Advertisment

ಈ 5 ಟೀಮ್​ಗೆ ನಾಯಕರದ್ದೇ ಸಮಸ್ಯೆ.. KL ರಾಹುಲ್, ಕೊಹ್ಲಿ, ಪಂತ್, ಅಯ್ಯರ್ ಕ್ಯಾಪ್ಟನ್ ಆಗ್ತಾರಾ?

author-image
Bheemappa
Updated On
ಈ 5 ಟೀಮ್​ಗೆ ನಾಯಕರದ್ದೇ ಸಮಸ್ಯೆ.. KL ರಾಹುಲ್, ಕೊಹ್ಲಿ, ಪಂತ್, ಅಯ್ಯರ್ ಕ್ಯಾಪ್ಟನ್ ಆಗ್ತಾರಾ?
Advertisment
  • ಈಗಾಗಲೇ IPL ತಂಡದಲ್ಲಿ ಕ್ಯಾಪ್ಟನ್ ರೇಸ್​ ಆರಂಭವಾಗಿದೆ
  • RCB ನಾಯಕ ಸ್ಥಾನದ ಬಗ್ಗೆ ನಿರ್ದೇಶಕರು ಏನು ಹೇಳುತ್ತಾರೆ..?
  • ಬೆಂಗಳೂರು, ಪಂಜಾಬ್​ಗೆ ಕ್ಯಾಪ್ಟನ್​ ಇವರೇ ಆಗೋದು ಫಿಕ್ಸ್?

ಮೆಗಾ ಹರಾಜು ಮುಗಿದಿದ್ದು ಆಯಿತು. ಹರಾಜಿನಲ್ಲಿ ಫ್ರಾಂಚೈಸಿಗಳು ಬಲಿಷ್ಠ ತಂಡಗಳನ್ನು ಕಟ್ಟಿದ್ದಾಗಿದೆ. ಆದ್ರೆ, ಸ್ಟ್ರಾಂಗ್ ಟೀಮ್ ಕಟ್ಟಿರುವ ಐಪಿಎಲ್​​ ಫ್ರಾಂಚೈಸಿಗಳಲ್ಲೇ ಈಗ ಗೊಂದಲ ಸೃಷ್ಟಿಯಾಗಿದೆ. ಇದಕ್ಕೆ ಕಾರಣ ಏನು..?

Advertisment

ಕೋಟಿ ಕೋಟಿ ಹಣದ ಹೊಳೆ ಹರಿಸಿರುವ ಫ್ರಾಂಚೈಸಿಗಳು, ಮೆಗಾ ಹರಾಜಿನಲ್ಲಿ ಬಲಿಷ್ಠ ತಂಡಗಳನ್ನೇ ಕಟ್ಟಿವೆ. ಸ್ಟಾರ್ ಆಟಗಾರರ ಎಂಟ್ರಿಯಿಂದ ಸೀಸನ್​-18ರಲ್ಲಿ ಕಪ್​ ಗೆಲ್ಲೋ ಹಾಟ್​ ಫೇವರಿಟ್ಸ್​ ಆಗಿಯೇ ಕರೆಸಿಕೊಳ್ಳುತ್ತಿವೆ. ಆದ್ರೆ, ಸ್ಟಾರ್​ ಆಟಗಾರರು ತಂಡಕ್ಕೆ ಬಂದ್ರೂ, ಕೆಲ ಫ್ರಾಂಚೈಸಿಗಳಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಇದಕ್ಕೆ ಕಾರಣ ಕ್ಯಾಪ್ಟನ್ಸಿ.

publive-image

ಐಪಿಎಲ್​ನ 10 ತಂಡಗಳ ಪೈಕಿ 5 ತಂಡಗಳಿಗೆ ನಾಯಕರುಗಳೇ ಇಲ್ಲ. ಹರಾಜಿನಲ್ಲಿ ಸ್ಟಾರ್​ಗಳನ್ನ ಖರೀದಿಸಿದ್ದಾರೆ. ಆದರೆ ಇದರಲ್ಲಿ ನಾಯತಕತ್ವದ ಪಟ್ಟ ಯಾರಿಗೆ ಕಟ್ಟಬೇಕೆಂಬ ಗೊಂದಲ ಯಕ್ಷ ಪ್ರಶ್ನೆಯಾಗಿಯೇ ಕಾಡುತ್ತಿದೆ.

ಲಕ್ನೋ ನಾಯಕತ್ವಕ್ಕೆ ಪಂತ್, ಪೂರನ್ ಫೈಟ್.!

