newsfirstkannada.com

ಕೊಲೆ ಕೇಸಲ್ಲಿ ಅಭಿಮಾನಿಗಳನ್ನೇ ಬಳಸಿಕೊಂಡ್ರಾ ನಟ ದರ್ಶನ್​? ಏನಿದು ಸ್ಫೋಟಕ ಟ್ವಿಸ್ಟ್​​?

Share :

Published June 18, 2024 at 6:15am

    ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್​ನಲ್ಲಿ ಒಟ್ಟು 19 ಮಂದಿ ಅರೆಸ್ಟ್

    19 ಆರೋಪಿಗಳಲ್ಲಿ 7 ಮಂದಿ ನಟ ದರ್ಶನ್​​ಗೆ ಪರಿಚಯವೇ ಇಲ್ಲವಂತೆ

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅಭಿಮಾನಿಗಳನ್ನು ಬಳಿಸಿಕೊಂಡ ದರ್ಶನ್

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಇದುವರೆಗೂ 19 ಮಂದಿ ಅರೆಸ್ಟ್​​ ಆಗಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ 7 ಆರೋಪಿಗಳು ದರ್ಶನ್​ ಜೊತೆ ನೇರ ಪರಿಚಯ ಇಲ್ಲದಿದ್ರೂ ಕೇಸ್​ನಲ್ಲಿ ಭಾಗಿಯಾಗಿದ್ದಾರೆ. ದರ್ಶನ್​​​ ಮೇಲಿನ ಅಂದಾಭಿಮಾನದಿಂದ ಈ ಪಾಪದ ಕೃತ್ಯಕ್ಕೆ ಕೈ ಹಾಕಿದ್ದಾರೆ ಅನ್ನೊದು ಗೊತ್ತಾಗಿದ್ದು, ನನ್ನ ಸೆಲೆಬ್ರಿಟಿಗಳು ಅಂತ ಅಭಿಮಾನಿಗಳಿಗೆ ಕರೆತಿದ್ದ ದರ್ಶನ್​​ ಅಭಿಮಾನಿಗಳನ್ನೇ ತಮ್ಮ ಲಾಭಕ್ಕಾಗಿ ಬಳಿಸಿಕೊಂಡಿರೋದು ಬಯಲಾಗಿದೆ.

ಒಂದು ಕೊಲೆ.. ಒಬ್ಬ ದೊಡ್ಡ ಸ್ಟಾರ್​ ಆರೋಪಿ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಇದುವರೆಗೆ 19 ಜನ ಅರೆಸ್ಟ್​ ಆಗಿದ್ದಾರೆ. ಒಬ್ಬೊಬ್ಬರು ಒಂದೊಂದು ಪಾತ್ರವನ್ನು ನಿರ್ವಹಿಸಿದ್ದಾರೆ. ಅಭಿಮಾನ.. ವ್ಯಾಮೋಹ.. ಹಣದ ಹಿಂದೆ ಬಿದ್ದವರು ಇದೀಗ ಕಂಬಿ ಎಣೆಸುವಂತಾಗಿದೆ. ಆದ್ರೇ, ಈ ಕೊಲೆ ಕೇಸ್​​ನಲ್ಲಿ ಭಾಗಿಯಾಗಿರೋ ಕೆಲ ಆರೋಪಿಗಳಿಗೆ ನಟ ದರ್ಶನ್ ನೇರವಾಗಿ ಪರಿಚಯವೇ ​ಇಲ್ಲ. ಪರಿಚಯ ಇಲ್ಲದಿದ್ರೂ ದರ್ಶನ್​ ಮೇಲಿನ ಅಂದಾಭಿಮಾನಕ್ಕೆ 7 ಆರೋಪಿಗಳು ಪಾಪ ಕೃತ್ಯದಲ್ಲಿ ಭಾಗಿಯಾಗಿ ಈಗ ಅರೆಸ್ಟ್​ ಆಗಿದ್ದಾರೆ.

ಇದನ್ನೂ ಓದಿ: ತಗಡು ಎಂದಿದ್ದ ದರ್ಶನ್​ಗೆ ಟಾಂಗ್ ಕೊಟ್ಟ ರಾಬರ್ಟ್​ ನಿರ್ಮಾಪಕ​.. ಉಮಾಪತಿ ಗೌಡ ಏನಂದ್ರು?

