newsfirstkannada.com

ವಿದೇಶಿ ಕೋಚ್​ಗಳ ಮಾರ್ಗದರ್ಶನದಲ್ಲೇ ಹೆಚ್ಚು ಸಕ್ಸಸ್; ಭಾರತ ತಂಡಕ್ಕೆ ಬೇಕಾ ಫಾರಿನ್ ಕೋಚ್..!?

Share :

16-08-2023

    ಜಾನ್​ರೈಟ್​​ ಮಾರ್ಗದರ್ಶನದಲ್ಲಿ ತಂಡಕ್ಕೆ ನಯಾ ಲುಕ್​

    28 ವರ್ಷಗಳ ಬಳಿಕ ವಿಶ್ವಕಪ್​ ಗೆಲ್ಲಿಸಿದ್ದ ಗ್ಯಾರಿ ಕರ್ಸ್ಟನ್

    ಫ್ಲೆಚರ್​ ಕೋಚಿಂಗ್​ನಲ್ಲಿ ಚಾಂಪಿಯನ್ಸ್​ ಟ್ರೋಫಿ ಜಯ

ಮುಂಬರೋ ಏಕದಿನ ವಿಶ್ವಕಪ್​ ಟೂರ್ನಿಯ ಬಳಿಕ ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಬಿರುಗಾಳಿ ಬೀಸೋದು ಕನ್ಫರ್ಮ್! ಯಾವುದು ಬದಲಾಗದಿದ್ರೂ ಕೋಚ್​ ಹುದ್ದೆಯಿಂದ ದ್ರಾವಿಡ್​ ಕೆಳಗಿಯೋ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ದ್ರಾವಿಡ್​​ ಗುಡ್​ ಬೈ ಹೇಳಿದ್ರೆ, ಬಿಸಿಸಿಐ ಹೀಗೆ ಮಾಡಬೇಕು ಅಂತಾ ಫ್ಯಾನ್ಸ್​, ಕ್ರಿಕೆಟ್​ ಎಕ್ಸ್​​ಪರ್ಟ್ಸ್​ ವಿಶೇಷ ಸಲಹೆ ನೀಡಿದ್ದಾರೆ.

ವಿಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಮ್​ ಇಂಡಿಯಾ ಕೋಚ್ ರಾಹುಲ್​ ದ್ರಾವಿಡ್​​​​ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ದ್ರಾವಿಡ್​ ಕಾರ್ಯ ವೈಖರಿ ಸಿಕ್ಕಾಪಟ್ಟೆ ಟೀಕೆಗೆ ಒಳಗಾಗ್ತಿದೆ. ದ್ರಾವಿಡ್​ ಕೋಚ್​ ಆದಾಗ ನಿರೀಕ್ಷೆ ದುಪ್ಪಟ್ಟಿತ್ತು. ಬಿಗ್​​ಸ್ಟೇಜ್​ಗಳಲ್ಲಿ ದ್ರಾವಿಡ್ ನಿರಾಸೆ ಮೂಡಿಸಿದ್ರು. ಇದೀಗ ದುರ್ಬಲ ವಿಂಡೀಸ್​ ವಿರುದ್ಧವೂ ಮುಖಭಂಗವಾಗಿದೆ.

ಟೀಮ್​ ಇಂಡಿಯಾಗೆ ಬೇಕಾ ವಿದೇಶಿ ಕೋಚ್​..?

ಟೀಮ್​ ಇಂಡಿಯಾಗೆ ಫಾರಿನ್​ ಕೋಚ್​ ಬೇಕು ಎಂಬ ಕೂಗು ಸದ್ಯ ಕೇಳಿ ಬರುತ್ತಿದೆ. ಈ ಹಿಂದೆ ವಿದೇಶಿ ಕೋಚ್​ಗಳ ಮಾರ್ಗದರ್ಶನದಲ್ಲಿ ಯಶಸ್ಸು ಕಂಡಿದ್ದ ಟೀಮ್​ ಇಂಡಿಯಾ, ಐಸಿಸಿ ಟ್ರೋಫಿಗಳನ್ನೂ ಜಯಿಸಿತ್ತು. ಹೀಗಾಗಿ ವಿದೇಶಿ ಕೋಚ್​ ಆಯ್ಕೆ ಮಾಡಬೇಕು ಅನ್ನೋದು ಫ್ಯಾನ್ಸ್​ ಹಾಗೂ ಕ್ರಿಕೆಟ್​ ಎಕ್ಸ್​​ಪರ್ಟ್​​​ಗಳ ಒತ್ತಾಯವಾಗಿದೆ.

