newsfirstkannada.com

7 ಜಿಲ್ಲೆಗಳಲ್ಲಿ ಪ್ರವಾಹ, 250 ಜನರ ಸ್ಥಳಾಂತರ; ರಾಜ್ಯದಲ್ಲಿ ಮಳೆಯಿಂದಾದ ಅವಾಂತರದ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ

Share :

25-07-2023

  ಉತ್ತರ ಕನ್ನಡಕ್ಕೆ ರೆಡ್​​, ಉಡುಪಿಗೆ ಆರೆಂಜ್ ಅಲರ್ಟ್

  ವರುಣನ ಆರ್ಭಟದಿಂದ ಹಲವು ಜಲಪಾತಗಳು ಉಗಮ

  ವಿಪರೀತ ಮಳೆಯಿಂದಾಗಿ ಈ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ

ಕರ್ನಾಟಕ ರಾಜ್ಯಾದ್ಯಂತ ಮಳೆ ಚುರುಕುಗೊಂಡಿದ್ದು, ಹಲವು ಕಡೆಗಳಲ್ಲಿ ನಿರೀಕ್ಷೆಗೂ ಮೀರಿ ಮಳೆ ಆಗ್ತಿದೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗ್ತಿದ್ದು, ಜಲಾಶಯಗಳಿಗೆ ಭಾರೀ ನೀರು ಹರಿದುಬರ್ತಿದೆ. ಜೊತೆಗೆ ಹಲವು ಜಲಪಾತಗಳು ಉಗಮವಾಗಿವೆ.

ಕರ್ನಾಟಕದ ಮೇಲೆ ಮುನಿಸಿದ್ದ ವರುಣ, ಹರ್ಷಗೊಂಡು ವರ್ಷಧಾರೆ ಎರೆಯುತ್ತಿದ್ದಾನೆ. ಜೀವ ನದಿಗಳು ಮೈದುಂಬಿದ್ರೆ, ಉಪ ನದಿಗಳಿಗೂ ಸಂಭ್ರಮ. ಈ ಸಂಭ್ರಮ, ಜಲಾಶಯದ ಒಡಲಿಗೆ ಅಪಾರ ಪ್ರಮಾಣದ ನೀರಿನ ಕಾಣಿಕೆ ನೀಡ್ತಿದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನೆಲೆ ಇಂದು ರೆಡ್‌ ಅಲರ್ಟ್‌ ನೀಡಲಾಗಿದೆ.. ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ  ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಉಡುಪಿಯಲ್ಲಿ ಇಂದೂ ಸಹ ಅತ್ಯಧಿಕ ಮಳೆ ಸಾಧ್ಯತೆ ಇದೆ. ಹೀಗಾಗಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. 2 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಮಲೆನಾಡಿನಾದ್ಯಂತ ನೂರಾರು ಜಲಪಾತಗಳು ಉಗಮ

ಚಿಕ್ಕಮಗಳೂರಲ್ಲಿ ಮಳೆ ಆರ್ಭಟ ಹೆಚ್ಚಿದ್ದು, ಕಾಫಿನಾಡೀಗ ಜಲಪಾತಗಳ ನಾಡಾಗಿದೆ. ಮಲೆನಾಡಿನಲ್ಲಿ ನೂರಾರು ಜಲಪಾತಗಳು ಉಗಮವಾಗಿದ್ದು, ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿವೆ.

ವರುಣನ ಆರ್ಭಟದಿಂದ ಜಲಪಾತಗಳ ಭೋರ್ಗರೆತ

ನಿರಂತರ ಮಳೆಯಿಂದಾಗಿ ಜಲಪಾತಗಳಿಗೆ ಜೀವಕಳೆ ಬಂದಿದೆ. ಭಾರೀ ಮಳೆಯಿಂದಾಗಿ ದಟ್ಟ ಕಾಡಿನ ಮಧ್ಯೆ ಜಲಪಾತಗಳು ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಆದ್ರೆ, ಮುರೆಗಾರ್ ಜಲಪಾತ, ಶಿವಗಂಗಾ ಜಲಪಾತಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.

ಅಬ್ಬರದ ಮಳೆಯಿಂದ ಅಘನಾಶಿನಿ ನದಿಗೆ ಜೀವಕಳೆ!

ಶಿರಸಿಯ ನಿಲ್ಕುಂದ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ ಅಘನಾಶಿನಿ ನದಿ ಅಪಾಯದ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಅಘನಾಶಿನಿ ನದಿ ಮಾನಿ ಹೊಳೆ ಸೇತುವೆಗೆ ತಾಗಿ ಹರಿಯುತ್ತಿದೆ.

ಮಳೆ ಏಟಿಗೆ ಕುಸಿದು ಬಿದ್ದ ಜೈಲಿನ ಗೋಡೆ!

