ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಗ್ಯಾಂಗ್ ಬಳ್ಳಾರಿ ಜೈಲಿನಲ್ಲೇ ಇರೋದು!
ಬಳ್ಳಾರಿ ಜೈಲಲ್ಲಿ ಗಾಂಜಾ ಕೊಟ್ಟು ಕೆಡಿಸೋ ಗ್ಯಾಂಗ್ ಇದೆಯಾ, ಹೇಗೆ?
ಹೆಚ್ಚು ಅಂಧಾಭಿಮಾನಿಗಳ ಏರಿಯಾದಲ್ಲಿ ದರ್ಶನ್ ಹೋಗುತ್ತಿದ್ದಾರೆ !
ಬಳ್ಳಾರಿ: ದರ್ಶನ್ಗೆ ಬಳ್ಳಾರಿ ಜೈಲಿನಲ್ಲಿ ಎಂತೆಂಥಾ ಅಪಾಯಗಳು ಎದುರಾಗಬಹುದು. ದರ್ಶನ್ ಪಾಲಿಗೆ ಪರಪ್ಪನ ಅಗ್ರಹಾರಕ್ಕಿಂತ್ಲೂ ಹೆಚ್ಚೇ ಡೇಂಜರಸ್ ಬಳ್ಳಾರಿ ಜೈಲು. ಮತ್ತಷ್ಟು ರಾಜಾತಿಥ್ಯ. ಮಗದಷ್ಟು ರೌಡಿ ಸಹವಾಸ ಹೆಚ್ಚಾದ್ರೆ ಏನಾಗುತ್ತೆ ಗೊತ್ತಾ? ದರ್ಶನ್ಗೆ ಮಹಾ ಗಿಫ್ಟ್ ಕೊಟ್ರೂ ಅಚ್ಚರಿ ಇಲ್ಲ.

ಪರಪ್ಪನ ಅಗ್ರಹಾರದ ಮಚ್ಚು ಲಾಂಗಿನ ಮಚ್ಚಾಗಳಿಂದ್ಲೇ ದರ್ಶನ್ ಬೆಚ್ಚಿಬಿದ್ದಿದ್ದಾರೆ.. ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿ ಏದುಸಿರು ಬಿಡುತ್ತಿದ್ದಾರೆ. ಆಂಥಾದ್ರಲ್ಲಿ, ಗನ್ ಹಿಡಿಯೋ ಪಾತಕಿಗಳ ಫ್ರೆಂಡ್ಶಿಫ್ ಸಿಕ್ಬಿಟ್ರೆ ಕಥೆ ಏನು? ಬಳ್ಳಾರಿ ಜೈಲಿನಲ್ಲಿ ಅಂಡರ್ವರ್ಲ್ಡ್ ಪಾತಕಿಗಳಿದ್ದಾರೆ. ಭೂಗತ ಪಾತಕಿ ವಿಕ್ಕಿ ಶೆಟ್ಟಿ ಗ್ಯಾಂಗ್ ಹುಡುಗರು ಇದೀಗ ಬಳ್ಳಾರಿ ಜೈಲಿನಲ್ಲೇ ಇದ್ದಾರೆ. ನಿತ್ಯಾನಂದ, ಗಣೇಶ್, ಆಕಾಶ್, ದೀಕ್ಷಿತ್ ಸೇರಿ ವಿಕ್ಕಿ ಶೆಟ್ಟಿ ಬಳ್ಳಾರಿ ಜೈಲಲ್ಲಿ ಮುದ್ದೆ ಮುರೀತಿದ್ದಾರೆ. ಈ ಸಹವಾಸ ಏನಾದ್ರೂ ದರ್ಶನ್ಗೆ ಸಿಕ್ಕಿದ್ರೆ ಮತ್ತಷ್ಟು ಸಂಕಷ್ಟ ಗ್ಯಾರಂಟಿ ಎನ್ನಲಾಗುತ್ತಿದೆ.. ಹಾಗಾಗಿಯೇ ದರ್ಶನ್ಗೆ ಬಳ್ಳಾರಿ ಜೈಲಿನಲ್ಲೂ ಅಪಾಯಗಳಿವೆ.
ಬಳ್ಳಾರಿ ಜೈಲಲ್ಲಿ ಗಾಂಜಾ ಕೊಟ್ಟು ಕೆಡಿಸೋ ಗ್ಯಾಂಗ್ ಇದೆಯಾ?
