newsfirstkannada.com

Flood in France: ಪ್ರಕೃತಿ ಮುನಿಸಿಗೆ ಹೈರಾಣಾದ ಫ್ರಾನ್ಸ್​​; ಭೀಕರ ಪ್ರವಾಹದ ದೃಶ್ಯಗಳು

Share :

17-09-2023

    ತಗ್ಗದ ಮಳೆ.. ಸಮುದ್ರದಂತಾದ ಊರು ಕೇರಿಗಳು!

    ರಣಮಳೆ, ಪ್ರವಾಹದ ಅಬ್ಬರ, ಫ್ರಾನ್ಸ್ ತತ್ತರ!

    ಪ್ರವಾಹದ ಪ್ರತಾಪಕ್ಕೆ ಫ್ರಾನ್ಸ್ ಪರಿಸ್ಥಿತಿ ಅಯೋಮಯ

ಒಂದ್ಕಡೆ ಭೂಕಂಪ.. ಮತ್ತೊಂದ್ಕಡೆ ಬರಗಾಲ.. ಇನ್ನೊಂದು ಕಡೆ ಚಂಡಮಾರುತ.. ಇವೆಲ್ಲಾ ಪ್ರಕೃತಿ ಮುನಿದ್ರೆ ಏನಾಗುತ್ತೆ ಅನ್ನೋದಕ್ಕೆ ಉದಾಹರಣೆಗಳು. ಜಗತ್ತಿನಲ್ಲಿ ಒಂದಾಂದ ಮೇಲೊಂದರಂತೆ ವಿನಾಶಕಾರಿ ಘಟನೆಗಳು ಸಂಭವಿಸ್ತಿವೆ. ಇದೀಗ ಫ್ರಾನ್ಸ್​​ ಕೂಡ ಪ್ರಕೃತಿ ಮುನಿಸಿಗೆ ಹೈರಾಣಾಗಿದ್ದು, ಮಳೆರಾಯನ ಮುಂದೆ ಮಂಡಿಯೂರಿ ಕುಳಿತಿದೆ.

ರಣಮಳೆ, ಪ್ರವಾಹದ ಅಬ್ಬರ, ಫ್ರಾನ್ಸ್ ತತ್ತರ!

ರಣಭೀಕರ ಮಳೆ.. ಅತಿ ಭಯಂಕರ ಪ್ರವಾಹಕ್ಕೆ ಫ್ರಾನ್ಸ್​ ಅಕ್ಷರಶಃ ಹಿಂಡಿ ಹಿಪ್ಪೆಯಾಗ್ತಿದೆ. ಫ್ರಾನ್ಸ್ ದೇಶದ ಒಂದೊಂದು ನಗರಗಳು ಮಳೆರಾಯನ ಆರ್ಭಟಕ್ಕೆ ನಲುಗಿ ಹೋಗ್ತಿವೆ.. ಊರು ಕೇರಿಗಳು ಸಂಪೂರ್ಣ ಮುಳುಗಿ ಹೋಗ್ತಿವೆ.. ವಾಹನಗಳು ನೀರಿನಲ್ಲಿ ತೇಲಿ ಹೋಗ್ತಿವೆ.. ದೇಶದ ಭಾಗಶಃ ರಸ್ತೆಗಳು ಸಂಪೂರ್ಣ ನೀರಿನಿಂದ ಆವೃತವಾಗಿದ್ದು, ಜನರ ಬದುಕು ಬೀದಿ ಪಾಲಾಗಿದೆ.

ರಸ್ತೆಯೋ? ನದಿಯೋ?

ವರುಣಾರ್ಭಟದಿಂದ ಸಿಟಿಯ ಪ್ರಮುಖ ರಸ್ತೆ ಮೇಲೆ ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿದೆ. ಪರಿಣಾಮ ವಾಹನಗಳು ರಸ್ತೆ ಮೇಲೆ ಬರಲಾಗದೇ ಅಲ್ಲೆ ಪಕ್ಕದಲ್ಲೇ ನಿಂತು ಕಾಲ ಕಳೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಫ್ರಾನ್ಸ್​ನಲ್ಲಿ ಸೃಷ್ಟಿಯಾಗಿರೋ ಒಂದೊಂದು ದೃಶ್ಯಗಳು ಅತಿ ಭಯಂಕರವಾಗಿವೆ.

ತಗ್ಗದ ಮಳೆ.. ಸಮುದ್ರದಂತಾದ ಊರು ಕೇರಿಗಳು!

ಫ್ರಾನ್ಸ್​ನಲ್ಲಿ ಅದೆಷ್ಟರ ಮಟ್ಟಿಗೆ ಭಯಂಕರ ಪ್ರವಾಹ ಸೃಷ್ಟಿಯಾಗಿದೇ ಅನ್ನೋದು ಸ್ಪಷ್ಟವಾಗಿ ಅರ್ಥವಾಗ್ಬಿಡುತ್ತೆ.. ಬೆಟ್ಟದ ತಪ್ಪಲಿನಲ್ಲಿರುವ ನಗರ ಪರಿಸ್ಥಿತಿ ಅಂತೂ ಕೇಳ ತೀರದ್ದು.. ಅಲ್ಲಿನ ಜನರು ಒಂದೊಂದು ಕ್ಷಣವೂ ಭಯದಲ್ಲಿ ಬದುಕ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಫ್ರಾನ್ಸ್ ದೇಶದ ಲ್ಯಾಡ್ರಸ್​ ಪ್ರದೇಶ.. ಇಲ್ಲಿ ಸುರಿದಂತಹ ಭಾರಿ ಮಳೆಯ ಪರಿಣಾಮ ಹಲವಾರು ಮರ -ಗಿಡಗಳಿಗೆ ಹಾನಿಯಾಗಿದೆ.

ಪ್ರವಾಹದ ಪ್ರತಾಪಕ್ಕೆ ಫ್ರಾನ್ಸ್ ಪರಿಸ್ಥಿತಿ ಅಯೋಮಯ!

ಫ್ರಾನ್ಸ್ ದೇಶದಲ್ಲಿ ಕೇವಲ ಒಂದೇ ರಾತ್ರಿಯಲ್ಲಿ ನೂರು ಮಿಲಿ ಮೀಟರ್​ಗೂ ಅಧಿಕ ಮಳೆಯಾಗಿದೆ.. ಪರಿಣಾಮ ಹಲವು ಕಡೆಗಳಲ್ಲಿ ಮರಗಳು ಧರೆಗಪ್ಪಳಿಸಿವೆ. ಫ್ರಾನ್ಸ್​ನಲ್ಲಿ ವರುಣ ಸೃಷ್ಟಿ ಮಾಡಿರೋ ಭಯಾನಕ ಅವಾಂತರವಾದ್ರೆ, ಅತ್ತ, ಸೌತ್ ಆಫ್ರೀಕಾ ಹಾಗೂ ನೈಜೀರಿಯಾದಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Flood in France: ಪ್ರಕೃತಿ ಮುನಿಸಿಗೆ ಹೈರಾಣಾದ ಫ್ರಾನ್ಸ್​​; ಭೀಕರ ಪ್ರವಾಹದ ದೃಶ್ಯಗಳು

https://newsfirstlive.com/wp-content/uploads/2023/09/FRANCE.jpg

Load More