newsfirstkannada.com

ಬಳ್ಳಾರಿ ಜೈಲಿನ ಹೆಸರು ಕೇಳಿಯೇ ನಡುಗಿದ ದರ್ಶನ್.. 2ನೇ ಅಂಡಮಾನ್‌ ಕಾರಾಗೃಹದಲ್ಲಿದೆ 5 ಭಯಗಳು!

Share :

Published August 28, 2024 at 10:24pm

    ಬಳ್ಳಾರಿ ಜೈಲು ಹೆಸರು ಕೇಳಿ ಬೆಚ್ಚಿ ಬಿದ್ದಿದ್ದು ಏಕೆ ಆರಡಿ ಕಟೌಟ್​?

    ಬಳ್ಳಾರಿಗೆ ಕಾರಾಗೃಹಕ್ಕಿದೆ ಶತಮಾನಗಳ ಕರಾಳ ಕುಖ್ಯಾತಿ ಚರಿತ್ರೆ!

    ಬಳ್ಳಾರಿ ಜೈಲನ್ನು ಎರಡನೇ ಅಂಡಮಾನ್ ಜೈಲು ಅನ್ನೋದ್ಯಾಕೆ?

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಅನುಭವಿಸಿದ್ದಕ್ಕೆ ದರ್ಶನ್​​ ಬಾಣಲೆಯಿಂದ ಡೈರೆಕ್ಟಾಗಿ ಬೆಂಕಿಗೆ ಬಿದ್ದಿದ್ದಾರೆ. ಕುಖ್ಯಾತ ರೌಡಿಗಳ ಜೊತೆ ರಾಜಾಧಿರಾಜನಂತೆ ಕೂತ ಕಾರಣಕ್ಕೆ ಡಿ ಗ್ಯಾಂಗ್​​ ರಾಜ್ಯ ಮೂಲೆ ಮೂಲೆಗಳಿಗೆ ದಿಕ್ಕಾಪಾಲಾಗಿದೆ. ಈ ಪೈಕಿ ಡಿ ಗ್ಯಾಂಗ್​ ಲೀಡರ್​ ದರ್ಶನ್​​ ಶಿಫ್ಟ್​ ಆಗಬೇಕಾದ ಜೈಲಿನ ಹೆಸರನ್ನ ಕೇಳಿಯೇ ನಡುಗಿ ಹೋಗಿದ್ದಾರೆ. ಅಷ್ಟಕ್ಕೂ ಬಳ್ಳಾರಿ ಜೈಲಿಗೆ ಅಷ್ಟು ಭಯಾನಕ ಚರಿತ್ರೆ ಇದ್ಯಾ? ಬಳ್ಳಾರಿ ಬಂಧೀಖಾನೆಯ ಭೀಕರತೆಯನ್ನ ಕಣ್ಣಾರೆ ಕಂಡಿದ್ರಾ ದರ್ಶನ್? ಬಳ್ಳಾರಿ ಜೈಲಿನಲ್ಲೂ ದರ್ಶನ್​ಗೆ ಭಯ ಕಾಡ್ತಿದ್ಯಾ? ಅಲ್ಲಿರೋ ಆ ಐದು ಅಪಾಯಗಳಾದ್ರೂ ಏನು? ಇಲ್ಲಿದೆ ಅದರ ಕುರಿತು ಒಂದು ವರದಿ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್‌.. ತನಗಷ್ಟೇ ಬೇಲ್​ ಪಡೆಯಲು ಪವಿತ್ರಾ ಪ್ಲಾನ್; ಏನದು?

