ನಮಿಬಿಯಾದ ಇಬ್ಬರು ತಜ್ಞರಿಂದ ಸುಪ್ರೀಂಕೋರ್ಟ್ಗೆ ಪತ್ರ
ಭಾರತದಲ್ಲಿರುವ ತಜ್ಞರಿಗೆ ಅನುಭವ ಇಲ್ಲ ಎಂದ ಎಕ್ಸ್ಪರ್ಟ್
ಸಮಸ್ಯೆ ಉಲ್ಲೇಖಿಸಿ, ತುರ್ತು ಪರಿಹಾರ ಕಂಡುಕೊಳ್ಳಲು ಒತ್ತಾಯ
ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಿಂದ ಭಾರತಕ್ಕೆ ತಂದಿದ್ದ ಚಿರತೆಗಳ ಸರಣಿ ಸಾವು ಆಗುತ್ತಿದೆ. ನಿನ್ನೆ ಸಾವನ್ನಪ್ಪಿರುವ ಧಾತ್ರಿ ಎಂಬ ಹೆಣ್ಣು ಚಿರತೆಯ ಸಾವಿಗೆ ಕಾರಣ ಹುಡುಕಲು ಅರಣ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆಯನ್ನು ನಡೆಸಿದ್ದಾರೆ. ಈ ಬೆನ್ನಲ್ಲೇ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ದಕ್ಷಿಣ ಆಫ್ರಿಕಾದ ತಜ್ಞರು ಕನ್ಸರ್ನ್ ರೈಸ್ ಮಾಡಿದ್ದು, ಇ-ಮೇಲ್ ಮೂಲಕ ಸುಪ್ರೀಂ ಕೋರ್ಟ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ವರದಿಗಳ ಪ್ರಕಾರ, ಎರಡು ಪ್ರತ್ಯೇಕ ಪತ್ರಗಳನ್ನು ಸುಪ್ರೀಂ ಕೋರ್ಟ್ ಗೆ ಬಂದಿವೆ. ಕುನೋ ಅಭಯಾರಣ್ಯದಲ್ಲಿರುವ ಚಿರತೆಗಳ ನಿರ್ವಹಣೆ ಸಂಬಂಧ ಎರಡು ಪತ್ರಗಳು ಬಂದಿವೆ.
‘ಅನುಭವವೇ ಇಲ್ಲ’ ಎಂದ ವಿದೇಶಿ ತಜ್ಞರು
ಈ ಪತ್ರದಲ್ಲಿ ಎಕ್ಸ್ಪರ್ಟ್, ಚೀತಾ ಪ್ರಾಜೆಕ್ಟ್ ಅನ್ನು ಸಂಪೂರ್ಣವಾಗಿ ಭಾರತದಲ್ಲಿರುವ ತಜ್ಞರ ಸಮಿತಿ ನಿರ್ಲಕ್ಷ್ಯ ಮಾಡಿದೆ. ಅವುಗಳನ್ನು ಕಾಪಾಡಿಕೊಳ್ಳಲು ಗಂಭೀರವಾಗಿ ಕೆಲಸ ಮಾಡಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರೆಟೋರಿಯಾ ವಿವಿಯ ವನ್ಯಜೀವಿ ತಜ್ಞ ಪ್ರೊಫೆಸರ್ ಅಡ್ರೈನ್ ಟೊರ್ಡಿಫಿ ಮತ್ತು ನಮಿಬಿಯಾ ಚೀತ್ ಕನ್ಸ್ರ್ವೇಷನ್ ಫಂಡ್ನ ನಿರ್ದೇಶಕ ಡಾ. ಲೌರೀ ಮಾರ್ಕ್ ಸುಪ್ರೀಂ ಕೋರ್ಟ್ಗೆ ಪತ್ರ ಬರೆದಿದ್ದಾರೆ. ವರದಿಗಳ ಪ್ರಕಾರ ಒಂದು ಪತ್ರದಲ್ಲಿ ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಇರುವ ಸದ್ಯದ ಮ್ಯಾನೇಜ್ಮೆಂಟ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅವರಿಗೆ ಸೂಕ್ತ ತರಬೇತಿಯ ಕೊರತೆ ಇದ್ದಂತೆ ಕಾಣುತ್ತಿದೆ. ಅಲ್ಲಿರುವ ಎಲ್ಲಾ ತಜ್ಞರು ಕೂಡ ಈ ಪ್ರಾಜೆಕ್ಟ್ ಬಗ್ಗೆ ಅನುಭವ ಇಲ್ಲದವರು ಅಂತಾ ಆರೋಪಿಸಿದ್ದಾರೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾದ ಮತ್ತೊಂದು ಚಿರತೆ ಸಾವು.. ಒಟ್ಟು 9 ಚೀತಾಗಳ ದುರಂತ ಅಂತ್ಯ.. ಇದಕ್ಕೆಲ್ಲ ಹೊಣೆ ಯಾರು..?
ಉಳಿದ ಚಿರತೆಗಳ ರಕ್ಷಣೆಗೆ ಸಲಹೆ
ಮಾತ್ರವಲ್ಲ, ಉಳಿದಿರುವ ಚಿರತೆಗಳನ್ನು ರಕ್ಷಿಸಿಕೊಳ್ಳಲು ಅಲ್ಲಿರುವ ತಜ್ಞರು ತುರ್ತು ಕೆಲಸಗಳನ್ನು ಮಾಡಬೇಕಾಗಿದೆ. ಉಳಿದ ಎಲ್ಲಾ ಚಿರತೆಗಳನ್ನು ತಪಾಸಣೆಗೆ ಒಳಪಡಿಸಬೇಕಾಗಿದೆ. ಅವುಗಳ ಆರೋಗ್ಯ ಹೇಗಿದೆ? ಅವುಗಳು ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆಯಾ? ಇಲ್ಲವಾ ಅನ್ನೋದ್ರ ಬಗ್ಗೆ ತುರ್ತು ಅಧ್ಯಯನ ಮಾಡಬೇಕು. ಜೊತೆಗೆ ಈಗಿರುವ ಪರಿಣಿತರ ಬದಲಾಗಿ ಚೀತಾ ಪ್ರಾಜೆಕ್ಟ್ ಬಗ್ಗೆ ಅನುಭವ ಇರೋರನ್ನು ಅವುಗಳ ಆರೈಕೆಗೆ ಬಿಡಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