ಚಕ್ರದಲ್ಲಿ ಗಾಳಿ ಇಲ್ಲದೇ ಕಾಂಗ್ರೆಸ್ ಸರ್ಕಾರ ಮುಂದೆ ಹೋಗುತ್ತಿಲ್ಲ
ವೇಣುಗೋಪಾಲ್, ಸುರ್ಜೇವಾಲ ಅವರಿಗೆ ಚುನಾವಣೆಯೇ ಟಾರ್ಗೆಟ್
ಸಿಎಂ ಅವರನ್ನು ಎಟಿಎಂ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದ ಬಿಎಸ್‌ವೈ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳಾಯಿತು. ಚಕ್ರದಲ್ಲಿ ಗಾಳಿ ಇಲ್ಲದೇ ಮುಂದೆ ಹೋಗುತ್ತಿಲ್ಲ. ಅಪಾರ ಭರವಸೆ ನೀಡಿದ ಸರ್ಕಾರ, ಭರವಸೆ ಈಡೇರಿಸಲು ಆಗುತ್ತಿಲ್ಲ. 2ನೇ ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರಿಗೆ ಸರ್ಕಾರದ ಮೇಲೆ ಹಿಡಿತವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಗಂಭೀರ ಆರೋಪ ಮಾಡಿದ್ದಾರೆ.
ಬಹಳ ದಿನಗಳ ಬಳಿಕ ವಿಶೇಷ ಸುದ್ದಿಗೋಷ್ಟಿ ಕರೆದ ಬಿ.ಎಸ್ ಯಡಿಯೂರಪ್ಪನವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ 6 ತಿಂಗಳು ಸಮಯ ಕೊಟ್ಟಿದ್ದೇವೆ. ರಾಜ್ಯ ಸರ್ಕಾರ ಸುಧಾರಣೆ ಆಗುತ್ತದೆ ಎಂದು ಕಾದಿದ್ದು ಆಯಿತು. ಆದ್ರೆ, ಏನೂ ಪ್ರಯೋಜನ ಇಲ್ಲ. ಇದೊಂದು ಜನ ವಿರೋಧಿ ಸರ್ಕಾರ. ಇದೇ ರೀತಿ ಸರ್ಕಾರ ಮುಂದುವರಿದ್ರೆ ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡಲು ಮುಂದಾಗಬೇಕಾಗುತ್ತದೆ ಎಂದು ಬಿಎಸ್‌ವೈ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮಾಜಿ ಸಿಎಂ ಈ ಹಿಂದೆ ಕೇಂದ್ರ ಅನುದಾನ ಕೊಡುವ ಮೊದಲು ರಾಜ್ಯ ಸರ್ಕಾರ ಹಣ ನೀಡುತ್ತಿತ್ತು. ಆದ್ರೆ ಈಗ ರಾಜ್ಯ ಸರ್ಕಾರ ಎಲ್ಲಾದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ. ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಅವರ ಭೇಟಿ ಚುನಾವಣೆಯ ಟಾರ್ಗೆಟ್. ಸಿಎಂ ಸಿದ್ದರಾಮಯ್ಯ ಅವರನ್ನು ಎಟಿಎಂ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದು ಯಡಿಯೂರಪ್ಪನವರು ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