newsfirstkannada.com

10 ರೂಪಾಯಿಗೊಂದು ಕೆಜಿ ಚೆಂಡು ಹೂವು.. ದೀಪಾವಳಿ ಬಂಪರ್‌ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್‌ ಶಾಕ್‌!

Share :

11-11-2023

  ಹೂ ಮಾರಿ‌ ಮಾಡಿದ ಸಾಲ ತೀರಿಸುವ ನಿರೀಕ್ಷೆಯಲ್ಲಿದ್ದ ರೈತರಿಗೆ ಸಂಕಷ್ಟ

  ಒಂದು ಕೆ.ಜಿ ಚೆಂಡು ಹೂಗೆ ಮಾರುಕಟ್ಟೆಯಲ್ಲಿ ಕೇವಲ 10 ರೂಪಾಯಿ

  ಗಡಿ ಭಾಗದಲ್ಲಿ ಮಾರುಕಟ್ಟೆ ನಿರ್ಮಿಸಿ ಎಂದು ಬೆಳೆಗಾವಿ ರೈತರಿಂದ ಆಗ್ರಹ

ಬೆಳಗಾವಿ: ಇನ್ನೇನು ಎರಡು ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ. ಹೂ ಮಾರಿ‌ ಮಾಡಿದ ಸಾಲ ತೀರಿಸುವ ನಿರೀಕ್ಷೆಯಲ್ಲಿರುವ ಗಡಿ ಭಾಗದ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ಕಂಗಾಲಾಗಿದ್ದಾರೆ. ಹೌದು, ಮೈದುಂಬಿ ಅರಳಿ ನಿಂತಿರೋ ಹೂಗಳು. ಇನ್ನೇನು ದೇವರ ಮುಡಿ ಸೇರಬೇಕಿರುವ ಹೂಗಳನ್ನ ಯಾರು ಖರೀದಿ ಮಾಡದೇ ಹೀಗೆ ಅರಳಿ ನಿಂತು ಅಲ್ಲೇ ಹಾಳಾಗುತ್ತಿವೆ.

ಸದ್ಯ ಚೆಂಡು ಹೂವಿನ ದರ ಕೇಳಿದರೆ ನೀವೂ ಕಂಗಾಲಾಗುತ್ತಿರಾ. ಒಂದು ಕೆ.ಜಿ ಹೂಗೆ ಮಾರುಕಟ್ಟೆಯಲ್ಲಿ ಕೇವಲ 10 ರೂಪಾಯಿ ಒಂದು ಟ್ರೇ ಹೂ ಹರಿಯಲು 100 ರೂ. ಬೇಕು. ಹೀಗಾಗಿ ರೈತರು ಹೂ ಹರಿಯದೇ ಹೀಗೆ ಜಮೀನಲ್ಲಿ ಹಾಗೆ ಬಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಚಿಕ್ಕೋಡಿ ಉಪವಿಭಾಗದಲ್ಲಿ ಮಾರುಕಟ್ಟೆ ಇಲ್ಲದೆ ರೈತರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕೋಡಿ ಉಪವಿಭಾಗದ ಅಥಣಿ, ಕಾಗವಾಡ, ರಾಯಭಾಗ, ಚಿಕ್ಕೋಡಿ, ನಿಪ್ಪಾಣಿ ಭಾಗದಲ್ಲಿ ಮಾರುಕಟ್ಟೆ ಇಲ್ಲದೆ ಪಕ್ಕದ ಮಹಾರಾಷ್ಟ್ರಕ್ಕೆ ಹೋಗಬೇಕು. ಆದರೆ, ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರಕ್ಕೆ ಕಳಿಸಬೇಕಂದ್ರೆ ಅಲ್ಲಿ ಕೂಡ ಕನ್ನಡಿಗರಿಗೆ ಮಲತಾಯಿ ಧೋರಣೆ ತೋರಿಸುತ್ತಿದ್ದಾರಂತೆ. ಹೀಗಾಗಿ ಚಿಕ್ಕೋಡಿ ಕಾಗವಾಡ ಅಥಣಿ ಭಾಗದಲ್ಲಿ ಮಾರುಕಟ್ಟೆ ಅವಶ್ಯಕತೆ ಇದ್ದು ಸಿಎಂ ಸಿದ್ದರಾಮಯ್ಯ ಹಾಗೂ ಬೆಳಗಾವಿ ಉಸ್ತುವಾರಿ ಸತೀಶ್ ಜಾರಕಿಹೊಳಿ ಗಡಿ ಭಾಗದಲ್ಲಿ ಮಾರುಕಟ್ಟೆ ನಿರ್ಮಿಸಿ ಗಡಿ ಭಾಗದ ಜನರಿಗೆ ಅನುಕೂಲ ಮಾಡಿ ಎಂದು ಜನರು ಆಗ್ರಹಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10 ರೂಪಾಯಿಗೊಂದು ಕೆಜಿ ಚೆಂಡು ಹೂವು.. ದೀಪಾವಳಿ ಬಂಪರ್‌ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್‌ ಶಾಕ್‌!

https://newsfirstlive.com/wp-content/uploads/2023/11/Ceṇḍu-hu.jpg

Load More