ಈ ಜೈಲಲ್ಲಿ ಬಾಲ ಬಿಚ್ಚಿದ್ರೆ ಚಚ್ಚಿ ಬಿಸಾಕ್ತಾರೆ. ಕೈ ಬೆಚ್ಚಗೆ ಮಾಡಿದ್ರೆ ಮಂಚಾನೂ ಕೊಡ್ತಾರೆ. ಗರ್ಮಾಗರಂ ಗಾಂಧಿ ನೋಟು ತೋರಿಸಿದ್ರೆ ಸ್ವರ್ಗವನ್ನೇ ತಂದಿಳಿಸ್ತಾರೆ. ಯಾರು? ಯೂನಿಫಾರ್ಮ್​​ ತೊಟ್ಕೊಂಡು ಕ್ರಿಮಿನಲ್ಸ್​ಗೂ ಬಕೆಟ್​​ ಹಿಡಿಯೋ ಭ್ರಷ್ಟ ಅಧಿಕಾರಿಗಳು. ವೃತ್ತಿ ಧರ್ಮವನ್ನೂ ಮೂರು ಕಾಸಿಗೆ ಮಾರಿಕೊಳ್ಳೋ ಮೂರು ಬಿಟ್ಟ ಜೈಲಾಧಿಕಾರಿಗಳು. ಇಂಥವರಿಂದ್ಲೇ ದರ್ಶನ್​​ ವಿಲ್ಸನ್​ ಗಾರ್ಡನ್​ ನಾಗನ ದರ್ಬಾರ್​​​ನಲ್ಲಿ ಮಿಂಚಿದ್ರು. ಫೋಟೋ. ವಿಡಿಯೋ ಮೂಲಕ ವೈರಲ್ ಆಗಿದ್ದು. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದು. ಅಸಲಿಗೆ ಬಳ್ಳಾರಿ ಜೈಲು ಅನ್ನೋ ಶಬ್ಧ ಕಿವಿಗೆ ಬಿದ್ದ ಕೂಡಲೇ ಆನ್​​ ಸ್ಕ್ರೀನ್ ಐರಾವತ ಗಡಗಡ ನಡುಗಿ ಹೋಗಿದ್ದಾನೆ.

7 ವರ್ಷದ ಹಿಂದೆ ಹೀರೋ ಆಗಿ ಎಂಟ್ರಿ.. ಈಗ ಕೈದಿಯಾಗಿ ಎಂಟ್ರಿ!
ಏಳೇ ಏಳು ವರ್ಷಗಳ ಹಿಂದೆ ದರ್ಶನ್​​ ಬಳ್ಳಾರಿ ಜೈಲಿಗೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ರು. ದರ್ಶನ್​ ಚೌಕ ಸಿನಿಮಾದಲ್ಲಿ ಕೈದಿಯಾಗಿ ವಿಶೇಷ ಪಾತ್ರದಲ್ಲಿ ನಟಿಸಿದ್ರು. 2017ರಲ್ಲಿ ಇದೇ ಬಳ್ಳಾರಿ ಜೈಲಿನಲ್ಲೇ ದರ್ಶನ್​​​ ಶೂಟಿಂಗ್​​ ಸೀನ್ ನಡೆದಿತ್ತು. ತರುಣ್​ ಸುಧೀರ್​ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾದಲ್ಲಿ ದರ್ಶನ್​ ನಟಿಸಿದ್ರು. ಆ ಸಂದರ್ಭವೇ ದರ್ಶನ್​ ಬಳ್ಳಾರಿ ಜೈಲಿನ ರುಚಿ ಕಂಡಿದ್ರು. ಹಾಗಾಗಿಯೇ ಇದೀಗ ವಿಚಾರಣಾಧೀನ ಕೈದಿಯಾಗಿ ಬಳ್ಳಾರಿ ಜೈಲಿಗೆ ಹೋಗೋದಕ್ಕೂ ದರ್ಶನ್​​ ಹಿಂದೇಟು ಹಾಕಿದ್ರು. ಇಲ್ಲೇ ಇರ್ತೀನಿ ಸರ್, ಬೇಡ ಸರ್, ತುಂಬಾ ಕಷ್ಟ ಆಗುತ್ತೆ. ಇಲ್ಲೇ ಇರೋದಕ್ಕೆ ಅವಕಾಶ ಮಾಡಿಕೊಡಿ ಅಂತ ಅಳಲು ತೋಡಿಕೊಂಡಿದ್ರು.

