್ಷಿಗಳು:

 1. ಡಾ.ಜಿ. ಪರಮೇಶ್ವರ್  – ದಲಿತ ಸಮುದಾಯ, ಮಾಜಿ ಡಿಸಿಎಂ
 2. ಶಾಮನೂರು ಶಿವಶಂಕರಪ್ಪ- ಲಿಂಗಾಯತ ಸಮುದಾಯ, ಹಿರಿಯ ನಾಯಕ
 3. ಸತೀಶ್ ಜಾರಕಿಹೊಳಿ- ವಾಲ್ಮೀಕಿ ಸಮುದಾಯ, ಕಾರ್ಯಾಧ್ಯಕ್ಷ ಅನುಭವ
 4. ಎಂ.ಬಿ ಪಾಟೀಲ್- ಲಿಂಗಾಯತ ಸಮುದಾಯ,  ಪ್ರಚಾರ ಸಮಿತಿ ಅಧ್ಯಕ್ಷ
 5. ಲಕ್ಷ್ಮಣ ಸವದಿ – ಲಿಂಗಾಯತ ಸಮುದಾಯ, ಮಾಜಿ ಡಿಸಿಎಂ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರಂ ಮಾತ್ರವಲ್ಲ.. ಒಟ್ಟು ಐವರು ಪ್ರಭಾವಿ ನಾಯಕರಿಂದ DCM ಪಟ್ಟಕ್ಕೆ ಪಟ್ಟು.. ಖರ್ಗೆಗೆ ಡಿಸಿಷನ್ ಕಗ್ಗಂಟು..!

https://newsfirstlive.com/wp-content/uploads/2023/05/Kharge-7.jpg

Load More