ಶ್ರಾವಣ ಮಾಸದಲ್ಲೇ ಹೂವಿನ ದರ ಕುಸಿತ
ಪ್ರತಿ ಬಾರಿಯೂ ಲಾಭ ತಂದ್ಕೊಡ್ತಿದ್ದ ಸೇವಂತಿಗೆ
ನಷ್ಟದಿಂದ ಹೊರಬರಲಾರದೇ ರೈತರ ನರಳಾಟ
ಶ್ರಾವಣ ಮಾಸದಲ್ಲೇ ಸೇವಂತಿಗೆ ಹೂವಿನ ಬೆಲೆ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದ್ದು, ಆಕ್ರೋಶಗೊಂಡ ರೈತರು ಹೂವಿನ ಬೆಳೆ ರೂಟರ್ನಿಂದ ನಾಶಪಡಿಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ಸುಮಾರು ವರ್ಷಗಳಿಂದ ಸಣ್ಣ ಹಿಡುವಳಿದಾರರು ಸೇವಂತಿ, ಪಾವಗಡ ಚಾಂದನಿ ಸೆರಿದಂತೆ ಹೂವಿನ ಕೃಷಿ ಮಾಡ್ತಾರೆ. ಪ್ರತೀ ಬಾರಿ ಶ್ರಾವಣದಲ್ಲಿ ಹೂವಿನ ಅವಶ್ಯಕತೆ ಇದ್ದು, ರೈತರಿಗೆ ಉತ್ತಮ ಲಾಭವಾಗುತ್ತಿತ್ತು. ಈ ಬಾರಿಯ ಶ್ರಾವಣದಲ್ಲಿ ಹೂವಿನ ಇಳುವರಿ ಚೆನ್ನಾಗಿದ್ದು, ಬೆಲೆ 40 ವರ್ಷದಲ್ಲೇ ದಾಖಲೆ ಮಟ್ಟದಲ್ಲಿ ಕುಸಿದಿದೆ.
ಸಾವಿರಾರು ರೂಪಾಯಿ ಆದಾಯ ಬರಬೇಕಾದಲ್ಲಿ ನೂರು ರೂಪಾಯಿ ಆದಾಯ ಬರುತ್ತಿದ್ದು, ಆದಾಯ ಕಮ್ಮಿ ಖರ್ಚು ಜಾಸ್ತಿ ಬರ್ತಿದೆ. ಹಾಗಾಗಿ ನಷ್ಟದಿಂದ ಹೊರಬರಲಾರದೇ ರೈತರು ನರಳಾಡುತ್ತಿದ್ದಾರೆ. ಟ್ರ್ಯಾಕ್ಟರ್ ಸಹಾಯದಿಂದ ಜಮೀನಿನಲ್ಲಿರುವ ಹೂವಿನ ಬೆಳೆ ರೂಟರ್ ಹೊಡೆದು ನಾಶಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