ನಮ್ಮಣ್ಣ ‘ರಿಯಲ್ ಸಂಗೊಳ್ಳಿ ರಾಯಣ್ಣ’ ಅಂತ ಕಾಯ್ತಿರುವ ಫ್ಯಾನ್ಸ್!
ಬಳ್ಳಾರಿ ಜೈಲಿನ ವಿಷಯ ಕೇಳಿಯೇ ದರ್ಶನ್​​ ಬೆಚ್ಚಿಬಿದ್ದಿದ್ದು ಒಂದು ಕಡೆಯಾದ್ರೆ. ದರ್ಶನ್​ ಫ್ಯಾನ್ಸ್​ ಅಂತೂ ಬಾಸ್​​ ಬರ್ತಾರೆ ನೋಡ್ಲೇಬೇಕು ಅಂತಾ ಜಮಾಯಿಸಿದ್ರು. ಹಲವು ಗಂಟೆಗಳ ಕಾಲ ದರ್ಶನ್​ ಫ್ಯಾನ್ಸ್​​ ಜೈಲಿನ ಮುಂದೆಯೇ ನಿಂತಿದ್ರು. ವಿಶೇಷ ಅಂದ್ರೆ ಈ ಭಾಗದಲ್ಲಿ ದರ್ಶನ್​​ಗೆ ಹೆಚ್ಚು ಡೈ ಹಾರ್ಡ್​ ಫ್ಯಾನ್ಸ್​ ಇರೋದೂ ಸಹ ಒಂದು ರೀತಿ ಅಪಾಯದ ಮುನ್ಸೂಚನೆಯೇ. ಇದಕ್ಕೆ ಪೂರಕ ಎನ್ನುವಂತೆ ಅಲ್ಲೊಬ್ಬ ಅಭಿಮಾನಿ ಆಡಿದ ಮಾತುಗಳನ್ನ ಕೇಳಿಸಿಕೊಂಡ್ರೆ ಎಂಥವರೂ ಕೂಡ ಬೆಚ್ಚಿ ಬೀಳ್ತಾರೆ . ನಮ್ಮಣ್ಣ ಸಂಗೋಳ್ಳಿ ರಾಯಣ್ಣ ಅಂತ ಈಗಾಗಲೇ ಬಳ್ಳಾರಿಯಲ್ಲಿ ಅಭಿಯಾನಿಯೊಬ್ಬ ಅಬ್ಬರಿಸಿದ್ದಾನೆ. ಎಂಥಾ ಮ್ಯಾಚಿಂಗು ಅಂತೀರಾ? ನೆವರ್ ಬಿಫೋರ್​ ಎವರ್​ ಆಫ್ಟರ್​ ಇಂಥಾ ಫ್ಯಾನ್​ ಬೇಸ್​ ಇದು.

ಇದನ್ನೂ ಓದಿ: ನಾಚಿಕೆಯಾಗಬೇಕು ನಿನಗೆ.. ಹೃತಿಕ್ ರೋಷನ್ ವಿರುದ್ಧ ಸಿಡಿದೆದ್ದ ಅಭಿಮಾನಿಗಳು; ಕಾರಣ ಈ ವಿಡಿಯೋ!

‘ಬಾಸ್​​ ಇಲ್ಲಿ ಬಂದ್ರೆ ಇನ್ನಷ್ಟು ಕೆಟ್ಟು ಹೋಗ್ತಾರೆ” ಫ್ಯಾನ್​​ ಬೇಸರ!
ಬಳ್ಳಾರಿ ಜೈಲಿಗೆ ದರ್ಶನ್​​ ಬಾಸ್​ ಬಂದ್ರೆ ಮತ್ತಷ್ಟು ಕೆಟ್ಟೋಗ್ತಾರೆ. ಇಂಥದ್ದೊಂದು ಮಾತನ್ನ ಹೇಳ್ತಿರೋದೂ ಸಹ ದರ್ಶನ್​​ ಫ್ಯಾನ್​​. ಆರು ವರ್ಷಗಳ ಕಾಲ ಇದೇ ಜೈಲಿನಲ್ಲಿ ಶಿಕ್ಷೆ ಅನುಭವಿಸಿ ಬಂದಿರೋ ಜಯಶೀಲ ಇಂಥದ್ದೊಂದು ಸುಳಿವು ನೀಡುತ್ತಿದ್ದಾನೆ. ದರ್ಶನ್​​ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆಯೇ? ಹಾಗಾಗಿಯೇ ದರ್ಶನ್​ ಫ್ಯಾನ್ ಜಯಶೀಲ್​ ಹೀಗೆ ಹೇಳಿದ್ರಾ? ಈ ಎಲ್ಲಾ ವಿಚಾರ ಗೊತ್ತಿದ್ದರಿಂದಲೇ ಆ ಜೈಲು ಬೇಡ ಸರ್ ಅಂತ ದರ್ಶನ್​ ಗೋಗರೆದರಾ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಮತ್ತದೇ ಬಳ್ಳಾರಿ ಜೈಲಿನ ಭಯಾನಕ ಚರಿತ್ರೆ.

