newsfirstkannada.com

Flowers rate: ತರಕಾರಿ.. ಚಿಕನ್.. ಮೊಟ್ಟೆ ಮಾತ್ರವಲ್ಲ; ಹೂವುಗಳೂ ಗಗನ ಕುಸುಮ.. ಬೆಂಗಳೂರಲ್ಲಿ ಬಲು ದುಬಾರಿ..!

Share :

05-07-2023

  ಯಾವ ಹಬ್ಬ ಇಲ್ಲ.. ಮದುವೆ ಸೀಜನ್​ ಅಲ್ವೇ ಅಲ್ಲ..

  ಅಲ್ಪ ಆಯುಷಿ ಹೂಗಳಿಗೆ ಭಾರೀ ಡಿಮ್ಯಾಂಡ್

  ಕೆಜಿ ಮಲ್ಲಿಗೆ ಹೂವಿನ ದರ ಕೇಳಿದ್ರೆ ಶಾಕ್ ಆಗ್ತೀರಾ..!

ತರಕಾರಿ ಬೆಲೆ ಹೆಚ್ಚಳವಾಯ್ತು. ಚಿಕನ್​ ಮೊಟ್ಟೆ ಬೆಲೆಯೂ ಹೆಚ್ಚಳವಾಗಿದೆ. ಈಗ ಈ ದುಬಾರಿ ದುನಿಯಾದಲ್ಲಿ ಹೂಗಳ ಬೆಲೆಯೂ ಏನ್​ ಕಮ್ಮಿ ಇಲ್ಲ. ಕಳೆದ ವಾರಕ್ಕೆ ಹೋಲಿಸಿದ್ರೆ ಈ ವಾರ ಹೂಗಳೆಲ್ಲಾ ಕೈಗೆ ಸಿಗದಂತೆ ಗಗನ ಕುಸುಮದಂತಾಗಿಬಿಟ್ಟಿದೆ.

ಯಾವ ಹಬ್ಬ ಇಲ್ಲ.. ಮದುವೆ ಸೀಜನ್​ ಅಲ್ವೇ ಅಲ್ಲ. ಎಲೆಕ್ಷನ್​ ಕೂಡಾ ಇಲ್ಲ. ಆದ್ರೂ ಅಲ್ಪ ಆಯುಷಿ ಹೂಗಳಿಗೆ ಡಿಮ್ಯಾಂಡ್​​ ಹೆಚ್ಚಾಗಿದೆ. ತರಕಾರಿಗಿಂತ ನಾನೇನ್​ ಕಮ್ಮಿ ಅಂತ ತಾನೂ ರೇಟ್​ ಹೆಚ್ಚಿಸಿಕೊಂಡು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿಬಿಟ್ಟಿದೆ.

ದುಬಾರಿ ಹೂವು!

ಮಹಿಳೆಯರ ಮುಡಿಯಲ್ಲಿ ನಲಿದಾಡೋ ಮಲ್ಲಿಗೆ 300 ರೂಪಾಯಿ ಇತ್ತು ಈಗ ಇದರ ಬೆಲೆ ₹800 ರೂಪಾಯಿ ಆಗ್ಬಿಟ್ಟಿದೆ. ಇನ್ನು ಶಕ್ತಿ ದೇವತರಗಳಿಗೆ ಪ್ರಿಯವಾದ ಕನಕಾಂಬರ ಹೂ ಕೂಡಾ 300 ರೂಪಾಯಿ ಇತ್ತು. ಈಗ 800 ರೂಪಾಯಿ ಆಗಿಬಿಟ್ಟಿದ್ದು.. ಹೂವೇ ಸಿಗದಂತಾಗಿದೆ. ಇತ್ತ ಸೇವಂತಿಗೆ ಹೂ ಕೂಡಾ ನಾನೇನು ಕಮ್ಮಿ ಇಲ್ಲ ಅಂತ 180 ಇದ್ದ ತನ್ನ ಬೆಲೆಯನ್ನ ಈಗ 400 ರೂಪಾಯಿ ಮಾಡ್ಕೊಂಡಿದೆ. ಡಿಮ್ಯಾಂಡೇ ಇಲ್ಲದ ಹೂ ಚೆಂಡು ಹೂ. ಅದರ ಬೆಲೆ ಹಿಂದೆ 60 ರೂಪಾಯಿ ಇತ್ತು. ಈಗ ನಾಲ್ಕು ಪಟ್ಟು ಹೆಚ್ಚಾಗಿದ್ದು 200 ರೂಪಾಯಿ ಆಗಿದೆ. ಇನ್ನು ಹಾರಗಳಿಗೆ ಬಳಸುವ ಸುಗಂಧ ರಾಜ ಕೂಡಾ ಕೆಜಿಗೆ 60 ರೂಪಾಯಿ ಇದ್ದಿದ್ದು ಈಗ 200 ರೂಪಾಯಿ ಆಗಿದೆ. ಈಗ್ಲೇ ಇಷ್ಟು ದುಬಾರಿಯಾದ್ರೆ.. ಮುಂದಿನ ತಿಂಗಳಿಂದ ಹಬ್ಬಗಳು ಶುರುವಾಗುತ್ತೆ. ಆಗ ಇನ್ನೆಷ್ಟು ಬೆಲೆಯಾಗುತ್ತೋ ಆ ದೇವರೇ ಬಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Flowers rate: ತರಕಾರಿ.. ಚಿಕನ್.. ಮೊಟ್ಟೆ ಮಾತ್ರವಲ್ಲ; ಹೂವುಗಳೂ ಗಗನ ಕುಸುಮ.. ಬೆಂಗಳೂರಲ್ಲಿ ಬಲು ದುಬಾರಿ..!

https://newsfirstlive.com/wp-content/uploads/2023/07/FLWOER_RATE.jpg

Load More