newsfirstkannada.com

ಅಧಿಕಾರ ಕಳೆದುಕೊಂಡ ಮೇಲೆ ದೆಹಲಿಗೆ ಮೊದಲ ಭೇಟಿ.. ಅಮಿತ್​ ಶಾರನ್ನು ಮೀಟ್​ ಮಾಡಲಿರೋ ಮಾಜಿ ಸಿಎಂ

Share :

Published August 7, 2023 at 9:57am

Update August 7, 2023 at 10:00am

    ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಲಿರೋ ಮಾಜಿ ಸಿಎಂ

    ಸದ್ಯ ದೆಹಲಿಯಲ್ಲಿ ಇರುವ ಮಾಜಿ ಸಿಎಂ ಬೊಮ್ಮಾಯಿ..!

    ಜೆ.ಪಿ ನಡ್ಡಾ ಮತ್ತು ಬಿ.ಎಲ್ ಸಂತೋಷ್​ ಭೇಟಿ ಸಾಧ್ಯತೆ

ನವದೆಹಲಿ: ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡ ಮೇಲೆ ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿ ಅವರು ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡಿದ್ದಾರೆ.

ತಡರಾತ್ರಿ ದೆಹಲಿಗೆ ಆಗಮಿಸಿರುವ ಮಾಜಿ ಸಿಎಂ ಬೊಮ್ಮಾಯಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಆದರೆ ಇನ್ನುವರೆಗೂ ಅಮೀತ್ ಶಾ ಭೇಟಿಗೆ ಕಾಲಾವಕಾಶ‌ ನಿಗದಿ ಆಗಿಲ್ಲ. ಹೀಗಾಗಿ ಬೊಮ್ಮಾಯಿಯವರು ಶಾರನ್ನು ಸಂಸತ್​ ಕಚೇರಿಯಲ್ಲಿ ಭೇಟಿ ಮಾಡಬಹುದು ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ನಂತರ ಬೊಮ್ಮಾಯಿ ಅವರು ಇದೇ ಮೊದಲ ಬಾರಿಗೆ ದೆಹಲಿಗೆ ತೆರಳಿದ್ದಾರೆ. ಬಿಜೆಪಿಯಲ್ಲಿ ವಿರೋಧ ಪಕ್ಷದ ಸ್ಥಾನ ಕುರಿತಂತೆ ಹಲವು ವಿಚಾರಗಳ ಬಗ್ಗೆ ಕೇಂದ್ರ ನಾಯಕರ ಮುಂದೆ ಬೆಳಕು ಚೆಲ್ಲಲಿದ್ದಾರೆ. ಶಾ ಭೇಟಿ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಬಿ.ಎಲ್ ಸಂತೋಷ್​ರನ್ನ ಭೇಟಿಯಾಗಿ ಚರ್ಚೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಧಿಕಾರ ಕಳೆದುಕೊಂಡ ಮೇಲೆ ದೆಹಲಿಗೆ ಮೊದಲ ಭೇಟಿ.. ಅಮಿತ್​ ಶಾರನ್ನು ಮೀಟ್​ ಮಾಡಲಿರೋ ಮಾಜಿ ಸಿಎಂ

https://newsfirstlive.com/wp-content/uploads/2023/06/BASAVARAJ_BOMMAI-1.jpg

Load More