ಬಳ್ಳಾರಿ ಜೈಲಿನ ಭಯ 1
ಪತ್ನಿ  ವಿಜಯಲಕ್ಷ್ಮಿಯಿಂದ ತುಂಬಾ ದೂರ! ಇದೇ ಮೊದಲ ಭಯ

ಪರಪ್ಪನ ಅಗ್ರಹಾರ ಜೈಲಿನಿಂದ ಸರಿಯಾಗಿ ಲೆಕ್ಕ ಹಾಕಿದ್ರೆ ಸುಮಾರು 326 ಕಿಲೋ ಮೀಟರ್​ ಬಳ್ಳಾರಿ ಜೈಲಿದೆ.. ಬೆಂಗಳೂರಿನ ಜೈಲಿನಲ್ಲಿದ್ದಾಗಲೇ ಕುಟುಂಬಸ್ಥರನ್ನ ನೋಡೋದಕ್ಕೆ ವಾರಕ್ಕೊಮ್ಮೆ ದರ್ಶನ್​ ಕಾಯಬೇಕಿತ್ತು. ಅದ್ರಲ್ಲೂ, ಪತ್ನಿ ವಿಜಯಲಕ್ಷ್ಮಿ ವಾರನೋ ಅಥವಾ 15 ದಿನಗಳಿಗೊಮ್ಮೆಯೋ ದರ್ಶನ್​ನ ಹೋಗಿ ಭೇಟಿ ಮಾಡ್ತಾನೆ ಇದ್ದಾರೆ. ಧೈರ್ಯ ತುಂಬ್ತಾನೆ ಇದ್ದಾರೆ. ಇದೀಗ ದೂರದ ಬಳ್ಳಾರಿಗೆ ದರ್ಶನ್​​ ಶಿಫ್ಟ್​ ಆಗಿಬಿಟ್ರೆ ಕೇಸ್​​ನಿಂದ ಬಚಾವ್ ಮಾಡೋಕೆ ಹರಸಾಹಸ ಪಡ್ತಿರೋ ಪತ್ನಿಗೆ ಭಾರೀ ಕಷ್ಟವಾಗಲಿದೆ. ಮಗನನ್ನ ನೋಡಿ ಮುದ್ದಾಡಬೇಕು ಅನಿಸಿದ್ರೂ ಸುಲಭಕ್ಕೆ ಸಾಧ್ಯವಾಗೋದಿಲ್ಲ.

ಇದನ್ನೂ ಓದಿ: ಆ ಜೈಲಿಗೆ ಮಾತ್ರ ಕಳಿಸ್ಬೇಡಿ.. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗ್ಯಾಂಗ್ ನರಳಾಟ; ಬೇಡಿಕೊಂಡಿದ್ದೇನು?