ಹೌದು, ರೇಣುಕಾಸ್ವಾಮಿಯನ್ನ ಶೆಡ್​ ಕರೆತಂದು ಚಿತ್ರಹಿಂಸೆ ನೀಡಿದ ಡಿ ಗ್ಯಾಂಗ್​​​​​ ಆರೋಪಿಗಳಲ್ಲಿ 7 ಜನ ಆರೋಪಿಗಳಿಗೆ ದರ್ಶನ್​ ನೇರ ಪರಿಚಯವೇ ಇಲ್ಲ ಎಂದು ಗೊತ್ತಾಗಿದೆ. ಈ ಕೊಲೆ ಕೇಸ್​​ನಲ್ಲಿ ಭಾಗಿಯಾದ ಆರೋಪಿಗಳು ದರ್ಶನ್​ನನ್ನ ಈ ಕೊಲೆ ಕೇಸ್​​ನಿಂದಲೇ ಮೊದಲ ಬಾರಿಗೆ ನೋಡಿದ್ದಾರೆ. ಇನ್ನು, ಕೆಲವರು ಪೊಲೀಸ್​​ ಠಾಣೆಯಲ್ಲಿ ಮುಖಾಮುಖಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಭಾಗಿಯಾದವರದು ಒಬ್ಬೊಬ್ಬರು ಒಂದೊಂದು ಪಾತ್ರ ವಹಿಸಿದ್ದಾರೆ ಅನ್ನೋದು ವಿಚಾರಣೆ ಮೂಲಕ ತಿಳಿದು ಬಂದಿದೆ. ಆದ್ರೇ ಕೆಲ ಆರೋಪಿಗಳು ದರ್ಶನ್​​​ ನೋಡಲು ಚಾನ್ಸ್​​​ ಸಿಗತ್ತೇ ಎಂಬ ಕಾರಣಕ್ಕೆ ಈ ಕೃತ್ಯದಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದಾರೆ ಅಂತ ಹೇಳಲಾಗ್ತಿದೆ. ದರ್ಶನ್​​ ಮೇಲಿನ ಅಂದಾಭಿಮಾನವೇ ಇದಕ್ಕೆಲ್ಲಾ ಕಾರಣ ಎಂದು ತಿಳಿದು ಬಂದಿದೆ.

ನಟ ದರ್ಶನ್ ಪರಿಚಯ ಇಲ್ಲದವರು!

ಅನುಕುಮಾರ್: ದರ್ಶನ್​ ನೋಡಲು ಕಿಡ್ನಾಪ್​ನಲ್ಲಿ ಭಾಗಿ
ಜಗದೀಶ್ : ದರ್ಶನ್​ ನೋಡಲು ಕಿಡ್ನಾಪ್​ನಲ್ಲಿ ಭಾಗಿ
ರವಿ: ಕಿಡ್ನಾಪ್ ಮಾಡಿದ ಕಾರಿನ ಮಾಲೀಕ
ಹೇಮಂತ್: ಪುನೀತ್​ನ ಸ್ಕಾರ್ಪಿಯೋ ಕಾರು ತೊಳೆದವ
ಕೇಶವ್: ಮೃತದೇಹ ಸಾಗಿಸಿ ಸರಂಡರ್ ಆದವ
ಕಾರ್ತಿಕ್: ಮೃತದೇಹ ಸಾಗಿಸಿ ಸರಂಡರ್ ಆದವ
ನಿಖಿಲ್ ನಾಯಕ್: ಮೃತದೇಹ ಸಾಗಿಸಿ ಸರಂಡರ್ ಆದವ

ಇದನ್ನೂ ಓದಿ: ಮೆಗ್ಗರ್​​ ರಾಜುನ ಕ್ರೌರ್ಯದ ಇತಿಹಾಸ ತುಂಬಾನೇ ಭಯಾನಕ.. ಚಿತ್ರಹಿಂಸೆ ಅನುಭವಿಸಿದ್ದು ರೇಣುಕಾಸ್ವಾಮಿ ಒಬ್ಬರೇ ಅಲ್ಲ..!