ನಾಯಕನ ಹುಡುಕಾಟದಲ್ಲಿದ್ದ ಪಂಜಾಬ್ ಕಿಂಗ್ಸ್​, ಹರಾಜಿನ ಕಣದಲ್ಲಿ ಶ್ರೇಯಸ್​ಗೆ ದಾಖಲೆಯ 26.75 ಕೋಟಿ ನೀಡಿ ಖರೀದಿಸಿದೆ. ಹಾಲಿ ಚಾಂಪಿಯನ್ ಕ್ಯಾಪ್ಟನ್​​ಗೆ ನಾಯಕತ್ವದ ಪಟ್ಟ ಕಟ್ಟುವುದು ಕನ್ಫರ್ಮ್. ಆದ್ರೆ, 27 ಕೋಟಿಗೆ ಲಕ್ನೋ ಪಾಲಾಗಿರುವ ರಿಷಬ್ ಪಂತ್​ಗೆ ಪಟ್ಟ ಸಿಗುತ್ತಾ ಅನ್ನೋ ಡೌಟ್ ಶುರುವಾಗಿದೆ. ಇದಕ್ಕೆ ಕಾರಣ ನಿಕೋಲಸ್ ಪೂರನ್​.

Advertisment

27 ಕೋಟಿಗೆ ಲಕ್ನೋ ರಿಷಬ್ ಪಂತ್​ರನ್ನ ಖರೀದಿಸಿದೆ. ಆದ್ರೆ, ನಿಕೋಲಸ್ ಪೂರನ್​ನ ಕ್ಯಾಪ್ಟನ್ಸಿ ನೀಡುವ ವಿಚಾರವಾಗಿಯೇ ಮೊದಲ ರಿಟೈನ್ ಮಾಡಿಕೊಂಡಿರುವ ಫ್ರಾಂಚೈಸಿಗೆ ಈಗ ರಿಷಬ್​ ಪಂತ್​ ಆಗಮನ ಇಕ್ಕಟ್ಟಿಗೆ ಸಿಲುಕಿಸಿದೆ. ಈ ಇಬ್ಬರಲ್ಲಿ ಯಾರಿಗೆ ಪಟ್ಟ ಕಟ್ಟಬೇಕೆಂಬ ಹೊಸ ಪ್ರಶ್ನೆ ಹುಟ್ಟು ಹಾಕಿದೆ.

ಡೆಲ್ಲಿ ಗದ್ದುಗೆಗೆ ರಾಹುಲ್- ಅಕ್ಷರ್ ಪೈಪೋಟಿ!

ಲಕ್ನೋ ತಂಡದ್ದೆ ಅಲ್ಲ. ಡೆಲ್ಲಿ ಕ್ಯಾಪಿಟಲ್ಸ್​ನ ಕ್ಯಾಪ್ಟನ್ಸಿ ಪಟ್ಟ ಯಾರಿಗೆ ಎಂಬ ಪ್ರಶ್ನೆ ಇದೆ. ಕೆ.ಎಲ್​.ರಾಹುಲ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದರೂ, ಕಳೆದ ಸೀಸನ್​ನಲ್ಲಿ ವೈಸ್ ಕ್ಯಾಪ್ಟನ್ ಆಗಿದ್ದ ಅಕ್ಷರ್ ಪಟೇಲ್​​​ ಬಗ್ಗೆ ಮಾಲೀಕರ ಒಲವು ಇದೆ. ಆದ್ರೆ, ನಾಯಕತ್ವದಲ್ಲಿ ಅನುಭವ ಹೊಂದಿರುವ ಕೆ.ಎಲ್.ರಾಹುಲ್ ಬೆಸ್ಟ್​ ಚಾಯ್ಸ್​. ಹೀಗಾಗಿ ಇವರಿಬ್ಬರಲ್ಲಿ ಯಾರಿಗೆ ಮಣೆ ಹಾಕ್ತಾರೆ ಅನ್ನೋದು ಭಾರೀ ಕುತೂಹಲ ಮೂಡಿಸಿದೆ.

ರಹಾನೆ, ವೆಂಕಟೇಶ್​​.. ಯಾರ್ ಆಗ್ತಾರೆ ಕ್ಯಾಪ್ಟನ್..?