ಜಾನ್​ರೈಟ್​​ ಮಾರ್ಗದರ್ಶನದಲ್ಲಿ ತಂಡಕ್ಕೆ ನಯಾ ಲುಕ್​​..!

ಮ್ಯಾಚ್​​ ಫಿಕ್ಸಿಂಗ್​ನಂತಹ ಪೆಡಂಭೂತ ಟೀಮ್​ ಇಂಡಿಯಾಗೆ ಅಂಟಿದ ಕರಾಳ ದಿನಗಳಲ್ಲಿ ತಂಡಕ್ಕೆ ನಯಾ ಲುಕ್​ ಕೊಟ್ಟಿದ್ದು, ಜಾನ್​ ರೈಟ್​​. ತಂಡದ ಮೊದಲ ವಿದೇಶಿ ಕೋಚ್​ ಆಗಿ ಆಯ್ಕೆಯಾದ ರೈಟ್​, ಹಲವು ಅವಿಸ್ಮರಣೀಯ ಗೆಲುವುಗಳಿಗೆ ಕಾರಣರಾದರು. ಜಾನ್​ ರೈಟ್​ ಕೋಚಿಂಗ್​ನಲ್ಲಿ 2002ರ ಚಾಂಪಿಯನ್ಸ್​ ಟ್ರೋಫಿ ಗೆದ್ದ ಭಾರತ ತಂಡ, 20 ವರ್ಷಗಳ ಬಳಿಕ 2003ರ ಏಕದಿನ ವಿಶ್ವಕಪ್​ನಲ್ಲಿ ಫೈನಲ್​ ಪ್ರವೇಶಿಸಿತ್ತು.

28 ವರ್ಷಗಳ ಬಳಿಕ ವಿಶ್ವಕಪ್​ ಗೆಲ್ಲಿಸಿದ ಗ್ಯಾರಿ ಕರ್ಸ್ಟನ್.​.!

2008ರಲ್ಲಿ ಟೀಮ್​ ಇಂಡಿಯಾ ಕೋಚ್​ ಹುದ್ದೆಗೇರಿದ ಗ್ಯಾರಿ ಕರ್ಸ್ಟನ್ ಹೆಸರನ್ನು ಯಾವೊಬ್ಬ ಭಾರತೀಯ ಅಭಿಮಾನಿ ಕೂಡ ಮೆರೆಯೋಕೆ ಸಾಧ್ಯವಿಲ್ಲ. ಗ್ಯಾರಿ ಕರ್ಸ್ಟನ್ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್​ ಟ್ರೋಫಿಗೆ ಮುತ್ತಿಕ್ಕಿತ್ತು. ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿದ್ದ ಕ್ಷಣ ಕೊನೆಗೂ ನನಸಾಗಿತ್ತು. ಇಷ್ಟೇ ಅಲ್ಲ.. ಟೆಸ್ಟ್​ ಕ್ರಿಕೆಟ್​ನಲ್ಲಿ ನಂಬರ್​ 1 ಸ್ಥಾನಕ್ಕೇರಿದ ಸಾಧನೆಯನ್ನೂ ಮಾಡಿತ್ತು.

ಫ್ಲೆಚರ್​ ಕೋಚಿಂಗ್​ನಲ್ಲಿ ಚಾಂಪಿಯನ್ಸ್​ ಟ್ರೋಫಿ ಜಯ..!

ಕರ್ಸ್ಟನ್​ ಬಳಿಕ ಹೆಡ್​ ಕೋಚ್​ ಆಗಿ ಆಯ್ಕೆ ಡಂಕನ್​ ಫ್ಲೆಚರ್​ ಕೂಡ ತಂಡವನ್ನು ಯಶಸ್ಸಿನ ಹಾದಿಯಲ್ಲೇ ಮುನ್ನಡೆಸಿದ್ರು. 2011ರಿಂದ 2015ರವರೆಗೆ ಫ್ಲೆಚರ್​ ಕೋಚ್​ ಆಗಿದ್ದ ಅವಧಿಯಲ್ಲಿ ಲಿಮಿಟೆಡ್​ ಓವರ್​ ಫಾರ್ಮೆಟ್​ನಲ್ಲಿ ತಂಡ ಯಶಸ್ಸಿನ ನಾಗಲೋಟದಲ್ಲಿತ್ತು. ಫ್ಲೆಚರ್ ಮಾರ್ಗದರ್ಶನದಲ್ಲಿ 2013ರ ಐಸಿಸಿ ಚಾಂಪಿಯನ್ಸ್​ ಟ್ರೋಫಿ ಕಿರೀಟವನ್ನ ಟೀಮ್​ ಇಂಡಿಯಾ ಗೆದ್ದು ಬೀಗಿತ್ತು.

