newsfirstkannada.com

ಬಾಲಕಿ ಆರೋಪಕ್ಕೆ ಫುಡ್ ಡೆಲಿವರಿ ಏಜೆಂಟ್​ಗೆ ಥಳಿತ; ಪ್ರಕರಣಕ್ಕೆ ಅಸ್ಸಾಂ ಸಿಎಂ ಎಂಟ್ರಿ, ಸಿದ್ದರಾಮಯ್ಯಗೆ ಮನವಿ ಮಾಡಿದ್ದೇನು?

Share :

17-06-2023

    ಜೂನ್​ 12 ರಂದು ನಡೆದ ಘಟನೆ, ಫುಡ್​ ಡೆಲಿವರಿ ಏಜೆಂಟ್​ಗೆ ಗೂಸಾ

    ಬಾಲಕಿಯ ಆ ಒಂದು ಸುಳ್ಳಿನಿಂದ ಅಮಾಯಕನಿಗೆ ಹಿಗ್ಗಾಮುಗ್ಗಾ ಥಳಿತ

    ಸಿದ್ದರಾಮಯ್ಯಗೆ ಟ್ವೀಟ್ ಮೂಲಕ ಮನವಿ ಮಾಡಿದ ಅಸ್ಸಾಂ ಸಿಎಂ

ಬೆಂಗಳೂರು: ಬಾಲಕಿಯೊಬ್ಬಳು ಫುಡ್ ಡೆಲಿವರಿ ಏಜೆಂಟ್​ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕೆ ಆತನನ್ನು ಕೂಡಿ ಹಾಕಿ ಥಳಿಸಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಎಂಟ್ರಿಯಾಗಿದ್ದು ಫುಡ್ ಡೆಲಿವರಿ ಏಜೆಂಟ್​ಗೆ ಸೂಕ್ತ ನ್ಯಾಯ ಒದಗಿಸುವಂತೆ ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡಿದ್ದಾರೆ. ​ ​

ಈ ಬಗ್ಗೆ ಟ್ವೀಟ್​ ಮಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಬಾಲಕಿಯೊಬ್ಬರ ಸುಳ್ಳು ಆರೋಪಗಳಿಂದ ಅಸ್ಸಾಂ ಮೂಲದ ಫುಡ್ ಡೆಲಿವರಿ ಏಜೆಂಟ್​ ಕಿರುಕುಳ ಎದುರಿಸುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ಸದ್ಯ ಥಳಿತಕ್ಕೆ ಒಳಗಾಗಿರುವ ಏಜೆಂಟ್​ಗೆ ಸೂಕ್ತವಾದ ರಕ್ಷಣೆ ಕೊಟ್ಟು, ನ್ಯಾಯ ಒದಗಿಸಬೇಕು. ಈ ಬಗ್ಗೆ ಕರ್ನಾಟಕ ಸಿಎಂ ಸಿದ್ದರಾಮಯ್ಯರಿಗೆ ಮನವಿ ಮಾಡುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಏನಿದು ಘಟನೆ..? ಅಸ್ಸಾಂ ಸಿಎಂ ಏಕೆ ಪ್ರತಿಕ್ರಿಯಿಸಿದ್ದಾರೆ?

ಇದೇ ಜೂನ್​ 12 ರಂದು ಎಲೆಕ್ಟ್ರಾನ್​ಸಿಟಿ ಬಳಿಯ ಅಪಾರ್ಟ್​ಮೆಂಟ್​ ಒಂದರ ನಿವಾಸಿಗಳಾದ ದಂಪತಿ ತಮ್ಮ ಮಗನನ್ನು ಶಾಲೆಗೆ ಬಿಡಲು ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ತಮ್ಮ ಮಗಳು ಕಾಣೆಯಾಗಿರುತ್ತಾಳೆ. ಹೀಗಾಗಿ ಕೆಲ ಸಮಯ ಹುಡುಕಿದ ಬಳಿಕ ಟೆರೇಸ್​ ಮೇಲೆ ಸಿಗುತ್ತಾಳೆ. ಆಗ ಬಾಲಕಿಯನ್ನು ಎಲ್ಲಿ ಹೋಗಿದ್ದೆ ಎಂದು ಪ್ರಶ್ನೆ ಮಾಡಿದಾಗ, ನನ್ನನ್ನು ಫುಡ್​ ಡೆಲಿವರಿ ಏಜೆಂಟ್​ ಅಪಾರ್ಟ್​ಮೆಂಟ್​ನ ಟೆರೇಸ್‌ಗೆ ಎಳೆದುಕೊಂಡು ಹೋಗಿದ್ದ ಎಂದು ಆರೋಪಿಸುತ್ತಾಳೆ. ಇದರಿಂದ ಕೋಪಗೊಂಡ ಅಪಾರ್ಟ್​ಮೆಂಟ್ ನಿವಾಸಿಗಳು ಸೆಕ್ಯೂರಿಟಿ ಗಾರ್ಡ್​ಗಳಿಂದ ಫುಡ್​ ಡೆಲಿವರಿ ಏಜೆಂಟ್​ಗೆ ಥಳಿಸಿ ರೂಮ್​ನಲ್ಲಿ ಕೂಡಿ ಹಾಕಿರುತ್ತಾರೆ. ಹೀಗಾಗಿ ಕೆಲವು ಡೆಲಿವರಿ ಏಜೆಂಟ್‌ಗಳು ಅಪಾರ್ಟ್​ಮೆಂಟ್​ ಮುಂದೆ ಪ್ರತಿಭಟನೆಗೆ ಮುಂದಾಗಿರುತ್ತಾರೆ.

ನಂತರ ಸ್ಥಳಕ್ಕೆ ಪೊಲೀಸರು ಬಂದು ಅಪಾರ್ಟ್​ಮೆಂಟ್​ನ 7ನೇ ಮಹಡಿಯಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಾಲಕಿ ಒಬ್ಬಳೆ ಟೆರೇಸ್​ ಮೇಲೆ ಆಟವಾಡುತ್ತಿರುವುದು ಕಂಡು ಬಂದಿದೆ. ಇದರಿಂದ ನಿಜ ಏನು ಎನ್ನುವುದು ತಿಳಿದಿದ್ದು, ಏಜೆಂಟ್​ ಏನು ಮಾಡಿಲ್ಲ ಎಂಬುದು ತಿಳಿದು ಬಂದಿದೆ. ಓದುವ ಸಮಯವನ್ನು ಆಟ ಆಡಿದ್ದಕ್ಕೆ ತಂದೆ-ತಾಯಿ ಹೊಡೆಯುತ್ತಾರೆ ಎಂಬ ಭಯದಿಂದ ಬಾಲಕಿ ಫುಡ್​ ಡೆಲಿವರಿ ಬಾಯ್​ ವಿರುದ್ಧ ಸುಳ್ಳು ಆರೋಪ ಮಾಡಿರುತ್ತಾಳೆ. ಇದನ್ನು ಆಕೆ ಕೂಡ ಒಪ್ಪಿಕೊಂಡಿದ್ದಾಳೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕಿ ಆರೋಪಕ್ಕೆ ಫುಡ್ ಡೆಲಿವರಿ ಏಜೆಂಟ್​ಗೆ ಥಳಿತ; ಪ್ರಕರಣಕ್ಕೆ ಅಸ್ಸಾಂ ಸಿಎಂ ಎಂಟ್ರಿ, ಸಿದ್ದರಾಮಯ್ಯಗೆ ಮನವಿ ಮಾಡಿದ್ದೇನು?

https://newsfirstlive.com/wp-content/uploads/2023/06/CM_SIDDARAMAIH.jpg

Load More