326 ಕಿಲೋಮೀಟರ್​ಗಳ ಅಪ್​ ಌಂಡ್​ ಡೌನ್​ ಜರ್ನಿ ಸುಲಭವೂ ಅಲ್ಲ.ಇದೆಲ್ಲಕ್ಕಿಂತಲೂ ಮಿಗಿಲಾಗಿ ಅತ್ಯಾಪ್ತರ ಮೂಲಕ ಕೊಲೆ ಕೇಸ್​​ನಿಂದ ಪಾರಾಗೋದಕ್ಕೆ ಮಾತುಕತೆ ನಡೆಸೋದೂ ಕೂಡ ದರ್ಶನ್​​ ಪಾಲಿಗೆ ಇನ್ನಷ್ಟು ಕಷ್ಟವಾಗಲಿದೆ. ಪರಪ್ಪನ ಅಗ್ರಹಾರ ಜೈಲಿನಿಂದ 20 ಕಿಲೋ ಮೀಟರ್​ ದೂರವಿರೋ ಗಾಂಧಿನಗರದ ಜನರೇ ದರ್ಶನ್​​ರನ್ನ ಮರೆತುಬಿಟ್ಟಿದ್ದಾರೆ. ಇದೀಗ 326 ಕಿಲೋ ಮೀಟರ್​ ದೂರಕ್ಕೆ ದರ್ಶನ್​ ಹೋಗ್ಬಿಟ್ರೆ ಗಾಂಧಿನಗರ ದರ್ಶನ್​ ಅಂದ್ರೆ ಯಾರು ಅಂತ ಕೇಳೋ ರೀತಿ ಬದಲಾಗಿಬಿಡಬಹುದೇನೋ.

ಬಳ್ಳಾರಿ ಜೈಲಿನ ಭಯ 2
ಇದು 2ನೇ ಅಂಡಮಾನ್ ಜೈಲು ಎಂಬ ಕುಖ್ಯಾತಿಯಿದೆ
ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಬಳ್ಳಾರಿ ಜೈಲಿಗೆ ಬರೋಬ್ಬರಿ 140 ವರ್ಷಗಳ ಕರಿ ನೆರಳಿನ ಇತಿಹಾಸವಿದೆ. ಅಂಡಮಾನ್ ಜೈಲಿಗೆ ಕರಿನೀರಿನ ಜೈಲು ಅನ್ನೋ ರಣ ರಕ್ಕಸ ಅಧ್ಯಾಯ ಇರುವಂತೆಯೇ ಬಳ್ಳಾರಿ ಜೈಲಿನ ಬಗ್ಗೆಯೂ ಒಂದು ಭಯವಿದೆ. ಬಳ್ಳಾರಿ ಜೈಲನ್ನ 2ನೇ ಅಂಡಮಾನ್​ನ ಕಾಲಪಾನಿ ಜೈಲು ಅಂತಲೇ ಹೇಳಲಾಗುತ್ತೆ. ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ 1872ರಲ್ಲಿ ಮೊದಲ ಕಾರಾಗೃಹವನ್ನ ಸ್ಥಾಪಿಸಲಾಯಿತು. ಬ್ರಿಟಿಷರೇ ಭಾರತ ಬಿಟ್ಟು ಹೋದರೂ. ಅವರು ಕೊಡುತ್ತಿದ್ದ ಕ್ರೂರ ಶಿಕ್ಷೆಗಳ ಕಾರಣಕ್ಕೇ ಬಂದ ಬಳ್ಳಾರಿ ಜೈಲಿನ ಭಯ ಇನ್ನೂ ಹೋಗಿಲ್ಲ. ಈ ಕ್ಷಣಕ್ಕೂ ಕೆಲವು ಹಿರಿಯರು ಬೈದಾಡಬೇಕಾದ್ರೆ ನೀರಿಲ್ಲದ ಬಳ್ಳಾರಿ ಜೈಲಿಗೆ ಹಾಕಿಸ್ತೀನಿ ನಿನ್ನ ಅಂತ ಗದರೋದನ್ನು ಕೇಳಿರ್ತೀರಿ. ಒಂದು ಕಾಲಕ್ಕೆ ಈ ಜೈಲಿನಲ್ಲಿ ಕೈದಿಗಳಿಗೆ ಕೊಡುತ್ತಿದ್ದ ಶಿಕ್ಷೆಯ ವಿವರಗಳೇ ಈ ಕ್ಷಣಕ್ಕೂ ಆ ಜೈಲಿನ ಬಗ್ಗೆ ಭಯ ಮೂಡಿಸುತ್ತೆ. ದರ್ಶನ್​​ಗೂ ಕೂಡ ಇದೀಗ ಇಂಥದ್ದೇ ಭಯ

