ನಿಮಗೆ ತಾಕತ್, ಧಮ್ ಇದ್ರೆ ಪ್ರತಿಯೊಬ್ಬರಿಗೂ 15 ಕೆಜಿ ಅಕ್ಕಿ ಕೊಡಿ
10 ಕೆಜಿ ಅಕ್ಕಿಯನ್ನು ಪ್ರಧಾನಿ ನರೇಂದ್ರ ಮೋದಿಯೇ ಕೊಟ್ಟಿದ್ದಾರೆ
ಸಿದ್ದರಾಮಯ್ಯ ಸರ್ಕಾರ ಸುಳ್ಳ, ಮಳ್ಳ ಸರ್ಕಾರ ಎಂದ ಬೊಮ್ಮಾಯಿ
ಬೆಂಗಳೂರು: ಇವತ್ತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು. ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹೋರಾಟ ನಡೆಸಿದ್ದಾರೆ. ನಗರದ ಮೌರ್ಯ ಸರ್ಕಲ್ ಬಳಿ ಬಿಜೆಪಿ ನಾಯಕರು, ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದರು. ಈ ವೇಳೆ ಪೊಲೀಸರು ಪ್ರತಿಭಟನಾ ನಿರತ ಬಿಜೆಪಿ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ನಾಯಕರ ಪ್ರತಿಭಟನೆಗೆ ಅಡ್ಡಿಪಡಿಸಿದ ಪೊಲೀಸರು ಮೊದಲಿಗೆ ಮಾಜಿ ಸಚಿವ ಆರ್. ಅಶೋಕ್ ಸೇರಿದಂತೆ ಎಂಎಲ್‌ಸಿ ಎನ್. ರವಿಕುಮಾರ್ ಅವರನ್ನು ಬಂಧಿಸಿದರು. ಇದಾದ ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಮೌರ್ಯ ಸರ್ಕಲ್‌ಗೆ ಆಗಮಿಸಿದರು. ಬೊಮ್ಮಾಯಿ ಅವರು ಆಗಮಿಸುತ್ತಿದ್ದಂತೆ ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡಲಿಲ್ಲ. ಮಾಜಿ ಸಿಎಂ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡುತ್ತಿರುವಾಗಲೇ ಕರೆದುಕೊಂಡು ಹೋಗಿದ್ದಾರೆ.
ಪ್ರತಿಭಟನೆ ನಡೆಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೊಂದು ಸುಳ್ಳ, ಮಳ್ಳ ಸರ್ಕಾರ. ಸುಳ್ಳು ಹೇಳುವಂತಹದ್ದು ಮತ್ತು ಮಳ್ಳನ ರೀತಿಯಲ್ಲಿ ಮೋಸ ಮಾಡುವಂತಹ ಸರ್ಕಾರ ಎಂದು ಕಿಡಿಕಾರಿದರು.
ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಅಂದಿದ್ರು. ಕಾಂಗ್ರೆಸ್ ನಾಯಕರ ಕೈಯಲ್ಲಿ 1 ಕೆಜಿ ಅಕ್ಕಿ ಕೊಡುವುದಕ್ಕೆ ಆಗಿಲ್ಲ. ಈಗ ರಾಜ್ಯದ ಜನರಿಗೆ ಸಿಗುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಕೊಡುತ್ತಿರುವ ಅಕ್ಕಿ. 10 ಕೆಜಿ ಅಕ್ಕಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಮೋದಿ ಕೊಟ್ಟಿದ್ದಾರೆ. ಸುಳ್ಳು ಕಾಂಗ್ರೆಸ್ಸಿನ ಪಾಠ ನಾವು ಕಲಿಯಬೇಕಾಗಿಲ್ಲ ಎಂದು ಬೊಮ್ಮಾಯಿ ಗುಡುಗಿದ್ದಾರೆ.
ಇನ್ನು, ಸುಳ್ಳು ಗ್ಯಾರಂಟಿ ಜೊತೆಗೆ ಕಂಡೀಷನ್ ಬೇರೆ. ಸರ್ಕಾರ ರಚನೆಯಾದ ಮೊದಲ ಸುದ್ದಿಗೋಷ್ಟಿಯಲ್ಲೇ ತಾತ್ವಿಕ ಒಪ್ಪಿಗೆ ಅಂದ್ರಿ. ಅಂದೇ ನಮಗೆ ಗೊತ್ತಿತ್ತು. ನಮ್ಮ ಬಳಿ ಅಕ್ಕಿ ಇಲ್ಲ ಎಂದು. ನಿಮಗೆ ತಾಕತ್ತು, ಧಮ್ ಇದ್ರೆ 10+5 ಕೆಜಿ ಅಕ್ಕಿ ಕೊಡಬೇಕು. ನಿಮಗೆ ತಾಕತ್, ಧಮ್ ಇದ್ರೆ ಪ್ರತಿಯೊಬ್ಬರಿಗೂ 15 ಕೆಜಿ ಕೊಡಬೇಕು ಎಂದು ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನೋಡಿ ಪ್ರೊಟೆಸ್ಟ್ ಮಾಡೋಕೂ ಅವಕಾಶ ಕೊಡ್ತಿಲ್ಲ. ಪ್ರತಿಭಟನೆ ಮಾಡೋದಕ್ಕೂ ಅವಕಾಶ ಇಲ್ಲ. ಈ ಸರ್ಕಾರವನ್ನ ಜನ ಕಿತ್ತೊಗೆಯುತ್ತಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. #NewsFirstKannada #Newsfirstlive #KannadaNews #Annabhagya #Congressguaranteescheme#Siddaramaiah #KarnatakaCM… pic.twitter.com/ykeU40KNE5
— NewsFirst Kannada (@NewsFirstKan) June 20, 2023