ಸೋಷಿಯಲ್ ಮೀಡಿಯಾದಲ್ಲಿ VKC ಮಾಲೀಕ ರಜಾಕ್ ಆತಂಕ
ಲಕ್ಷಾಂತರ ಕಾರ್ಮಿಕರ ಬದುಕಿಗೆ ಅಪಾಯ ಎದುರಾಗುವ ಭೀತಿ
ಕೋವಿಡ್ ಟೈಮ್‌ನಲ್ಲಿ ಪಾದರಕ್ಷೆ ಉದ್ಯಮಕ್ಕೆ ಅತಿ ದೊಡ್ಡ ಪೆಟ್ಟು
ಅಂದದ ಚೆಂದದ ಪಾದರಕ್ಷೆಗಳನ್ನ ಹಾಕೋದು ಅಂದ್ರೆ ಎಲ್ಲರಿಗೂ ಇಷ್ಟಾನೇ. ಆದ್ರೆ ನಮ್ಮ ಕಾಲುಗಳನ್ನ ಸುಂದರವಾಗಿ ಕಾಣುವಂತೆ ಮಾಡೋ ಅದೇ ಪಾದರಕ್ಷೆ ಉದ್ಯಮ ಹತ್ತು ಹಲವು ಸವಾಲುಗಳನ್ನ ಎದುರಿಸುತ್ತಿದೆ. ಈ ಬಗ್ಗೆ ಪ್ರಮುಖ ಪಾದರಕ್ಷೆ ಬ್ರಾಂಡ್‌ಗಳಲ್ಲಿ ಒಂದಾದ VKCಯ ಮಾಲೀಕ ರಜಾಕ್ ಅವರು ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಪಾದರಕ್ಷೆ ಉದ್ಯಮ ಮತ್ತು MSMEಗಳಲ್ಲಿ (ಮೈಕ್ರೋ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ಪಾದರಕ್ಷೆಗಳ ವಲಯ ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸೋ ಪ್ರಯತ್ನ ಮಾಡಿದ್ದಾರೆ ರಜಾಕ್. ಪ್ರಸ್ತುತ 35-40 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ವಲಯಕ್ಕೆ ಈಗ ಬೆಂಬಲದ ಅಗತ್ಯ ಇದೆ ಅನ್ನೋದನ್ನ ಒತ್ತಿ ಹೇಳಿದ್ದಾರೆ. ಇನ್ನು ಪ್ರಮುಖವಾಗಿ ಕ್ವಾಲಿಟಿ ಕಂಟ್ರೋಲ್ ಆರ್ಡರ್ (QCOs) ಮತ್ತು ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸುವ ಅಗತ್ಯತೆಯ ಬಗ್ಗೆಯೂ ಗಮನ ಸೆಳೆದಿದ್ದಾರೆ.
ಭಾರತದ ಆರ್ಥಿಕತೆಗೆ ಪಾದರಕ್ಷೆ ಉದ್ಯಮವೂ ಕೂಡ ಗಮನಾರ್ಹವಾದ ಕೊಡುಗೆ ನೀಡುತ್ತಿದೆ. ಆದ್ರೆ ಪ್ರಸ್ತುತ ಹಲವಾರು ಕಾರಣಗಳಿಂದ ಉದ್ಯಮಕ್ಕೆ ಆತಂಕ ಎದುರಾಗಿದೆ. ಅದ್ರಲ್ಲಿ ಪ್ರಮುಖವಾದದ್ದು ಕೋವಿಡ್-19. ಕೋವಿಡ್‌ನಿಂದಾಗಿ ಪೂರೈಕೆಯ ಸರಪಳಿ ಹಾಳಾಗಿಬಿಡ್ತು. ಉತ್ಪಾದನೆ ಸ್ಥಗಿತವಾಯ್ತು. ಗ್ರಾಹಕರ ಬೇಡಿಕೆಯಲ್ಲೂ ಕುಸಿತ ಆಗಿಬಿಡ್ತು. ಇದು ಸಂಪೂರ್ಣ ಉತ್ಪಾದನೆ ಮತ್ತು ಚಿಲ್ಲರೆ ಮಾರ್ಕೆಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು ಅನ್ನೋದು ರಜಾಕ್ ಅವರು ವ್ಯಕ್ತಪಡಿಸಿರೋ ಕಳವಳವಾಗಿದೆ.
