ಚಿತ್ರದುರ್ಗದ ಹಲವು ಮಠಗಳಿಗೆ ವಿಜಯೇಂದ್ರ ಭೇಟಿ
ಸರ್ಕಾರ ವಿರುದ್ಧ ಹೋರಾಡುವವರಿಗೆ ಸ್ಥಾನ-ಅಶೋಕ್
ಧವಳಗಿರಿ ನಿವಾಸದಲ್ಲಿ ನಡೀತು ಮಹತ್ವದ ಮಾತುಕತೆ
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಬಿಎಸ್ವೈ ಪುತ್ರ ವಿಜಯೇಂದ್ರಗೆ ಪಟ್ಟ ಕಟ್ಟಲಾಗಿದೆ. ಮೊನ್ನೆಯಷ್ಟೇ ಪದಗ್ರಹಣ ನಡೆದಿದೆ. ಆದ್ರೆ, ವಿಪಕ್ಷ ನಾಯಕನ ಆಯ್ಕೆ ಮಾತ್ರ ಬಿಜೆಪಿಗೆ ಕಗ್ಗಂಟಾಗಿ ಪರಿಣಮಿಸಿದೆ. ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದ್ದು, ಹೈಕಮಾಂಡ್ ಆಯ್ಕೆ ಏನಾಗಿರಲಿದೆ ಅನ್ನೋ ಕುತೂಹಲ ಎಲ್ಲೆಡೆ ಮನೆ ಮಾಡಿದೆ.
ಬಿಜೆಪಿಯ ಸಾರಥ್ಯ ಸಿಗ್ತಿದ್ದಂತೆ ವಿಜಯೇಂದ್ರ ಮಠ ಯಾತ್ರೆ ಆರಂಭಿಸಿದ್ದಾರೆ. ಸಮುದಾಯದ ದಾಳ ಉರುಳಿಸ್ತಿರುವ ನೂತನ ರಾಜ್ಯಾಧ್ಯಕ್ಷರು, ಲೋಕಸಭೆ ಎಲೆಕ್ಷನ್ಗೆ ಜಾತಿ ಅಸ್ತ್ರವನ್ನ ಪ್ರಬಲವಾಗಿ ಪ್ರಯೋಗಿಸ್ತಿದ್ದಾರೆ. ಪದಗ್ರಹಣಕ್ಕೂ ಮುನ್ನ ಆದಿಚುಂಚನಗಿರಿ, ತುಮಕೂರಿನ ಪವಿತ್ರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಉಭಯ ಶ್ರೀಗಳ ಆಶೀರ್ವಾದ ಪಡೆದಿದ್ದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಸಮನ್ವಯತೆಯ ಸಂದೇಶ ಸಾರಿದ್ದರು.
ಮಠಗಳ ಯಾತ್ರೆ ಮುಂದುವರೆಸಿದ ಬಿಜೆಪಿ ನೂತನ ರಾಜ್ಯಾಧ್ಯಕ್ಷ!
ಕೊನೆಗೂ ಕೂಡಿಬಂತು ಮುಹೂರ್ತ.. ಇಂದು ವಿಪಕ್ಷ ಸ್ಥಾನ ಆಯ್ಕೆ!
ಮೊನ್ನೆಯಷ್ಟೇ ನೂತನ ರಾಜ್ಯಾಧ್ಯಕ್ಷರಾಗಿ ಪದಗ್ರಹಣ ಮಾಡಿದ ಮರುದಿನವೇ ಮಠ ಯಾತ್ರೆಯನ್ನ ಮುಂದುವರೆಸಿದ್ದಾರೆ. ರಾಜ್ಯ ಪ್ರವಾಸಕ್ಕೂ ಮೊದಲು ಸಂತರ ಆಶೀರ್ವಾದ ಪಡೆದುಕೊಳ್ತಿದ್ದಾರೆ. ಸಿರಿಗೆರೆ ಸೇರಿದಂತೆ ಹಲವು ಮಠ ಹಾಗೂ ಗುರುಪೀಠಗಳಿಗೆ ಭೇಟಿ ನೀಡಿ ತಂದೆ ಹಾಕಿಕೊಟ್ಟ ಪರಂಪರೆಯನ್ನ ಪಾಲಿಸಿದ್ದಾರೆ. ರಸ್ತೆ ಮಾರ್ಗವಾಗಿ ಆಗಮಿಸಿದ ವಿಜಯೇಂದ್ರಗೆ ಮಾರ್ಗದುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದರು. ಕೋಟೆನಾಡಿನ ಮುರುಘ ರಾಜೇಂದ್ರ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ನಂತರ ಕೃಷ್ಣ ಯಾದವನಂದ ಮಹಾ ಸಂಸ್ಥಾನ ಮಠಕ್ಕೆ ಭೇಟಿ ನೀಡಿದ್ದರು. ಮಾದಾರ ಚನ್ನಯ್ಯ ಮಠ, ಜಗದ್ಗುರು ಸಿದ್ದರಾಮೇಶ್ವರ ಸಂಸ್ಥಾನ ಭೋವಿ ಗುರುಪೀಠಕ್ಕೂ ಭೇಟಿ ಕೊಟ್ಟು ಪೂಜ್ಯರ ದರ್ಶನ ಪಡೆದ್ರು. ಮಧ್ಯಾಹ್ನ ಸಿರಿಗೆರೆ ಬೃಹನ್ಮಠಕ್ಕೆ ಭೇಟಿ ನೀಡಿ ತರಳಬಾಳು ಜಗದ್ಗುರುಗಳ ದರ್ಶನಾಶೀರ್ವಾದ ತಗೊಂಡ್ರು.