ಬಳ್ಳಾರಿ ಜೈಲಿನ ಭಯ 3
ಜೈಲುವಾಸ ಕಠಿಣವಾಗುವ ಸಾಧ್ಯತೆ ಹೆಚ್ಚು

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿದ ಕಾರಣಕ್ಕೆ ಸರ್ಕಾರಕ್ಕೂ ಮುಖಭಂಗವಾಯ್ತು. ಪೊಲೀಸ್​ ಇಲಾಖೆಯೂ ತಲೆ ತಗ್ಗಿಸುವಂತಾಯ್ತು. 9 ಜೈಲಧಿಕಾರಿಗಳ ಅಮಾನತು ಕೂಡ ಆಗಿದೆ.. ಅವರ ವಿರುದ್ಧ ತನಿಖೆಯೂ ನಡೀತಿದೆ. ಅಧಿಕಾರಿ ವರ್ಗದ ಮೇಲೆ ಇಂಥದ್ದೊಂದು ಗಾಯ ಆದ್ಮೇಲೆ ದರ್ಶನ್​​ರನ್ನ ಬಳ್ಳಾರಿ ಜೈಲಿನಲ್ಲಿ ಯಾವ ರೀತಿ ಟ್ರೀಟ್​​ ಮಾಡಬಹುದು ಅನ್ನೋ ಪ್ರಶ್ನೆಯೇ ಕೌತುಕ ಹುಟ್ಟಿಸುತ್ತಿದೆ. ಜೈಲು ಅಂದ್ರೆನೇ ಕಷ್ಟ. ಅಂಥಾದ್ರಲ್ಲಿ ಬಳ್ಳಾರಿ ಜೈಲು ಅಂದ್ರೆ ಸುಮ್ನೆನಾ? ಅದ್ರಲ್ಲೂ ಪರಪ್ಪನ ಅಗ್ರಹಾರ ಫೈವ್​​ಸ್ಟಾರ್​ ರೆಸ್ಟೋಬಾರ್​ ಆಗಿತ್ತು ಅನ್ನೋ ಕಾರಣಕ್ಕೇ ಶಿಫ್ಟ್​ ಆಗ್ತಿರೋ ದರ್ಶನ್​​ಗೆ ಇಲ್ಲಿ ಎಂಥಾ ಟ್ರೀಟ್​​ಮೆಂಟ್​ ಸಿಗಬಹುದು. ಪರಪ್ಪನ ಅಗ್ರಹಾರದಷ್ಟೇ ಸುಲಭವಾಗಿ ಇಲ್ಲಿ ಎಲ್ಲವೂ ಸಿಗುತ್ತೆ ಅನ್ನೋ ಆಸೆಯಲ್ಲಂತೂ ದರ್ಶನ್​​ ಇರೋಕಾಗಲ್ಲ.

ಬಳ್ಳಾರಿ ಜೈಲಿನ ಭಯ 4
ನೇಣುಗಂಬದ ವ್ಯವಸ್ಥೆ ಇರೋ ಬಂಧಿಖಾನೆ

ದೇಶದ ಕೆಲವೇ ಕೆಲವು ಜೈಲಿನಲ್ಲಿ ನೇಣುಗಂಬದ ವ್ಯವಸ್ಥೆ ಇದೆ. ಅಂಥಾ ವಿಶೇಷ ವ್ಯವಸ್ಥೆ ಬಳ್ಳಾರಿ ಜೈಲಿನಲ್ಲೂ ಇದೆ. ಒಂದಷ್ಟು ಜನಕ್ಕೆ ನೇಣುಗಂಬದ ಭಯ ಇರುತ್ತೆ. ಇನ್ನೊಂದಷ್ಟು ಜನಕ್ಕೆ ನೇಣುಗಂಬಕ್ಕೆ ಬಲಿಯಾದವರು ನರನಾಟ ನೆನದು ನಡುಗುತ್ತಾರೆ. ಇನ್ನೂ ಕೆಲವರು ಹೀಗೆ ನರಳಿ ನರಕ ಕಂಡು ಪ್ರಾಣ ಬಿಟ್ಟವರ ಆತ್ಮ ಇಲ್ಲೇ ಅಲೆದಾಡುತ್ತಾ ಇರುತ್ತೆ ಅನ್ನೋ ಜೈಲ್​​ಮೇಟ್​ಗಳ ಕಟ್ಟುಕತೆಯ ಮಾತುಗಳಿಗೇ ಹೆದರಿರುತ್ತಾರೆ.. ಇಂಥದ್ದೇ ಭಯ ಅಲ್ಲಿಗೆ ಹೋದ್ಮೇಲೆ ದರ್ಶನ್​ಗೆ ಬಂದರೂ ಬರಬಹುದು.