ಭಾರತೀಯ ಕೋಚ್​ಗಳ ಅಡಿಯಲ್ಲಿ ಆಟ ಅಷ್ಟಕಷ್ಟೇ..!

ಫಾರಿನ್​ ಕೋಚ್​​ಗಳ ಅಡಿಯಲ್ಲಿ ಐಸಿಸಿ ಟೂರ್ನಿಗಳಲ್ಲಿ ಸಕ್ಸಸ್​ ಕಂಡಿರುವ ಟೀಮ್​ ಇಂಡಿಯಾ, ಭಾರತೀಯ ಕೋಚ್​ಗಳ ಮಾರ್ಗದರ್ಶನದಲ್ಲಿ ಪ್ಲಾಫ್​ ಶೋ ನೀಡಿದೆ. ಅನಿಲ್​ ಕುಂಬ್ಳೆ, ರವಿ ಶಾಸ್ತ್ರಿ ಅಂತಾ ದಿಗ್ಗಜರೆ ಬಂದರೂ ಐಸಿಸಿ ಟ್ರೋಫಿ ಅನ್ನೋದು ಮರೀಚಿಕೆ ಆಗಿದೆ. ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲೂ ಅದೇ ಕಥೆ.

ದ್ರಾವಿಡ್​ ಬಳಿಕ ಟೀಮ್​ ಇಂಡಿಯಾಗೆ ವಿದೇಶಿ ಕೋಚ್​

ಈಗಾಗಲೇ ಕಳೆದ ಸೀಸನ್​ನ ಏಷ್ಯಾಕಪ್​ ಹಾಗೂ ಟಿ-20 ವಿಶ್ವಕಪ್​ ಟೂರ್ನಿಗಳಲ್ಲಿ ದ್ರಾವಿಡ್​ ಕೋಚಿಂಗ್​ನಲ್ಲಿ ಟೀಮ್​ ಇಂಡಿಯಾ ಮಕಾಡೆ ಮಲಗಿದೆ. ಸದ್ಯ ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಏಷ್ಯಾಕಪ್​ ಹಾಗೂ ಏಕದಿನ ವಿಶ್ವಕಪ್​ನಂತಹ ಪ್ರತಿಷ್ಟಿತ ಟೂರ್ನಿಗಳಲ್ಲಿ ಟೀಮ್​ ಇಂಡಿಯಾ ಕಣಕ್ಕಿಳಿಯಲಿದೆ. ಅದಕ್ಕೂ ಮುನ್ನ ಮತ್ತೆ ಕೋಚ್​ ಬದಲಾವಣೆಯ ಬಗ್ಗೆ ಚರ್ಚೆಯಾಗ್ತಿದೆ. ವಿಶ್ವಕಪ್​ ಬಳಿಕ ಕೋಚ್​ ದ್ರಾವಿಡ್​ ಒಪ್ಪಂದ ಅಂತ್ಯವಾಗಲಿದ್ದು, ಆ ಬಳಿಕ ವಿದೇಶಿ ಕೋಚ್​ ನೇಮಿಸಬೇಕು ಅನ್ನೋ ಕೂಗು ಕೇಳಿ ಬರ್ತಾಯಿವೆ.
ಫ್ಯಾನ್ಸ್​ ಹಾಗೂ ಕ್ರಿಕೆಟ್​ ಎಕ್ಸ್​​ಪರ್ಟ್​ಗಳು ಮಾತ್ರವಲ್ಲ.. ಬಿಸಿಸಿಐ ವಲಯದಲ್ಲೂ ಫಾರಿನ್​ ಕೋಚ್​ಗೆ ಮಣೆ ಹಾಕುವ ಬಗ್ಗೆ ಚರ್ಚೆಗಳು ನಡೆದಿವೆ. ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ವಿಶ್ವಕಪ್​ ಮುಗಿಯೋವರೆಗೂ ಕಾಯಬೇಕಿದೆ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿದೇಶಿ ಕೋಚ್​ಗಳ ಮಾರ್ಗದರ್ಶನದಲ್ಲೇ ಹೆಚ್ಚು ಸಕ್ಸಸ್; ಭಾರತ ತಂಡಕ್ಕೆ ಬೇಕಾ ಫಾರಿನ್ ಕೋಚ್..!?

https://newsfirstlive.com/wp-content/uploads/2023/07/HARDIK_ROHIT_KOHLI.jpg

Load More