ಈ ಹಿಂದೆ ಇದ್ದ ಚೇತನ್ ಶರ್ಮಾರಿಂದ ಖಾಲಿಯಾಗಿದ್ದ ಹುದ್ದೆ
BCCI ಸೆಲೆಕ್ಷನ್ ಕಮಿಟಿ ಮುಖ್ಯಸ್ಥರಾಗಲು ಅಗರ್ಕರ್ ಉತ್ಸುಕ
ಚೇತನ್ ಶರ್ಮಾರನ್ನು ಸ್ಟ್ರಿಂಗ್ ಆಪರೇಷನ್ ಮಾಡಿದ್ದ ಮಾಧ್ಯಮ
ಟೀಮ್ ಇಂಡಿಯಾದ ಸೆಲೆಕ್ಷನ್ ಕಮಿಟಿ ಮುಖ್ಯಸ್ಥರಾಗಿ ಮಾಜಿ ಆಲ್ರೌಂಡರ್ ಅಜಿತ್ ಅಗರ್ಕರ್ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಸಿಸ್ಟೆಂಟ್ ಕೋಚ್ ಆಗಿರುವ ಅಜಿತ್ ಅಗರ್ಕರ್ ಆಯ್ಕೆ ಸಮಿತಿಯ ಮುಖ್ಯಸ್ಥರ ಹುದ್ದೆಗೇರಲು ಉತ್ಸುಕರಾಗಿದ್ದಾರೆ.
ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಸ್ಥಾನಕ್ಕಾಗಿ ಜೂನ್ 22ರಂದು ಅರ್ಜಿ ಆಹ್ವಾನಿಸಿತ್ತು. ಅದರಂತೆ ಇಂದು ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದು ಕೊನೆ ದಿನವಾಗಿದೆ. ಜುಲೈ 1 ಅಂದರೆ ನಾಳೆ ಈ ಬಗ್ಗೆ ಸಂದರ್ಶನ ನಡೆಯಲಿದೆ. ಏಷ್ಯಾಕಪ್ಗೂ ಮುನ್ನವೇ ಮುಖ್ಯಸ್ಥರು ಘೋಷಣೆಯಾಗುವ ಸಾಧ್ಯತೆ ಇದೆ. ಇದರಿಂದ ಅಜಿತ್ ಅಗರ್ಕರ್, ಡೆಲ್ಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ಇನ್ನು ಸುದ್ದಿ ವಾಹಿನಿಯೊಂದಕ್ಕೆ ಮಾಜಿ ಸೆಲೆಕ್ಟರ್ ಚೇತನ್ ಶರ್ಮಾ ಅವರು ಕೆಲವೊಂದು ವಿಚಾರಗಳನ್ನು ಪ್ರಸ್ತಾಪ ಮಾಡಿದ್ದರು. ಇದೊಂದು ಸ್ಟ್ರಿಂಗ್ ಆಪರೇಷನ್ ಮೂಲಕ ಬಹಿರಂಗವಾಗಿತ್ತು. ಹೀಗಾಗಿ ಚೇತನ್ ಶರ್ಮಾ ಅವರು ಫೆಬ್ರವರಿ 17 ರಂದು ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅಂದಿನಿಂದ ಚೀಫ್ ಸೆಲೆಕ್ಟರ್ ಹುದ್ದೆ ಖಾಲಿಯಿತ್ತು. ಹೀಗಾಗಿ ಬಿಸಿಸಿಐ ಆ ಹುದ್ದೆ ಭರ್ತಿಗೆ ಇತ್ತೀಚೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