ಬಳ್ಳಾರಿ ಜೈಲಿನ ಭಯ 5
ಬಳ್ಳಾರಿ ಜೈಲಲ್ಲೂ ಮತ್ತೆ ಕುಖ್ಯಾತ ರೌಡಿಗಳ ಸಹವಾಸ ಸಂಕಷ್ಟ
ಈಗಾಗಲೇ ವಿಲ್ಸನ್​​ ಗಾರ್ಡನ್​ ನಾಗ, ಬೇಕರಿ ರಘು ಅನ್ನೋ ಕುಖ್ಯಾತ ರೌಡಿಗಳ ಆತಿಥ್ಯದ ಅತಿರೇಕದ ಅಂತರ್ಯುದ್ಧಕ್ಕೆ ಸಿಲುಕಿ ಸಂಕಷ್ಟ ಪಡುತ್ತಿದ್ದಾರೆ ದರ್ಶನ್. ಇನ್ಮುಂದೆ ಈ ರೌಡಿಗಳ ಸಹವಾಸವೇ ಬೇಡಪ್ಪ ಅನ್ನೋ ಮನಃಸ್ಥಿತಿಗೆ ದರ್ಶನ್​​ ಬಂದಿದ್ರೆ ಬಚಾವ್. ಇಲ್ಲಾಂದ್ರೆ ಬಳ್ಳಾರಿ ಜೈಲು ಮತ್ತಷ್ಟು ದುಃಸ್ಥಿತಿಯ ಪ್ರಪಾತಕ್ಕೆ ದರ್ಶನ್​ರನ್ನ ತಳ್ಳಿದ್ರೂ ಅಚ್ಚರಿ ಇಲ್ಲ. ಮತ್ತಷ್ಟು ನಟೋರಿಯಸ್ ರೌಡಿಗಳನ್ನ ಕೂಡ ಇಲ್ಲಿ ಇರಿಸಲಾಗಿತ್ತು. ಭೀಮಾತೀರದ ಹನುಮಂತ ನಾಯ್ಕ್, ಬೆಂಗಳೂರಿನ ಕೆಜೆಹಳ್ಳಿ, ಡಿಜೆಹಳ್ಳಿ ಪ್ರಕರಣದಲ್ಲಿನ 80 ಆರೋಪಿಗಳು, ಹುಲಿಹೈದರ್ ಗಲಭೆ, ಕೊಲೆ ಪ್ರಕರಣದ ಆರೋಪಿಗಳನ್ನೆಲ್ಲ ಇದೇ ಜೈಲಿನಲ್ಲಿ ಇರಿಸಲಾಗಿದೆ. ಇವರ ಸಹವಾಸ ದರ್ಶನ್​​ರನ್ನ ಇನ್ನಷ್ಟು ಸಂಕಷ್ಟಕ್ಕೆ ದೂಡಬಹುದು ಅನ್ನೋ ಭಯ ಕೆಲವು ಅಭಿಮಾನಿಗಳನ್ನ ಕಾಡದೇ ಇರೋದಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿ ಜೈಲಿನ ಹೆಸರು ಕೇಳಿಯೇ ನಡುಗಿದ ದರ್ಶನ್.. 2ನೇ ಅಂಡಮಾನ್‌ ಕಾರಾಗೃಹದಲ್ಲಿದೆ 5 ಭಯಗಳು!

https://newsfirstlive.com/wp-content/uploads/2024/08/Darshan-4.jpg

Load More