ಎಂಎಸ್‌ಎಂಇ ಪಾದರಕ್ಷೆಗಳ ವಲಯ ಇರೋ ಸವಾಲುಗಳ ನಡುವೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಲಕ್ಷಾಂತರ ಜನರಿಗೆ ಉದ್ಯೋಗವನ್ನು ಸೃಷ್ಟಿಸುವ ಉದ್ಯಮದ ಸಾಮರ್ಥ್ಯ ಕುಸಿತ ಆಗಿದ್ದು, ಸದ್ಯ ಇಡೀ ಉದ್ಯಮಕ್ಕೆ ಸರ್ಕಾರ ಮತ್ತು ಗ್ರಾಹಕರಿಂದ ಬೆಂಬಲದ ಅಗತ್ಯತೆ ಇದೆ ಅನ್ನೋದನ್ನ ಒತ್ತಿ ಹೇಳಿದ್ದಾರೆ. ಪಾದರಕ್ಷೆಗಳಿಗೆ ನೀಡಲಾದ ಗುಣಮಟ್ಟ ನಿಯಂತ್ರಣ ಆದೇಶಗಳ ಬಗ್ಗೆಯೂ ವಿಕೆಸಿ ಮಾಲೀಕ ರಜಾಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದ್ಯ ಅಸ್ತಿತ್ವದಲ್ಲಿರುವ QCOS ವೈಜ್ಞಾನಿಕ ಮತ್ತು ಪ್ರಾಯೋಗಿಕ ವಿಧಾನವನ್ನು ಹೊಂದಿಲ್ಲ ಅನ್ನೋದು ಅವ್ರ ವಾದ. ಇದು ಉತ್ಪಾದನಾ ಪ್ರಕ್ರಿಯೆಯಲ್ಲಿ ಅಡ್ಡಿಯನ್ನ ತಂದೊಡುತ್ತಿದೆ. ಅಸ್ಪಷ್ಟ ಅಥವಾ ಅಪ್ರಾಯೋಗಿಕ ಗುಣಮಟ್ಟದ ಮಾನದಂಡಗಳ ಅನುಸರಣೆ ಉತ್ಪಾದಕರಿಗೆ ಹೊರೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಅವರ ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದಿದ್ದಾರೆ.
ಈ ಎಲ್ಲಾ ಕಾರಣಕ್ಕಾಗಿಯೇ ಉದ್ಯಮದಲ್ಲಿರೋ ಸಮಸ್ಯೆಗಳನ್ನ ಸರಿಪಡಿಸಲು, ಕೇಂದ್ರ MSME ಸಚಿವಾಲಯ, ಕೈಗಾರಿಕೆಗಳು ಮತ್ತು ವಾಣಿಜ್ಯ ಸಚಿವಾಲಯ (GOI), ಮತ್ತು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ (OPIIT) ಸೇರಿದಂತೆ ಪ್ರಮುಖ ಸರ್ಕಾರಿ ಸಂಸ್ಥೆಗಳಿಗೆ ಮನವಿ ಮಾಡಿಕೊಂಡಿದ್ದಾರೆ ರಜಾಕ್. ಹೆಣಗಾಡುತ್ತಿರುವ ಪಾದರಕ್ಷೆಗಳ ಉದ್ಯಮ ಪುನರುಜ್ಜೀವನಗೊಳಿಸೋಕೆ ಇದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬೆಂಬಲ ಈ ಉದ್ಯಮಕ್ಕೆ ಸಂಬಂಧಿಸಿದ ಲಕ್ಷಾಂತರ ಕಾರ್ಮಿಕರ ಜೀವನವನ್ನ ರಕ್ಷಿಸುತ್ತೆ ಎಂದಿದ್ದಾರೆ.
