newsfirstkannada.com

ಕೋಟಿ ಕೋಟಿ ಆಸ್ತಿಗಾಗಿ ಸ್ಕೆಚ್ ಹಾಕಿದ್ದ ಸೊಸೆ.. ಡ್ರೈವರ್​ ಜೊತೆ ಸೇರಿ ಮಾವನನ್ನೇ ಹೇಗೆ ಮುಗಿಸಿದಳು ಗೊತ್ತಾ?

Share :

Published June 13, 2024 at 3:24pm

  ಗಂಡನಿಗೆ ಗೊತ್ತಿಲ್ಲದೇ ಸ್ವಂತ ಮಾವನ ಕೊಲೆ ಮಾಡಿದ್ದ ಸೊಸೆ

  ಭಯಾನಕ ಪ್ಲಾನ್ ಮಾಡಿ ಕೊಲೆಗೆ ದೊಡ್ಡ ಸಂಚು ರೂಪಿಸಿದ್ದಳು

  ಕೊಲೆ ಮಾಡಲು ಯಾರ್, ಯಾರ್ ಜೊತೆ ಕೈ ಜೋಡಿಸಿದ್ದಳು..?

ಮುಂಬೈ: ಮಹಾರಾಷ್ಟ್ರದ ನಾಗ್ಪುರದಲ್ಲಿ ಹಿಟ್​ ಆ್ಯಂಡ್ ರನ್​ನಿಂದ 82 ವರ್ಷದ ವೃದ್ಧನ ಸಾವಿಗೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ₹300 ಕೋಟಿ ಆಸ್ತಿಯ ಆಸೆಗಾಗಿ ಸ್ವಂತ ಮಾವನನ್ನೇ ಸೊಸೆ ಹಿಟ್​ ಆ್ಯಂಡ್ ರನ್ ಮಾಡಿಸಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ನಾಗ್ಪುರದ ನಿವಾಸಿ ಪುರುಷೋತ್ತಮ ಪುಟ್ಟೇವಾರ್ (82) ರೋಡ್​ ಆಕ್ಸಿಡೆಂಟ್​ನಲ್ಲಿ ಸಾವನ್ನಪ್ಪಿದ ವೃದ್ಧ. ಇವರ ಸೊಸೆಯಾದ ಅರ್ಚನಾ ಮನೀಶ್ ಪುಟ್ಟೇವಾರ್ ನಾಗ್ಪುರದಲ್ಲಿ ಪಟ್ಟಣ ಯೋಜನಾ ವಿಭಾಗದ ಸಹಾಯಕ ನಿರ್ದೇಶಕಿ ಆಗಿ ಕೆಲಸ ಮಾಡುತ್ತಿದ್ದಾರೆ. ಈಕೆಯ ಗಂಡ ಡಾಕ್ಟರ್ ಆಗಿದ್ದಾರೆ. ಮಾವನ ಆಸ್ತಿ ಮೇಲೆ ಕಣ್ಣು ಹಾಕಿದ್ದ ಸೊಸೆ ಹೇಗದರೂ ಮಾಡಿ ಅದನ್ನೆಲ್ಲ ಪಡೆಯಬೇಕೆಂದು ಹತ್ಯೆಯ ಸಂಚು ಮಾಡಿದ್ದಾಳೆ. ಘಟನೆ ಕೊಲೆಯಂತೆ ಇರಬಾರದೆಂದು ಆಕ್ಸಿಡೆಂಟ್​ ಆಗುಂತೆ ಪ್ಲಾನ್ ಮಾಡಿದ್ದಳು ಎಂದು ತನಿಖೆಯಿಂದ ಗೊತ್ತಾಗಿದೆ.

