/newsfirstlive-kannada/media/post_attachments/wp-content/uploads/2023/11/Bigg-Boss-Kannada-13.jpg)
ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋ ವೀಕ್ಷಕರಿಗೆ ಬಿಗ್ ಟ್ವಿಸ್ಟ್ ಕಾದಿದೆ. ಸರಿಯಾಗಿ ಅರ್ಧ ಆಟ ಮುಗೀತು ಅನ್ನೋವಷ್ಟರಲ್ಲೇ ಬಿಗ್‌ಬಾಸ್ ಗೇಮ್ ಈಗ ಶುರುವಾಗೋ ಮುನ್ಸೂಚನೆ ನೀಡಲಾಗಿದೆ. 50 ದಿನಗಳನ್ನು ಪೂರೈಸುತ್ತಿರುವ ಸಮಯಕ್ಕೆ ಸರಿಯಾಗಿ ಬಿಗ್‌ಬಾಸ್ ಮನೆಗೆ ಮತ್ತಿಬ್ಬರ ಗ್ರ್ಯಾಂಡ್ ಎಂಟ್ರಿಯಾಗಿದೆ.
ಬಿಗ್‌ಬಾಸ್ ಸೂಪರ್ ಸಂಡೇ ಎಪಿಸೋಡ್‌ನಲ್ಲಿ ನೀತು ಮನೆಯಿಂದ ಹೊರ ಬಂದಿದ್ದಾರೆ. ಈಗ ಉಳಿದಿರೋರು ನಾವೇ ಅಂತ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದರು. ಆದ್ರೀಗ ಬಿಗ್‌ಬಾಸ್ ಮನೆಯಲ್ಲಿರೋ ಸ್ಪರ್ಧಿಗಳಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟು ವೀಕ್ಷಕರ ಟೆನ್ಷನ್ ಹೆಚ್ಚಿಸಿದೆ.
/newsfirstlive-kannada/media/post_attachments/wp-content/uploads/2023/11/Bigg-Boss-Kannada-15.jpg)
ಬಿಗ್‌ಬಾಸ್ ಮನೆಯಲ್ಲಿ ಆನೆ ಬಂತೊಂದು ಆನೆ ಆಟದಲ್ಲಿ ವಿನಯ್, ಸಂಗೀತಾ, ಕಾರ್ತಿಕ್ ಮಧ್ಯೆ ಜಗಳ ನಡೆಯುತ್ತಿದೆ. ಈ ಫೈಟ್, ಟಾಸ್ಕ್ ತಾರಕಕ್ಕೇರಿರುವಾಗಲೇ ವಿನಯ್‌ಗೆ ಯಾರೋ ಬರ್ತಾವ್ರೆ ಅನ್ನೋ ಸುಳಿವು ಸಿಕ್ಕಿದೆ. ಎಲ್ಲರೂ ಟ್ವಿಸ್ಟ್ ಏನು ಅಂತ ನೋಡುತ್ತಿರುವಾಗಲೇ ಒಬ್ಬರು ಕಾರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಹೊಸ ಸದಸ್ಯರ ಜೊತೆ ಮಾತನಾಡಿರೋ ಸ್ಪರ್ಧಿಗಳಿಗೆ ಹೊಸ ಕಾಂಪಿಟೇಷನ್ ಶುರುವಾಗಿದೆ.
/newsfirstlive-kannada/media/post_attachments/wp-content/uploads/2023/11/Bigg-Boss-Kannada-14.jpg)
ಎಲ್ಲರಿಗೂ ಸರ್‌ಪ್ರೈಸ್ ಕೊಟ್ಟಿರೋ ಆ ವೈಲ್ಡ್ ಕಾರ್ಡ್ ಎಂಟ್ರಿ ಒಬ್ಬರಿಗೆ ಮುಗಿದಿಲ್ಲ. ಸರ್‌ಪ್ರೈಸ್ ನಂಬರ್ 2 ಕೂಡ ಮನೆ ಒಳಗಿಂದಲೇ ಎಂಟ್ರಿಯಾಗಿದೆ. ನಾಮಿನೇಷನ್ ಆಗುತ್ತಿದ್ದಂತೆ ಮನೆ ಚಿಕ್ಕದಾಯ್ತು ಅಂತ ಸ್ಪರ್ಧಿಗಳು ಅಂದುಕೊಂಡಿದ್ರು. ಆದ್ರೀಗ ಬಿಗ್‌ಬಾಸ್ ಮತ್ತೆ ದೊಡ್ಡದಾಗುತ್ತಾ ಇದೆ. ವೈಲ್ಡ್ ಕಾರ್ಡ್‌ನಲ್ಲಿ ಎಂಟ್ರಿ ಕೊಟ್ಟವರು ಯಾರು ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಆದರೆ ಹೊಸ ಎಂಟ್ರಿಗಳು ಬಂದ ಮೇಲೆ ಬಿಗ್‌ಬಾಸ್ ಮನೆ ಕಂಪ್ಲೀಟ್ ಹಾಟ್‌ಸೀಟ್ ಆಗಿದೆ. ಈ ಮಾತನ್ನ ಬಿಗ್‌ಬಾಸ್ ಮನೆಯಲ್ಲಿ ವಿನಯ್ ಬಹಳ ಬೇಗ ಅಂದಾಜಿಸಿದ್ದಾರೆ. ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಹೊಸ ಗೇಮ್ ಈಗ ಆರಂಭ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us