ಇದನ್ನೂ ಓದಿ: ಘೂಮರ್ ಸಿನಿಮಾ ಟ್ರೈಲರ್ಗೆ ಕ್ರಿಕೆಟ್ ಲೋಕ ಫಿದಾ.. ಈ ಬಗ್ಗೆ ಗಂಗೂಲಿ, ಸೆಹ್ವಾಗ್ ಹೇಳಿದ್ದೇನು?
‘ಒಟ್ಟಾಗಿ ಪರಿಹಾರ ಕಂಡುಕೊಳ್ಳೋದು ಅನಿವಾರ್ಯ’
ಪ್ರಸ್ತುತ ಮಾರುಕಟ್ಟೆಯ ಪರಿಸ್ಥಿತಿ ಪಾದರಕ್ಷೆ ಉದ್ಯಮಕ್ಕೆ ಸವಾಲನ್ನು ಮುಂದುವರೆಸ್ತಿರೋದ್ರಿಂದ, ಎಲ್ಲಾ ಪಾಲುದಾರರು ಒಟ್ಟಾಗಿ ಸೇರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋದು ಅನಿವಾರ್ಯವಾಗಿದೆ. ಗ್ರಾಹಕರು ದೇಶೀಯ ಬ್ರಾಂಡ್‌ಗಳನ್ನು ಬೆಂಬಲಿಸುವ ಮೂಲಕ ಮತ್ತು ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನು ಆಯ್ಕೆ ಮಾಡುವ ಮೂಲಕ ಉದ್ಯಮಕ್ಕೆ ಬೆಂಬಲ ನೀಡಬಹುದು. ಇದ್ರ ಜೊತೆಗೆ ಸರ್ಕಾರ ಕೂಡ ತನ್ನ ನೀತಿಗಳನ್ನ ಉದ್ಯಮ ಸ್ನೇಹಿ ಮಾಡೋ ಮೂಲಕ, ಹಣಕಾಸಿನ ಬೆಂಬಲ ನೀಡೋ ಮೂಲಕ, ಸುಲಭವಾಗಿ ವ್ಯಾಪಾರ ಮಾಡುವ ಉಪಕ್ರಮಗಳ ಮೂಲಕ ನೆರವು ನೀಡಬಹುದು ಅಂತ ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್‌ನಿಂದ ಆರ್ಥಿಕ ಮುಗ್ಗಟ್ಟನ್ನ ಎದುರಿಸಿದ ಹಲವು ಉದ್ಯಮಗಳಂತೆ ಪಾದರಕ್ಷೆ ಉದ್ಯಮವೂ ಸವಾಲು ಎದುರಿಸುತ್ತಿದೆ. ಇದನ್ನ ಸರಿಪಡಿಸೋಕೆ ಸಮಗ್ರ ಪ್ರಯತ್ನ ಆಗ್ಬೇಕು. ಇಲ್ಲಿರೋ ಜನರ ಬದುಕು ಸುಭದ್ರಗೊಳಿಸೋಕೆ ಪ್ರಯತ್ನಗಳಾಗಬೇಕು. ಗುಣಮಟ್ಟದ ಮಾನದಂಡಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮತ್ತು ಅಗತ್ಯ ಬೆಂಬಲವನ್ನು ಒದಗಿಸುವ ಮೂಲಕ, ಉದ್ಯಮ ತನ್ನ ವೇಗವನ್ನು ಮರಳಿ ಪಡೆಯೋಕೆ ನೆರವಾಗಬೇಕು. ಹೀಗಾದಲ್ಲಿ ಮಾತ್ರ ಈ ಉದ್ಯಮ ಭಾರತದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡೋದನ್ನು ಮುಂದುವರಿಸಬಹುದು ಅಂತ ವಿಕೆಸಿ ಮಾಲೀಕ ರಜಾಕ್ ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