ಹಾಲಿ ಚಾಂಪಿಯನ್ಸ್ ಕೊಲ್ಕತ್ತಾ ನೈಟ್​ ರೈಡರ್ಸ್​ ಕೂಡ ನಾಯಕನ ಹುಡುಕಾಟದಲ್ಲಿದೆ. ಸದ್ಯ ನಾಯಕತ್ವದ ರೇಸ್​ನಲ್ಲಿ ಅಜಿಂಕ್ಯಾ ರಹಾನೆ, ವೆಂಕಟೇಶ್ ಅಯ್ಯರ್ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಅದ್ಭುತ ನಾಯಕತ್ವದ ಗುಣ ಹೊಂದಿರುವ ರಹಾನೆ, ಆನ್​​ಫೀಲ್ಡ್‌ನಲ್ಲಿ ಸ್ಟ್ರಾಟರ್ಜಿ ಆ್ಯಂಡ್ ಗೇಮ್ ಪ್ಲಾನ್ ರೂಪಿಸುವಲ್ಲಿ ನಿಸ್ಸೀಮ. ಯುವ ಆಟಗಾರರ ಬೆನ್ನಿಗೆ ನಿಲ್ಲುವ ರಹಾನೆ ಆಕ್ರಮಣಕಾರಿ ಬ್ಯಾಟಿಂಗ್ ಮಾಡಬಲ್ಲರು. ಹೀಗಾಗಿ ರಹಾನೆ ಹೆಸರು ಮುಂಚೂಣಿಯಲ್ಲಿದೆ. ಆದ್ರೆ, ವೆಂಕಟೇಶ್ ಅಯ್ಯರ್​​ಗಾಗಿ 23 ಕೋಟಿ ಸುರಿಸಿರುವ ಕೊಲ್ಕತ್ತಾ, ಯುವ ನಾಯಕನಿಗೆ ಪಟ್ಟ ಕಟ್ಟಿದರೂ ಅಚ್ಚರಿ ಇಲ್ಲ.

Advertisment

ಇದನ್ನೂ ಓದಿ: RCB ಫ್ರಾಂಚೈಸಿಗೆ ಟಿ.ಎ ನಾರಾಯಣಗೌಡ ಎಚ್ಚರಿಕೆ.. ಕರವೇ ಅಧ್ಯಕ್ಷರು ಹೇಳಿದ್ದು ಏನು?

publive-image

ಆರ್​ಸಿಬಿಗೆ ವಿರಾಟ್​ ಕೊಹ್ಲಿಯೇ ನಾಯಕರಾಗ್ತಾರಾ..?

ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ವಿರಾಟ್​ ಕೊಹ್ಲಿ ಕ್ಯಾಪ್ಟನ್ ಆಗೋದು ಕನ್ಫರ್ಮ್. ಆದ್ರೆ, ಆರ್​ಸಿಬಿ ಡೈರೆಕ್ಟರ್ ಮೊ ಬೊಬಾಟ್, ಈ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಿದ್ದಾರೆ. ಇದು ಮತ್ಯಾರು ನಾಯಕರಾಗ್ತಾರೆ ಎಂಬ ಪ್ರಶ್ನೆಗೆ ನಾಂದಿ ಆಡಿದೆ. ಆದ್ರೆ, ಸದ್ಯ ತಂಡದಲ್ಲಿ ಕೊಹ್ಲಿ ಹಾಗೂ ರಜತ್ ಪಾಟಿದಾರ್ ಬಳಿಕ ಸೂಕ್ತ ಅಭ್ಯರ್ಥಿ ಕಾಣಿಸ್ತಿಲ್ಲ. ಭುವನೇಶ್ವರ್, ಕೃನಾಲ್ ಪಾಂಡ್ಯ ದೇಶಿ ಕ್ರಿಕೆಟ್​ನಲ್ಲಿ ನಾಯಕರಾಗಿದ್ದರು. ಸಕ್ಸಸ್ ಕಂಡಿಲ್ಲ. ಹೀಗಾಗಿ ವಿರಾಟ್​ಗೆ ನಾಯಕತ್ವ ಫಿಕ್ಸ್.

ನಾಯಕರಿಲ್ಲದ 5 ತಂಡಗಳನ್ನು ಯಾರು ಮುನ್ನಡೆಸ್ತಾರೆ ಅನ್ನೋ ಕ್ಯೂರಿಯಾಸಿಟಿ ದಿನೇ ದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಶ್ರೀಘ್ರವೇ ಫ್ರಾಂಚೈಸಿಗಳು ಯಾವ ಉತ್ತರ ನೀಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment