newsfirstkannada.com

ಇನ್ನೂ 9 ದಿನ ಮಳೆಯಾಗುವ ಮುನ್ಸೂಚನೆ; ಈ ಜಿಲ್ಲೆಗಳಲ್ಲಿ ನೆರೆ ಭೀತಿ ಸೃಷ್ಟಿ; ರಾಜ್ಯದಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳು ಒಂದಾ, ಎರಡಾ..

Share :

26-07-2023

  ಅಪಾಯ ಮಟ್ಟ ಮೀರಿ ಹರಿಯುತ್ತಿವೆ ವೇದಗಂಗಾ, ದೂದಗಂಗಾ

  102 ಅಡಿಯಷ್ಟು ತಲುಪಿದ ಕೆಆರ್​ಎಸ್ ಡ್ಯಾಂ ನೀರಿನ ಮಟ್ಟ

  ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ತಪ್ಪಲಿನಲ್ಲಿ 3-4 ಕಡೆ ಗುಡ್ಡ ಕುಸಿದಿದೆ

ಮಳೆರಾಯನ ಅಬ್ಬರಕ್ಕೆ ಕಡುನಾಡಿನ ರಾಜ್ಯಗಳಲ್ಲಿ ರಸ್ತೆಗಳು ಇದೆಯೋ ಇಲ್ಲವೋ ಎಂಬಂತೆ ಮಳೆ ನೀರು ಆವರಿಸಿದೆ. ರಾಜ್ಯದಲ್ಲಿ ಸಾವು, ನೋವು, ಮಳೆಯ ಕಾವು ಹೇಗಿದೆ ಅನ್ನೋದರ ಬಗ್ಗೆ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ.

ಕರುನಾಡಿನಲ್ಲಿ ಮುಂದಿನ 9 ದಿನ ಮಳೆಯಾಗುವ ಎಚ್ಚರಿಕೆ

ವಾರದ ಹಿಂದೆ ಬಾರೋ.. ಬಾರೋ.. ಮಳೆರಾಯ.. ಅಂತಿದ್ದ ಜನ ಈಗ ಸಾಕೋ ಸಾಕೋ ಜವರಾಯ ಅಂತಿದ್ದಾರೆ. ವರುಣದೇವ, ರಾಜ್ಯದಲ್ಲಿ ಅಷ್ಟರ ಮಟ್ಟಿಗೆ ಅಬ್ಬರಿಸುತ್ತಿದ್ದಾನೆ. ಮಳೆ ನೀರು ಹರಿಯೋ ಜಾಗಗಳಲ್ಲಿ ಸಣ್ಣ ಜಲಪಾತಗಳು ಉಗಮಗೊಂಡಿದೆ. ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕುಗೊಂಡ ಹಿನ್ನೆಲೆ ಮುಂದಿನ 9 ದಿನಗಳ ಕಾಲ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗ್ತಿದೆ.. ಹೀಗಾಗಿ ಕೆಆರ್​ಎಸ್ ಡ್ಯಾಂ ಎರಡೇ ದಿನದಲ್ಲಿ ಸುಮಾರು 102 ಅಡಿಗಳಷ್ಟು ಭರ್ತಿಯಾಗಿದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಡ್ಯಾಂ​ನಲ್ಲಿ ಸದ್ಯದ ನೀರಿನ ಮಟ್ಟ 102 ಅಡಿಗೆ ತಲುಪಿದ್ದು, ರೈತರಲ್ಲಿ ಸಂತಸ ತಂದಿದೆ.

ನಿರಂತರ ಮಳೆಯಿಂದಾಗಿ ಹೆಚ್​.ಡಿ ಕೋಟೆಯಲ್ಲಿರುವ ಕಬಿನಿ ಡ್ಯಾಂ ಭರ್ತಿಗೆ ಸಮೀಪಿಸ್ತಿದೆ. ಇತ್ತ ಕೆ.ಆರ್.ನಗರದ ಚುಂಚನಕಟ್ಟೆ ಜಲಪಾತಕ್ಕೆ ಜೀವಕಳೆ ಬಂದಿದೆ.

ಶಿವಮೊಗ್ಗದಲ್ಲಿ ತುಂಗೆ ಅಪಾಯದ ಮಟ್ಟಮೀರಿದೆ.. ಗಾಜನೂರಿನ ತುಂಗಾ ಜಲಾಶಯದಿಂದ 60 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಹಳೇ ಶಿವಮೊಗ್ಗ ಭಾಗಕ್ಕೆ ನೀರು ನುಗ್ಗುವ ಭೀತಿ ಶುರು‌ವಾಗಿದೆ.

ಮಹಾರಾಷ್ಟ್ರ ಘಟ್ಟ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಬೆಳಗಾವಿಯ ವೇದಗಂಗಾ, ದೂದಗಂದಾ ಸೇರಿ ಸಪ್ತನದಿಗಳು ಅಪಾಯದ ಮಟ್ಟ ಮೀರಿವೆ. ನಿಪ್ಪಾಣಿಯ ಕೆಲ ಗ್ರಾಮಗಳಿಗೆ ನೆರೆ ಭೀತಿ ಎದುರಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜನರನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗ್ತಿದೆ..

