/newsfirstlive-kannada/media/post_attachments/wp-content/uploads/2024/06/David-Warner-2.jpg)
ಆಸ್ಟ್ರೇಲಿಯಾ ತಂಡದ ಸ್ಫೋಟಕ ಆಟಗಾರ, ಲೆಜೆಂಡರಿ ಕ್ರಿಕೆಟರ್ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂದು ನಿವೃತ್ತಿ ಘೋಷಣೆ ಮಾಡಿದ್ದಾರೆ. ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಟೂರ್ನಿಯಿಂದಲೇ ಔಟ್ ಆದ ಬಳಿಕ ಡೇವಿಡ್ ವಾರ್ನರ್ ವಿದಾಯ ಹೇಳಿದ್ದು ನೋವಿನ ಸಂಗತಿ.
ಟಿ20 ವಿಶ್ವಕಪ್‌ನಲ್ಲಿ ಈ ಬಾರಿ ಕಪ್ ಗೆಲ್ಲುವಲ್ಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ವಿಫಲವಾಗಿದೆ. ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊಟ್ಟ ಮೊದಲ ಬಾರಿಗೆ ಸೆಮಿಫೈನಲ್ ತಲುಪಿದ್ದು, ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನೇ ಕಿಕ್‌ಔಟ್ ಮಾಡಿದೆ. ಈ ಆಘಾತದಲ್ಲಿರುವಾಗಲೇ ಡೇವಿಡ್ ವಾರ್ನರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿ ಶಾಕ್ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/06/David-Warner-1.jpg)
ಡೇವಿಡ್ ವಾರ್ನರ್ ಕ್ರಿಸ್‌ಗೆ ಇಳಿದ್ರೆ ದೈತ್ಯ ಆಟಗಾರ. ಡೇವಿಡ್ ವಾರ್ನರ್ ವಿದಾಯಕ್ಕೆ ಮಾಜಿ ಆಸ್ಟ್ರೇಲಿಯ ಕ್ಯಾಪ್ಟನ್ ರಿಕಿ ಪಾಂಟಿಂಗ್ ಅವರು ಭಾವಕರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಪಾಂಟಿಂಗ್, ನಾನು ಮತ್ತೊಬ್ಬ ವಾರ್ನರ್ ಅನ್ನು ಹುಡುಕುವುದು ಸುಲಭದ ಕೆಲಸವಲ್ಲ. ಡೇವಿಡ್ ವಾರ್ನರ್ ಅವರ ನಿವೃತ್ತಿ ಘೋಷಣೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮೇಲೆ ಬಹಳ ದೊಡ್ಡ ಪರಿಣಾಮ ಬೀರಲಿದೆ ಎಂದಿದ್ದಾರೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಬಾಹುಬಲಿ.. ಆಸ್ಟ್ರೇಲಿಯಾಕ್ಕೆ ಶಾಕ್ ಮೇಲೆ ಶಾಕ್!
ಡೇವಿಡ್ ನೋವಿನ ವಿದಾಯ!
ಡೇವಿಡ್ ವಾರ್ನರ್ ಅವರು 2024 ಜನವರಿಯಲ್ಲೇ ಒನ್ ಡೇ ಮತ್ತು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದರು. 2024ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಸಾಧನೆ ಮಾಡಿ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಮ್ಮೆ ಚಾಂಪಿಯನ್ ಆಗುವ ಮಹದಾಸೆಯಲ್ಲಿದ್ದರು. ಟಿ20 ವಿಶ್ವಕಪ್‌ನಲ್ಲಿ ಗೆದ್ದು ಗೆಲುವಿನೊಂದಿಗೆ ವಿದಾಯ ಹೇಳಲು ಡೇವಿಡ್ ವಾರ್ನರ್ ಬಯಸಿದ್ದರು. ಆದರೆ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಸೂಪರ್ 8ರಲ್ಲಿ ಔಟ್ ಆಗಿದ್ದು, ಸೋಲಿನೊಂದಿಗೆ ಡೇವಿಡ್ ವಾರ್ನರ್‌ಗೆ ವಿದಾಯ ಹೇಳುವಂತಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us