ಶಿವಮೊಗ್ಗ ಜಿಲ್ಲಾದ್ಯಂತ ಮಳೆ ಆರ್ಭಟ ಮುಂದುವರೆದಿದೆ. ಸಾಗರ ತಾಲೂಕಿನಲ್ಲಿ ಕಳೆದ 2-3 ದಿನಗಳಿಂದ ಮಳೆ ಜೋರಾಗಿದ್ದು, ವರದಾ ರಸ್ತೆಯಲ್ಲಿರುವ ತಾಲೂಕು ಉಪ ಕಾರಾಗೃಹದ ತಡೆಗೋಡೆ ನೆಲಕ್ಕುರುಳಿದೆ. ಗೋಡೆ ಬಿದ್ದಿರುವ ಹಿನ್ನೆಲೆ ವಾಹನ ಸಂಚಾರ ಬಂದಾಗಿದೆ.

ಬಿಬಿಎಂಪಿ ವಾರ್​ ರೂಮ್​ಗೆ ಡಿಕೆ ಎಂಟ್ರಿ, ಪರಿಸ್ಥಿತಿ ಅವಲೋಕನ

ಬ್ರ್ಯಾಂಡ್ ಬೆಂಗಳೂರಿನ ಎಂಬ ಮಂತ್ರ ಜಪಿಸುತ್ತಿರುವ ಡಿಸಿಎಂ ಡಿಕೆಶಿ, ಇದೀಗ ಬೆಂಗಳೂರಿನ ಮಳೆ ಅವಾಂತರ ತಡೆಗೆ ಮುಂದಾಗಿದ್ದಾರೆ.. ಬಿಬಿಎಂಪಿ ವಾರ್ ರೂಂಗೆ ಭೇಟಿ ನೀಡಿ ಸಿಬ್ಬಂದಿಯಿಂದ ಹಲವು ಮಾಹಿತಿ ಸಂಗ್ರಹಿಸಿದ್ದಾರೆ.. ವಾರ್ ರೂಂಗೆ ಬರುವ ಕರೆಗಳೆಷ್ಟು? ಎಲ್ಲೆಲ್ಲಿ ಅನಾಹುತಗಳ ಬಗ್ಗೆ ಕರೆ ಬಂದಿದೆ? ವಾರ್ ರೂಂ ಹೇಗೆ ಕಾರ್ಯ ನಿರ್ವಹಿಸ್ತಿದೆ ಅಂತ ಪ್ರಶ್ನಿಸಿ ಉತ್ತರ ಪಡೆದ್ರು..

ಸೋರುತಿರುವ ಶಾಲೆಯ ಕೊಠಡಿಗಳಲ್ಲಿ ಮಕ್ಕಳಿಗೆ ಪಾಠ

ವಾರದಿಂದ ಬೀದರ್​ ಜಿಲ್ಲೆಯಲ್ಲಿ ನಿರಂತರ ಮಳೆ ಆಗ್ತಿದ್ದು, ಶಾಲೆಗಳು ಸೋರುಲಾರಂಭಿಸಿವೆ.. ನಗರದ ನೌಬಾದ್‌ನಲ್ಲಿರುವ ಕನ್ನಡ ಹಾಗೂ ಮರಾಠಿ ಶಾಲೆ ಸುಮಾರು 30 ರಿಂದ 40 ವರ್ಷಗಳ ಹಳೆಯದ್ದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಸದ್ಯ ಸೋರುತ್ತಿರುವ ಕೊಠಡಿಯಲ್ಲೆ ಮಕ್ಕಳು ಪಾಠ ಕೇಳುವ ಸ್ಥಿತಿ ಎದುರಾಗಿದೆ.. ಅಲ್ಲದೆ, ಮಕ್ಕಳನ್ನ ಶಾಲೆಗೆ ಕಳುಹಿಸುವ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

7 ಜಿಲ್ಲೆಗಳಲ್ಲಿ ಪ್ರವಾಹ

ಚಿಕ್ಕಮಗಳೂರು, ಶವಮೊಗ್ಗ, ಕೊಡಗು, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಧಾರವಾಡ. ದಾವಣಗೆರೆ, ಬಾಗಲಕೋಟೆ, ಹಾವೇರಿಯಲ್ಲಿ ಪ್ರವಾಹದ ಆತಂಕ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

7 ಜಿಲ್ಲೆಗಳಲ್ಲಿ ಪ್ರವಾಹ, 250 ಜನರ ಸ್ಥಳಾಂತರ; ರಾಜ್ಯದಲ್ಲಿ ಮಳೆಯಿಂದಾದ ಅವಾಂತರದ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ

https://newsfirstlive.com/wp-content/uploads/2023/07/FLOOD-1.jpg

Load More