newsfirstkannada.com

Breaking: ಬಿಜೆಪಿ ಮಾಜಿ ಶಾಸಕ ನಿಂಬಣ್ಣವರ್ ಇನ್ನಿಲ್ಲ

Share :

09-07-2023

    ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಸಿ ಎಂ ನಿಂಬಣ್ಣವರ್

    ಅನಾರೋಗ್ಯದಿಂದ ಬಳಲುತ್ತಿದ್ದ ಸಿ ಎಂ ನಿಂಬಣ್ಣವರ್

    ನಾಳೆ ಮಧ್ಯಾಹ್ನ 3 ಗಂಟೆಗೆ ಮೃತರ ಅಂತ್ಯಕ್ರಿಯೆ

ಹುಬ್ಬಳ್ಳಿ: ಕಲಘಟಗಿ ಕ್ಷೇತ್ರದ ಮಾಜಿ ಶಾಸಕ ಸಿ ಎಂ ನಿಂಬಣ್ಣವರ್ (76)​​​ ಇಹಲೋಕ ತ್ಯಜಿಸಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ನಿಂಬಣ್ಣವರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು​ ಕೊನೆಯುಸಿರೆಳೆದಿದ್ದಾರೆ.

2018 ರಲ್ಲಿ ಬಿಜೆಪಿ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದ ನಿಂಬಣ್ಣವರ್​ ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಮಾಜಿ ಶಾಸಕರು ಆಗಿ ಗುರುತಿಸಿಕೊಂಡಿದ್ದರು. ಇದರ ಜೊತೆ ಸಮಾಜ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು.

ಸಂಗೇದೇವರಕೊಪ್ಪ ನಿಂಬಣ್ಣವರ್ 

1947ರಲ್ಲಿ ಸಿ ಎಂ ನಿಂಬಣ್ಣವರ್ ಜನಿಸಿದರು. ಜಿಲ್ಲೆಯ ಕಲಘಟಗಿ ತಾಲೂಕಿನ ಸಂಗೇದೇವರಕೊಪ್ಪ ಗ್ರಾಮದಲ್ಲಿ ಇವರ ಜನನವಾಯಿತು. ರೈತ ಕುಟುಂಬದಲ್ಲಿ ಜನಿಸಿದ್ದ ನಿಂಬಣ್ಣವರ್​ ರಾಜಕೀಯದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು. ಆದರೆ ಇಂದು ಅನಾರೋಗ್ಯದ ಕಾರಣ ಕೊನೆಯುಸಿರೆಳೆದಿದ್ದಾರೆ.

ನಾಳೆ ಅಂತ್ಯಕ್ರಿಯೆ

ಇಂದೇ ಕಲಘಟಗಿಗೆ ನಿಂಬಣ್ಣವರ್ ಪಾರ್ಥಿವ ಶರೀರ ರವಾನೆಯಾಗಲಿದ್ದು, ನಾಳೆ ಮಧ್ಯಾಹ್ನ 3 ಗಂಟೆಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Breaking: ಬಿಜೆಪಿ ಮಾಜಿ ಶಾಸಕ ನಿಂಬಣ್ಣವರ್ ಇನ್ನಿಲ್ಲ

https://newsfirstlive.com/wp-content/uploads/2023/07/Nibannanavar.jpg

Load More