newsfirstkannada.com

ಹುಲಿ ಉಗುರಿನ ಜಾಡು ಬೆನ್ನತ್ತಿದ ಅರಣ್ಯ ಅಧಿಕಾರಿಗಳು; ವರ್ತೂರು ಸಂತೋಷ್​ಗೆ ಸಂಕಷ್ಟ ಪಕ್ಕಾ?

Share :

23-10-2023

  ರಾಮೇಹಳ್ಳಿ ಅರಣ್ಯಾಧಿಕಾರಿಗಳಿಂದ ವರ್ತೂರ್​ ಸಂತೋಷ್​ ಅರೆಸ್ಟ್

  ಯಾವ ಹುಲಿಯ ಉಗುರು ಎಂಬುದರ ಬಗ್ಗೆ ಪತ್ತೆಗೆ ಮುಂದಾದ ಅರಣ್ಯಾಧಿಕಾರಿಗಳು

  ಸಾವನ್ನಪ್ಪಿರುವ ಹುಲಿಗಳ ಡೇಟಾ ಮೂಲಕ ತಾಳೆ ಮಾಡಿ ಉಗುರಿನ ಪರಿಶೀಲನೆ

ಬಿಗ್​​ಬಾಸ್​ ಸೀಸನ್​ 10 ಸ್ಪರ್ಧಿ ವರ್ತೂರ್​ ಸಂತೋಷ್​ರನ್ನ ರಾಮೇಹಳ್ಳಿ ಅರಣ್ಯಾಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ಹುಲಿ ಉಗುರಿನ ಪೆಂಡೆಂಟ್​ ಧರಿಸಿದ್ದ ಕಾರಣ ಬಂಧಿಸಲಾಗಿದೆ. ಬಂಧನದ ಬಳಿಕ ಅರಣ್ಯಾಧಿಕಾರಿಗಳು ಹುಲಿ ಉಗುರಿನ ಜಾಡು ಬೆನ್ನತ್ತಿದ್ದಾರೆ.

ಸದ್ಯ ಸಿಕ್ಕಿರುವ ಹುಲಿ ಉಗುರನ್ನು ಅರಣ್ಯಾಧಿಕಾರಿಗಳು ಎಫ್ಎಸ್ಎಲ್‌ಗೆ ರವಾನಿಸಲು ಮುಂದಾಗಿದ್ದಾರೆ. ಎಫ್ಎಸ್ಎಲ್ ವರದಿ ಬಂದ ಬಳಿಕ ಯಾವ ಹುಲಿಯ ಉಗುರು ಎಂಬುದರ ಬಗ್ಗೆ ಗೊತ್ತಾಗುತ್ತದೆ. ನಂತರ ಹೆಚ್ಚಿನ ತನಿಖೆ ಮುಮದುವರೆಯುತ್ತದೆ.

ವರ್ತೂರು ಸಂತೋಷ್ ಬಳಿ ಸಿಕ್ಕಿರುವ ಉಗುರನ್ನ ಸಾವನ್ನಪ್ಪಿರುವ ಹುಲಿಗಳ ಡೇಟಾ ಮೂಲಕ ತಾಳೆ ಮಾಡಿ ಪರಿಶೀಲನೆ ನಡೆಸಲಾಗುತ್ತದೆ. ಇದು ಯಾವುದಾದರು ಸತ್ತ ಹುಲಿಗೆ ಸಂಬಂಧಪಟ್ಟ ಉಗುರಾ ಎಂದು ತಾಳೆ ಮಾಡಲಾಗುತ್ತದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ವಿಭಾಗದಲ್ಲಿ ಇರುವ ಡೇಟಾದಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಒಂದು ವೇಳೆ ಡೇಟಾ ತಾಳೆಯಾದರೆ ಆ ಹುಲಿಯ ಸಾವಿನ ಇನ್ವೆಸ್ಟಿಗೇಶನ್ ಸಹ ನಡೆಯುತ್ತದೆ.

ಸದ್ಯ ವರ್ತೂರ್​ ಸಂತೋಷ್​ರನ್ನ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಇವರ ಮೇಲೆ ನಾನ್​ ಬೇಲೆಬಲ್​ ಕೇಸ್​ ದಾಖಲಾಗಿದೆ. ಶರತ್​ ಎಂಬುವವರು ಕೊಟ್ಟ ದೂರಿನ ಅನ್ವಯ ಬಂಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹುಲಿ ಉಗುರಿನ ಜಾಡು ಬೆನ್ನತ್ತಿದ ಅರಣ್ಯ ಅಧಿಕಾರಿಗಳು; ವರ್ತೂರು ಸಂತೋಷ್​ಗೆ ಸಂಕಷ್ಟ ಪಕ್ಕಾ?

https://newsfirstlive.com/wp-content/uploads/2023/10/vartur-santhosh-2.jpg

Load More