ಸರ್ಕಾರದ ಗ್ಯಾರೆಂಟಿ ಯೋಜನೆಗೆ ಸಾರ್ವಜನಿಕರ ಆಗ್ರಹ ಏನು?
ಬಿಪಿಎಲ್ ಕಾರ್ಡ್ ಮಾಡಿಸೋಕೆ ಓಡಾಡ್ತಿದ್ದಾರೆ ಕ್ಯಾನ್ಸರ್ ಪೇಶೆಂಟ್!
ರೇಷನ್ ಕಾರ್ಡ್ ಸಿಗದೇ ತುಂಬಾ ಸಮಸ್ಯೆಯಾಗುತ್ತಿದೆ ಎಂದು ಅಳಲು
ಬೆಂಗಳೂರು: ಸರ್ಕಾರದ ಗ್ಯಾರೆಂಟಿ ಯೋಜನೆಯ ಎಫೆಕ್ಟ್ ಬಡ ಜನರು, ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿಬಿಟ್ಟಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ಪಡಿತರ ಚೀಟಿಗೆ ಅರ್ಜಿ ಸಲ್ಲಿಸೋಕೆ ಜನರು ಮುಗಿ ಬಿದ್ದಿದ್ದಾರೆ. ಆದ್ರೆ ಪೋರ್ಟಲ್ ಮಾತ್ರ ಇನ್ನೂ ಓಪನ್ ಆಗಿಲ್ಲ. ಇದರಿಂದ ರೋಗಿಯೊಬ್ಬರು ಪರದಾಡ್ತಿರೋ ಎಲ್ಲರ ಹೃದಯ ಕಲುಕಿದೆ.
ಜಫ್ರುಲ್ಲಾ ಖಾನ್ ಎಂಬುವವರು ಪಾದರಾಯನಪುರ ನಿವಾಸಿ. ಕ್ಯಾನ್ಸರ್ನಿಂದ ಬಳಲುತ್ತಿರೋ ಇವರು ಸುಮಾರು 2 ತಿಂಗಳಿನಿಂದ ಬಿಪಿಎಲ್ ಕಾರ್ಡ್ ಮಾಡಿಸೋಕೆ ಓಡಾಡ್ತಿದ್ದಾರೆ. ಆದರೆ ಓಡಾಡಿ ಓಡಾಡಿ ಮತ್ತಷ್ಟು ಆರೋಗ್ಯ ಹಾಳಾಗಿದ್ದು ಬಿಟ್ಟರೆ ಇವರಿಗೆ ಕನಿಷ್ಟ ಅರ್ಜಿ ಸಲ್ಲಿಸೋಕೂ ಆಗಿಲ್ಲ. ಬಿಪಿಎಲ್ ಕಾರ್ಡ್ ಇಲ್ಲದೇ ಆಸ್ಪತ್ರೆಗೆ ಲಕ್ಷ ಲಕ್ಷ ಕಟ್ಟಿ ಪರದಾಡುತ್ತಿದ್ದ ಜಫ್ರುಲ್ಲಾ ಖಾನ್ ಜೊತೆಗೆ ನಿಂತ ಇಮ್ರಾನ್ ಪಾಷಾ ತಾವೇ ಖುದ್ದು ಆಹಾರ ಇಲಾಖೆ ಡಿಡಿಗೆ ಆದಷ್ಟು ಬೇಗ ಇವರಿಗೆ ಬಿಪಿಎಲ್ ಕಾರ್ಡ್ ಮಾಡಿಸಿಕೊಡಿ ಅಂತ ಮನವಿ ಸಲ್ಲಿಸಿದ್ದಾರೆ.
ಆದರೆ 4ನೇ ಹಂತದಲ್ಲಿರುವ ಕ್ಯಾನ್ಸರ್ಗೆ ಚಿಕಿತ್ಸೆ ತ್ವರಿತವಾಗಿ ಸಿಗಲಿಲ್ಲ ಅಂದ್ರೆ ಅವರಿಗೆ ಯಾವಾಗ ಏನಾದ್ರು ಆಗಬಹುದು. ಹೀಗೆ ಸಾಕಷ್ಟು ಜನರಿಗೆ ರೇಷನ್ ಕಾರ್ಡ್ ಸಿಗದೇ ತುಂಬಾ ಸಮಸ್ಯೆಗಳಾಗುತ್ತಿದೆ. ಹೀಗಾಗಿ ಆಹಾರ ಇಲಾಖೆ ಆದಷ್ಟು ಬೇಗ ಪೋರ್ಟಲ್ ಓಪನ್ ಮಾಡಬೇಕು ಅಂತ ಇಮ್ರಾನ್ ಪಾಷಾ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಗ್ಯಾರೆಂಟಿಗಳನ್ನ ಪಡೆಯೋ ಉದ್ದೇಶ ಕೆಲವರದ್ದು. ಚಿಕಿತ್ಸೆ ಸೇರಿದಂತೆ ಬೇರೆ ಬೇರೆ ಸರ್ಕಾರಿ ಯೋಜನೆಗಳನ್ನು ಪಡೆಯೋ ಉದ್ದೇಶ ಮತ್ತೆ ಕೆಲವರದ್ದು. ಅದೇನೇ ಇದ್ರೂ ಸುಮಾರು ತಿಂಗಳಿನಿಂದ ಬಂದ್ ಆಗಿರೋ ಪೋರ್ಟಲ್ನ ಓಪನ್ ಮಾಡಬೇಕಿದೆ. ಬಿಪಿಎಲ್ ಕಾರ್ಡ್ ಮಾಡಿಸಿ ಕೊಳ್ಳಲಾಗದೇ ಪರದಾಡುತ್ತಿರುವವರಿಗೆ ಸಹಾಯವಾಗಬೇಕು ಅನ್ನೋದು ಸಾರ್ವಜನಿಕರ ಆಗ್ರಹ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