ಪರಪ್ಪನ ಅಗ್ರಹಾರಕ್ಕಿಂತ ಕೆಟ್ಟ ವ್ಯವಸ್ಥೆ ಬಳ್ಳಾರಿ ಜೈಲಿನಲ್ಲಿದೆ ಅನ್ನೋದು ಅಲ್ಲಿಂದ ಆಚೆ ಬಂದಿರೋ ಕೈದಿಯೇ ಹೇಳ್ತಿರೋದು. ದುಡ್ಡು ಕೊಟ್ರೆ ನಶೆ ಏರಿಸಿಕೊಳ್ಳೋಕೆ ಬರೀ ಸಿಗರೇಟ್ ಅಲ್ಲ. ಗಾಂಜಾನೂ ಸಿಗುತ್ತಂತೆ. ಸ್ವಲ್ಪ ಹೆಚ್ಚಿನ ದುಡ್ಡು ಜಾಸ್ತಿನೇ ಕೊಟ್ರೆ ಟಿವೀಲಿ ಸ್ಪೆಷಲ್ ಸಿನಿಮಾನೂ ಹಾಕ್ತಾರೆ. ದರ್ಶನ್ರನ್ನ ಬಳ್ಳಾರಿಗೆ ಕರೆತಂದ್ರೆ ಮತ್ತೆ ಕೆಟ್ಟು ಹೋಗೋ ಡೇಂಜರಸ್ ವಾತಾವರಣ ಇದೆ. ಪರಪ್ಪನ ಅಗ್ರಹಾರ ಜೈಲಿಗಿಂತ ಬಳ್ಳಾರಿ ಜೈಲಲ್ಲಿ ಏನೂ ಕಡಿಮೆ ಇಲ್ಲ ಅನ್ನೋದನ್ನ ಜೈಲು ವಾಸ ಅನುಭವಿಸಿದ ದರ್ಶನ್ ಅಭಿಮಾನಿಯೇ ಹೇಳ್ತಿದ್ದಾನೆ
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಸಿನಿಮಾ ಕೊರಿಯೋಗ್ರಾಫರ್ ನವ್ಯಾ ಬರ್ಬರ ಹತ್ಯೆ; ಅಸಲಿಗೆ ಆಗಿದ್ದೇನು?
ದರ್ಶನ್ ಪಾಲಿಗೆ ಹಿತಶತ್ರುಗಳು ಅಂತಿರೋದು ಅವರದ್ದೇ ಅಭಿಮಾನಿಗಳೇ.. ಜೈಲಿನಿಂದ ಲೀಕ್ ಆದ ಫೋಟೋ.. ವಿಡಿಯೋಗಳೇ ಅದಕ್ಕೆ ಸಾಕ್ಷಿಯಾಗಿದೆ.. ಯಾಕಂದ್ರೆ, ಫೋಟೋ ತೆಗೆದವನಿಂದ ಹಿಡಿದು ವಿಡಿಯೋ ಕಾಲ್ ಮಾಡಿ ಅದನ್ನ ಅಪ್ಲೋಡ್ ಮಾಡಿದವನ ತನಕ ಎಲ್ಲರೂ ದರ್ಶನ್ ಫ್ಯಾನ್ಸ್. ಇಷ್ಟೆಲ್ಲಾ ಸೌಂಡ್ ಮಾಡಿ ದರ್ಶನ್ರನ್ನ ಸಂಕಷ್ಟಕ್ಕೆ ದೂಡುವಂತೆ ಮಾಡಿದ್ದು ಫ್ಯಾನ್ಸ್ ಹುಚ್ಚಾಟಗಳೇ. ಬಟ್, ಇಲ್ಲಿ ಹಳೇ ಮೈಸೂರು ಭಾಗದ ದರ್ಶನ್ ಫ್ಯಾನ್ಸ್ಗೂ ಉತ್ತರ ಕರ್ನಾಟಕದ ದರ್ಶನ್ ಫ್ಯಾನ್ಸ್ಗೂ ವ್ಯತ್ಯಾಸ ಇದೆ.. ಪಕ್ಕಾ ಮುಗ್ಧರು.. ಎಂಥಾ ಅತಿರೇಕಕ್ಕಾದ್ರೂ ಹೋಗೋ ಎದೆಗಾರಿಕೆ ಉತ್ತರ ಕರ್ನಾಟಕದ ದರ್ಶನ್ ಫ್ಯಾನ್ಸ್ಗಿದೆ.. ಹೆಚ್ಚು ಹುಚ್ಚಿನ ಫ್ಯಾನ್ಸ್ ದರ್ಶನ್ಗೆ ಮತ್ತಷ್ಟು ಅಪಾಯಕಾರಿ ಆಗಬಲ್ಲರು ಅನ್ನೋದಕ್ಕೆ ಅವರ ಮಾತುಗಳೇ ಸಾಕ್ಷಿ.
ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆಗೆ ಚಿತ್ರಹಿಂಸೆ ಕೊಟ್ಟು ಭಯಾನಕ ಹತ್ಯೆ; ಕಾರಣವೇನು?
ದರ್ಶನ್ರ ಅತ್ಯಾಪ್ತ ಮಂತ್ರಿ ಸಲುಗೆ ಸಿಕ್ಕರೂ ಸಂಕಷ್ಟ
ದಾಸನ ‘ಪರಮಾಪ್ತ’ ಮಂತ್ರಿ ಜಿಲ್ಲಾ ಉಸ್ತುವಾರಿ ಆಗಿರೋ ಬಳ್ಳಾರಿಗೆ ದರ್ಶನ್ ಶಿಫ್ಟ್ ಆಗ್ತಿದ್ದಾರೆ.. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರು ದರ್ಶನ್ ಪರಮಾಪ್ತ ಜಮೀರ್ ಅಹ್ಮದ್ ಖಾನ್ ಎನ್ನುವ ವಿಷಯದ ಚರ್ಚೆಯೂ ಮುನ್ನಲೆಗೆ ಬಂದಿದೆ. ಪರಪ್ಪನ ಅಗ್ರಹಾರ ಜೈಲಿನ ಫೋಟೋ ವಿಡಿಯೋದಿಂದ್ಲೇ ಸರ್ಕಾರ ಬಹುದೊಡ್ಡ ಮುಖಭಂಗ ಎದುರಿಸಬೇಕಾಯ್ತು. ಇನ್ನು, ಯಾರಿಂದಲೋ ದರ್ಶನ್ಗೆ ಇಲ್ಲಿ ರಾಜಾತಿಥ್ಯ ಸಿಕ್ಕರೂ ಪರಮಾಪ್ತ ಮಂತ್ರಿಯತ್ತ ಬೊಟ್ಟು ಮಾಡುವ ಸನ್ನಿವೇಶ ಎದುರಾಗುತ್ತದೆ. ಇಂಥಾ ಸಂದರ್ಭ ಬಾರದಂತೆ ದರ್ಶನ್ ಕೂಡ ಇರಬೇಕಾಗುತ್ತದೆ.. ಆ ಮಂತ್ರಿ ಕೂಡ ಎಚ್ಚರ ವಹಿಸಬೇಕಾಗುತ್ತದೆ. ಇದೂ ಸಹ ದರ್ಶನ್ ಪಾಲಿಗೆ ಮತ್ತಷ್ಟು ಅಪಾಯಕಾರಿ ವಿಚಾರವಾಗಿದೆ..
ಬಾಡಿ ಕ್ಯಾಮರಾ ಯಾಮಾರಿದ್ರೂ ಕಷ್ಟ
ಪರಪ್ಪನ ಅಗ್ರಹಾರದಲ್ಲಿ ಡೀಲ್ ಮಾಡ್ಕೊಂಡ್ರೋ? ಹೆಂಗೋ? ಸಾಮಾನ್ಯ ಕೈದಿಗಳಿಗಿಂತ ಸಖತ್ತಾಗೇ ಇದ್ರು ದರ್ಶನ್. ಆದರೇ, ಬಳ್ಳಾರಿ ಜೈಲಿನಲ್ಲಿ ಮೊದಲಿನಂತೆ ಇರೋಕಾಗಲ್ಲ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿರ್ತಾರೆ. ಈ ಜೈಲಿನಲ್ಲಿ 80 ಸಿಸಿ ಕ್ಯಾಮರಾ, ಇದ್ದು 9 ಡಾನ್ ಮೆಟರಿಯಲ್ ಹಾಲ್ ಮತ್ತು 16 ಸ್ಪೆಷಲ್ ಬ್ಯಾರಿಕೇಡ್ ಇದೆ. ಇದೆಲ್ಲಕ್ಕಿಂತಲೂ ಮಿಗಿಲಾಗಿ ವಿಶೇಷ ಭದ್ರತಾ ವಿಭಾಗದ 15ನೇ ಸೆಲ್ನಲ್ಲಿ ದರ್ಶನ್ರನ್ನು ಇರಿಸಲು ನಿರ್ಧರಿಸಲಾಗಿದೆ. ಈಗಾಗಲೇ ಮೂವರು ಸಿಬ್ಬಂದಿಯನ್ನು ದರ್ಶನ್ ಭದ್ರತೆಗೆ ಅಂತ ನಿಯೋಜನೆ ಮಾಡಲಾಗಿದೆ. ದರ್ಶನ್ಗೆ 24 ಗಂಟೆಯೂ ಸಿಸಿಟಿವಿ ಹಾಗೂ ಬಾಡಿವೋರ್ನ್ ಕ್ಯಾಮರಾ ಕಣ್ಗಾವಲು ಇರಲಿದೆ. ದರ್ಶನ್ ಭದ್ರತೆಗೆ ನಿಯೋಜನೆಯಾಗಿರುವ ಸಿಬ್ಬಂದಿ ಬಾಡಿ ಕ್ಯಾಮೆರಾ ಅಳವಡಿಸಿಕೊಳ್ಳುವುದು ಕಡ್ಡಾಯ ಅಂತ ಆದೇಶ ಮಾಡಲಾಗಿದೆ. ಈ ಸಲ ದರ್ಶನ್ ಸಣ್ಣದಾಗಿ ಸಿಕ್ಕಿ ಹಾಕಿಕೊಂಡ್ರೂ ದೊಡ್ಡದಾದ ಅಪಾಯವೇ ಎದುರಾಗಲಿದೆ..
ರಾಜ್ಯದಾಚೆಗಿನ ಜೈಲಿಗೂ ಕಳಿಸೋ ಸಾಧ್ಯತೆ?
2013ರ ಮದ್ರಾಸ್ ಹೈಕೋರ್ಟ್ನ ಆದೇಶವೊಂದು ಬೆಚ್ಚಿಬೀಳಿಸುವಂತಿದೆ. ಜೈಲಿನಲ್ಲಿ ಕಾನೂನು ಬಾಹಿರ ಕೆಲಸಗಳನ್ನು ಮಾಡುತ್ತಿದ್ದ ಒಬ್ಬ ಕೈದಿಯನ್ನು ಪಾಂಡಿಚೇರಿಯಿಂದ ತಿಹಾರ್ ಜೈಲಿಗೆ ಕಳುಹಿಸಿಕೊಟ್ಟಿದೆ. ಶಂಕರ್ ಅನ್ನೋ ಕೈದಿ 2011ರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಕರಾಯಿಕಲ್ ಸಬ್ಜೈಲಿನಲ್ಲಿದ್ದುಕೊಂಡೇ ಅಕ್ರಮವಾಗಿ ಮೊಬೈಲ್ ಬಳಸುತ್ತಿದ್ದ. ಸಿಗರೇಟು. ಎಣ್ಣೆ ಬಳಸುತ್ತಿದ್ದ. ರೌಡಿಗಳೊಂದಿಗೆ ಬೆರೆಯುತ್ತಿದ್ದ. ಇಂಥಾ ಶಂಕರ್ನನ್ನೇ ಮದ್ರಾಸ್ ಕೋರ್ಟ್ ತಿಹಾರ್ ಜೈಲಿಗೆ ಕಳುಹಿಸೋ ಆದೇಶ ಹೊರಡಿಸಿತ್ತು. ಐತಿಹಾಸಿಕ ತೀರ್ಪು ನೀಡಿತ್ತು. ದರ್ಶನ್ ಪರಪ್ಪನ ಅಗ್ರಹಾರ ಜೈಲಿನಂತೆ ಬಳ್ಳಾರಿ ಜೈಲಿನಲ್ಲೂ ಮೆರೆದಾಡಿದ್ರೆ ಮುಂದೊಂದು ದಿನ ಇಂಥಾ ಅಪಾಯ ಬಂದರೂ ಬರಬಹುದು. ಈಗ ದರ್ಶನ್ ವಿಚರಣಾಧೀನ ಕೈದಿಯಾಗಿರೋದ್ರಿಂದ ರಾಜ್ಯದಾಚೆಗಿನ ಜೈಲಿಗೆ ಕಳಿಸುವ ಸಾಧ್ಯತೆಗಳು ಕಡಿಮೆ. ಆದ್ರೆ, ಸಾಧ್ಯತೆಯನ್ನ ತಳ್ಳಿ ಹಾಕುವಂತಿಲ್ಲ. ಹಾಗಾಗಿಯೇ, ದರ್ಶನ್ ಇನ್ನಾದ್ರೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