ಇದನ್ನೂ ಓದಿ:ದರ್ಶನ್​, ಪವಿತ್ರಾ ಜೈಲು ಸೇರಿದ ಬೆನ್ನಲ್ಲೇ ಮತ್ತೆ ಬಿಗ್ ಟ್ವಿಸ್ಟ್​ ಕೊಟ್ಟ ಪತ್ನಿ ವಿಜಯಲಕ್ಷ್ಮಿ

ತನ್ನ ಪ್ಲಾನ್​ನಂತೆ ಸೊಸೆ ಅರ್ಚನಾ, ತನ್ನ ಗಂಡನ ಕಾರ್​ ಡ್ರೈವರ್ ಬಾಗ್ಡೆ​ ಜೊತೆ ಡೀಲ್ ಕುದುರಿಸಿ, 1 ಕೋಟಿ ರೂಪಾಯಿಗಳನ್ನು ನೀಡಿದ್ದಾಳೆ. ಹತ್ಯೆಗಾಗಿ 1 ಕೋಟಿ ರೂಪಾಯಿಯಲ್ಲಿ ಡ್ರೈವರ್ ಬಾಗ್ಡೆ ಒಂದು ಕಾರನ್ನು ಖರೀದಿ ಮಾಡಿದ್ದಾನೆ. ಅದರಂತೆ ನೀರಜ್ ನಿಮ್ಜೆ ಮತ್ತು ಸಚಿನ್ ಧಾರ್ಮಿಕ್ ಎನ್ನುವ ಇನ್ನಿಬ್ಬರು ಆರೋಪಿಗಳನ್ನು ಕೃತ್ಯದಲ್ಲಿ ಬಳಸಿಕೊಂಡಿದ್ದಾನೆ. ಅರ್ಚನಾ ಅಂದುಕೊಂಡಂತೆ, ಈ ಮೂವರು ಆರೋಪಿಗಳು ಸೇರಿ ವೃದ್ಧನ ಮೇಲೆ ಕಾರು ಹರಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಈ ಘಟನೆ ಸಂಬಂಧ ಪೊಲೀಸರು 2 ಕಾರುಗಳನ್ನು, ಬಂಗಾರದ ಆಭರಣಗಳನ್ನು ಹಾಗೂ ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಪತ್ನಿ ಮೇಲೆ ಕೋಪ ಮಾಡಿಕೊಂಡ್ರಾ ಧೋನಿ.. ಫಾರಿನ್ ಟ್ರಿಪ್​ಗೆ ಹೋದ್ರೂ ತಪ್ಪುತ್ತಿಲ್ಲ ಆಭಿಮಾನಿಗಳ ಅಭಿಮಾನ

ವೃದ್ಧನ ಹೆಂಡತಿ ಶಕುಂತಲಾರನ್ನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಹೆಂಡತಿಯನ್ನು ಆಸ್ಪತ್ರೆಯಲ್ಲಿ ನೋಡಿಕೊಂಡು ವಾಪಸ್ ಆಗುತ್ತಿದ್ದರು. ಇದನ್ನೇ ಕಾಯುತ್ತಿದ್ದ ಹಂತಕರು ರಸ್ತೆಗೆ ವೃದ್ಧ ಬರುತ್ತಿದ್ದಂತೆ ಕಾರಿನಿಂದ ಗುದ್ದಿ ಎಸ್ಕೇಪ್ ಆಗಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಕೊನೆಗೂ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ಆರೋಪಿಗಳನ್ನ ಹಾಗೂ ಸೊಸೆ ಅರ್ಚನಾ ಮನೀಶ್ ಪುಟ್ಟೇವಾರ್ ಅರೆಸ್ಟ್ ಮಾಡಿದ್ದಾರೆ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಟಿ ಕೋಟಿ ಆಸ್ತಿಗಾಗಿ ಸ್ಕೆಚ್ ಹಾಕಿದ್ದ ಸೊಸೆ.. ಡ್ರೈವರ್​ ಜೊತೆ ಸೇರಿ ಮಾವನನ್ನೇ ಹೇಗೆ ಮುಗಿಸಿದಳು ಗೊತ್ತಾ?

https://newsfirstlive.com/wp-content/uploads/2024/06/MUMBAI_FATHER_IN_LAW.jpg

Load More