ಅಪಾಯವಿದ್ದರೂ ಕಾಫಿನಾಡಲ್ಲಿ ನಿಲ್ಲದ ಯುವಕರ ಹುಚ್ಚಾಟ

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಮಳೆ ಆಗ್ತಿದೆ. ಕೊಪ್ಪ ತಾಲೂಕಿನ ಉತ್ತಮೇಶ್ವರ ಸೇತುವೆ ಮೇಲೆ ತುಂಗೆ ರಭಸದಿಂದ ಹರಿಯುತ್ತಿದ್ದಾಳೆ. ಆ ಅಪಾಯ ಗೊತ್ತಿದ್ರೂ ಯುವಕರ ತಂಡ ಓಡಾಡ್ತಾ ಹುಚ್ಚಾಟವಾಡಿದೆ. ಇತ್ತ, ನಾರ್ವೆಯಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ, ಅಡಿಕೆ, ಕಾಫಿ,‌ ಕಾಳು ಮೆಣಸು ಗಿಡಗಳಿಗೆ ಹಾನಿ ಮಾಡಿ ಅವಾಂತರ ಸೃಷ್ಟಿಸಿದೆ.

ಡೇಂಜರ್ ಬಂಡೆಗಳ ಮೇಲೆ ನಿಂತು ಸೆಲ್ಫಿ.. ಮೋಜು.. ಮಸ್ತಿ

ಕಾಫಿನಾಡು ಜಿಲ್ಲಾಡಳಿತಕ್ಕೆ ಪ್ರವಾಸಿಗರಿಂದ ತಲೆನೋವು ಹೆಚ್ಚಾಗ್ತಿದೆ. ಮಾಡ್ಬೇಡಿ ಅಂದಿದ್ದನ್ನೇ ಟೂರಿಸ್ಟ್​ಗಳು ಮಾಡ್ತಿದ್ದಾರೆ. ಚಾರ್ಮಾಡಿ ಘಾಟಿಯ ಡೇಂಜರ್ ಬಂಡೆ ಮೇಲೆ ಹತ್ತಿ ಸೆಲ್ಫಿಗೆ ಪೋಸ್ ಕೊಡ್ತಿದ್ದು, ಪ್ರವಾಸಿಗರ ಹುಚ್ಚಾಟಕ್ಕೆ ಪೊಲೀಸರು ಬೆಸ್ತುಬಿದ್ದಿದ್ದಾರೆ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ತಪ್ಪಲಿನಲ್ಲಿ 3-4 ಕಡೆ ಗುಡ್ಡ ಕುಸಿದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಸ್ತೆಗೆ ಬ್ಯಾರಿಕೇಡ್​​ ಹಾಕಿ ಪ್ರವಾಸಿಗರ ಆಗಮನಕ್ಕೆ ಕಡಿವಾಣ ಹಾಕಲಾಗಿದೆ. ಅಲ್ಲದೆ, ಮೂಡಿಗೆರೆ ಭಾಗದ ವಸ್ತಾರೆ ಸಮೀಪದ ಮಾವೀನಹಳ್ಳಿಯ ರಾಜ್ಯ ಹೆದ್ದಾರಿಗೆ ಮರ ಬಿದ್ದು ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ವಾಣಿ ವಿಲಾಸ ಭರ್ತಿ

ಮಧ್ಯ ಕರ್ನಾಟಕದ ಜಲಪಾತ್ರೆ ವಾಣಿ ವಿಲಾಸ ಭರ್ತಿ ಆಗ್ತಿದೆ. ಕೋಟೆನಾಡಿನ ಜಲಾಶಯಕ್ಕೆ ಒಂದೆ ದಿನ 999 ಕ್ಯೂಸೆಕ್ ಒಳಹರಿವು ನೀರು ಹೆಚ್ಚಿದ್ದು ರೈತರಲ್ಲಿ ಸಂತಸ ತಂದಿದೆ. ಇನ್ನು, ಭರಮಣ್ಣ ನಾಯಕರ ಕೆರೆಗೆ ಭದ್ರಾ ಮೇಲ್ದಂಡೆ ನೀರು ಹರಿದು ಬಂದಿದ್ದು, ಜನರ ಸಂತಸಕ್ಕೆ ಕಾರಣವಾಗಿದೆ.

ನೆರೆ ಭೀತಿ ಸೃಷ್ಟಿ

ಗದಗ ಜಿಲ್ಲೆಯ ಮಲಪ್ರಭಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಆಗ್ತಿದೆ. ಹೊಳೆ ಆಲೂರು ಗ್ರಾಮದ ಬಳಿಯ ತಾತ್ಕಾಲಿಕ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ, ರೋಣ ತಾಲೂಕಿನ ಗ್ರಾಮಗಳಿಗೆ ನೆರೆ ಭೀತಿ ಸೃಷ್ಟಿಸಿದೆ.

ಕಲಬುರಗಿ ಜಿಲ್ಲೆ ಸೇಡಂನ ಮಳಖೇಡ ಬಳಿ ಸೇತುವೆ ಜಲಾವೃತಗೊಂಡಿದೆ.. ಚಂದ್ರಂಪಳ್ಳಿ ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ಕಲಬುರಗಿ ಟು ಸೇಡಂ ಸಂಚಾರ ಬಂದ್​​ ಆಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಕಳೆದ 8 ದಿನದಿಂದ ಜಿಟಿ ಜಿಟಿ ಮಳೆಯಾಗ್ತಿದ್ದು, ಜನಜೀವನ ಅಸ್ತವ್ಯಸ್ತ ಆಗಿದೆ.. ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದು, ಮುಂಜಾಗ್ರತವಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ನೂ 9 ದಿನ ಮಳೆಯಾಗುವ ಮುನ್ಸೂಚನೆ; ಈ ಜಿಲ್ಲೆಗಳಲ್ಲಿ ನೆರೆ ಭೀತಿ ಸೃಷ್ಟಿ; ರಾಜ್ಯದಲ್ಲಿ ಮಳೆ ಸೃಷ್ಟಿಸಿದ ಅವಾಂತರಗಳು ಒಂದಾ, ಎರಡಾ..

https://newsfirstlive.com/wp-content/uploads/2023/07/Heavy-Rain_Karnataka.jpg

Load More