newsfirstkannada.com

ಭೀಕರ ಬೈಕ್​ ಅಪಘಾತ.. ಭಾರತ ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರಜೆ ಸಾವು

Share :

30-10-2023

    ಭಾರತ ಪ್ರವಾಸಕ್ಕೆ ಬಂದಿದ್ದ ಐವರು ಫ್ರಾನ್ಸ್ ಪ್ರಜೆಗಳು

    ಭೀಕರ ಬೈಕ್​ ಅಪಘಾತದಲ್ಲಿ ಓರ್ವ ವಿದೇಶಿಗ ಸಾವು

    ಬಸಾಪುರ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದ ಘಟನೆ

ಕೊಪ್ಪಳ: ಭಾರತ ಪ್ರವಾಸಕ್ಕೆ ಬಂದಿದ್ದ ಐವರು ಫ್ರಾನ್ಸ್ ಪ್ರಜೆಗಳ ಪೈಕಿ ಓರ್ವ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಇವರ ಹೆಸರು ಮನ್ಸಾಲಿಯೆರ್ ಡಿಡಿಯರ್ (63). ಬೈಕ್‌ ಮುಗಿಚಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರವಾಸಕ್ಕೆ ಬಂದಿದ್ದ ನಾಲ್ವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಐವರ ಫ್ರಾನ್ಸ್ ಪ್ರಜೆಗಳ ತಂಡ ಅ. 24ರಂದು ತಮಿಳನಾಡಿನ ಚೆನ್ನೈಗೆ ಬಂದಿಳಿದಿದ್ದರು. ಚೆನ್ನೈ ಮೂಲಕ ಭಾರತ ಪ್ರವಾಸ ಹೊರಟಿದ್ದರು. ಬೈಕ್​ಗಳನ್ನು ಚೆನ್ನೈನಲ್ಲೇ ಬಾಡಿಗೆಗೆ ಪಡೆದ ಇವರು ಹಂಪಿಗೆ ಭೇಟಿ ನೀಡಿ ಆನೆಗೊಂದಿ ಸೇರಿ ಐತಿಹಾಸಿಕ ಸ್ಥಳಗಳನ್ನು ಸುತ್ತಿದ್ದರು.

ಬಳಿಕ ಅಲ್ಲಿಂದ ನೇರ ಗೋವಾಗೆ ತೆರಳುವಾಗ ಕೊಪ್ಪಳದ ಬಸಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ ಬಳಿ ಬೈಕ್ ಸ್ಕಿಡ್ ಆಗಿ ಓರ್ವ ಪ್ರಜೆ ಮೃತಪಟ್ಟಿದ್ದಾರೆ. ಬೈಕ್​​ ಸ್ಕಿಡ್​ ಆಗಲು ವೇಗವಾಗಿ ಬರುತ್ತಿದ್ದ ಟಿಪ್ಪರ್​ ಲಾರಿಗಳೇ ಕಾರಣ ಎನ್ನಲಾಗಿದೆ.

ಕೊಪ್ಪಳ ಗ್ರಾಮೀಣ ಠಾಣಾ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇರಿಸಿದ್ದಾರೆ. ಫ್ರಾನ್ಸ್ ರಾಯಭಾರಿ ಕಚೇರಿಗೆ ಈಗಾಗಲೇ ಮಾಹಿತಿ ರವಾನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೀಕರ ಬೈಕ್​ ಅಪಘಾತ.. ಭಾರತ ಪ್ರವಾಸಕ್ಕೆ ಬಂದಿದ್ದ ವಿದೇಶಿ ಪ್ರಜೆ ಸಾವು

https://newsfirstlive.com/wp-content/uploads/2023/10/Accident-1-1.jpg

Load More