ಚಿತ್ರದುರ್ಗ ಅನುಕುಮಾರ್​​ ದರ್ಶನ್​​​ ನೋಡಲು ಅವಕಾಶ ಸಿಗುತ್ತದೆ ಎಂಬ ಕಾರಣಕ್ಕಾಗಿ ಕಿಡ್ನಾಪ್​ ಕೇಸ್​​ನಲ್ಲಿ ಭಾಗಿಯಾಗಿದ್ದಾನೆ. ಇನ್ನು, ಜಗದೀಶ್​​​​ ಎಂಬಾತನದು ಇದೇ ಕತೆಯಾಗಿದ್ದು, ಈತ ಕೂಡ ನಟ ದರ್ಶನ್​​ ಭೇಟಿಯಾಗುವ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕಾಗಿ ಈ ಕೃತ್ಯದಲ್ಲಿ ಸಿಕ್ಕಾಕೊಂಡಿದ್ದಾನೆ. ರವಿ ಎಂಬಾತ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್​​ ಮಾಡಿದ ಕಾರಿನ ಮಾಲೀಕನಾಗಿದ್ದು, ಈತ ಕೂಡ ಕೇಸ್​​ನಲ್ಲಿ ಆರೋಪಿಯಾಗಿದ್ದಾನೆ. ಹೇಮಂತ್​​ ಎಂಬಾತ ರೇಣುಕಾಸ್ವಾಮಿ ಮೃತದೇಹ ಸಾಗಿಸಿದ್ದ ಸ್ಕಾರ್ಪಿಯೋ ಕಾರು ತೊಳೆದು ಸಾಕ್ಷ್ಯ ನಾಶದ ಮಾಡುವಲ್ಲಿ ಸಹಾಯ ಮಾಡಿದ್ದ.

ಇವರೆಲ್ಲರ ಪೈಕಿ ಕೇಶವ್​​​, ಕಾರ್ತಿಕ್​​ ಮತ್ತು ನಿಖಿಲ್​ ನಾಯಕ್​ ದುಡ್ಡಿನ ಆಸೆಗೆ ಬಿದ್ದು ಮೃತದೇಹ ಸಾಗಿಸಿ ಪೊಲೀಸ್​​ ಸರಂಡರ್​​ ಕಂಬಿ ಎಣಿಸುತ್ತಿದ್ದಾರೆ. ಪವಿತ್ರಾ ಗೌಡ, ಪವನ್​​​​, ವಿನಯ್, ನಾಗರಾಜ್, ಪುನೀತ್, ದೀಪಕ್, ಪ್ರದೋಶ್, ರಾಘವೇಂದ್ರ, ನಂದೀಶ್, ಲಕ್ಷ್ಮಣ್, ಧನರಾಜ್ @ ರಾಜು ಎಂಬವರು ದರ್ಶನ್​​ಗೆ ನೇರ ಪರಿಚಯಸ್ಥರು ಇದರಲ್ಲಿ ಕೆಲವರು ದರ್ಶನ್​ ಮನೆಯಲ್ಲಿ ಕೆಲಸ ಕಾರ್ಯ ಮಾಡಿಕೊಂಡರಾಗಿದ್ದರೇ, ಇನ್ನು ಕೆಲ ಆರೋಪಿಗಳು ದರ್ಶನ್​​ ಆಪ್ತರಾಗಿದ್ದಾರೆ. ಒಟ್ಟಾರೆಯಾಗಿ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನನ್ನ ಸೆಲೆಬ್ರಿಟಿಗಳು ಅಂತ ಅಭಿಮಾನಿಗಳಿಗೆ ಕರೆಯುತ್ತಿದ್ದ ದರ್ಶನ್​​ ಈ ಕೃತ್ಯದಲ್ಲಿ ಅಭಿಮಾನಿಗಳನ್ನೇ ಬಳಿಸಿಕೊಂಡಿರುವುದು ನಿಜಕ್ಕೂ ದುರಂತ ಅಂದ್ರೇ ತಪ್ಪಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕೇಸಲ್ಲಿ ಅಭಿಮಾನಿಗಳನ್ನೇ ಬಳಸಿಕೊಂಡ್ರಾ ನಟ ದರ್ಶನ್​? ಏನಿದು ಸ್ಫೋಟಕ ಟ್ವಿಸ್ಟ್​​?

https://newsfirstlive.com/wp-content/uploads/2024/06/dboss14.jpg

Load More