ಹೊಸದುರ್ಗದ ಚಿನ್ಮೂಲಾದ್ರಿ ಭಗೀರಥ ಗುರುಪೀಠ, ಸಾಣೆ ಹಳ್ಳಿಯಲ್ಲಿರುವ ತರಳಬಾಳು ಬೃಹನ್ನಠದ ಶಾಖಾಮಠಕ್ಕೂ ಭೇಟಿ ಕೊಟ್ಟರು. ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ, ಕನಕ ಗುರು ಪೀಠ ಶಾಖಾಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು.
ಇನ್ನು, ಲೋಕಸಭಾ ಎಲೆಕ್ಷನ್ ಹಾಗೂ ಡಿಸೆಂಬರ್ 4ರಂದು ಬೆಳಗಾವಿ ಚಳಿಗಾಲ ಅಧಿವೇಶನ ನಡೆಯಲಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ಗೆ ವಿಪಕ್ಷ ನಾಯಕನ ಆಯ್ಕೆ ಮತ್ತೆ ತಲೆನೋವು ತರಿಸಿದೆ. ಇಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಕೇಂದ್ರದಿಂದ ವೀಕ್ಷಕರು ಆಗಮಿಸಲಿದ್ದು, ಶಾಸಕರ ಅಭಿಪ್ರಾಯ ಸಂಗ್ರಹಿಸಿ ದೆಹಲಿಗೆ ತೆರಳಲಿದ್ದಾರೆ. ವರಿಷ್ಠರ ಜತೆ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ವಿಪಕ್ಷ ನಾಯಕನಾಗಲು, ನಾನು ಯಾವುದೇ ಅರ್ಜಿ ಹಾಕಿಲ್ಲ
ಇನ್ನು, ಈ ಬಗ್ಗೆ ಮಾತಾಡಿದ ಮಾಜಿ ಡಿಸಿಎಂ ಆರ್.ಅಶೋಕ್, ಮಹತ್ವದ ಸಭೆ ನಡೆಸಲಾಗುತ್ತಿದೆ. ಯಾರನ್ನೇ ಶಾಸಕಾಂಗ ಪಕ್ಷದ ನಾಯಕವಾಗಿ ಮಾಡಿದ್ರೂ ನಮ್ಮ ಬೆಂಬಲವಿದೆ. ತಾನೂ ಯಾವುದೇ ಅರ್ಜಿ ಹಾಕಿಲ್ಲ- ಮಾಜಿ ಡಿಸಿಎಂ ಆರ್.ಅಶೋಕ್
ಎಸ್ಟಿಎಸ್ ಬಂಡಾಯ ಶಮನಕ್ಕೆ ಬಿಎಸ್ವೈ ಯತ್ನ!
ಇನ್ನು, ವಿಜಯೇಂದ್ರ ಪದಗ್ರಹಣಕ್ಕೆ ಗೈರಾಗುವ ಮೂಲಕ ಮಾಜಿ ಸಚಿವ ಸೋಮಶೇಖರ್ ಅಸಮಾಧಾನ ಹೊರಹಾಕಿದ್ದರು. ಎಸ್ಟಿಎಸ್ ಬಂಡಾಯ ಶಮನಕ್ಕೆ ಖುದ್ದು ಮಾಜಿ ಸಿಎಂ ಬಿಎಸ್ವೈ ಯತ್ನಿಸಿದ್ದಾರೆ. ತಮ್ಮ ಧವಳಗಿರಿ ನಿವಾಸಕ್ಕೆ ಕರೆಸಿಕೊಂಡ ಯಡಿಯೂರಪ್ಪ, ಮಾಜಿ ಡಿಸಿಎಂ ಅಶೋಕ್ ಸಮ್ಮುಖದಲ್ಲೇ ಮಾತುಕತೆ ನಡೆಸಿದ್ದರು. ಇತ್ತ, ಮಾಜಿ ಸಚಿವ ಸೋಮಣ್ಣ ಸಿಟ್ಟು ಶಮನ ಆಗಿಲ್ಲ. ಸ್ವಪಕ್ಷ ನಾಯಕರ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷಕ್ಕೆ ನನ್ನದೂ ದುಡಿಮೆ-ಶ್ರಮ ಇದೆ. ನನಗೆ ಡಬಲ್ ಗೇಮ್ ಮಾಡೋದು ಗೊತ್ತಿಲ್ಲ. ನಾನು ಯಾವುದೇ ಲೋಕಾಸಭಾ ಟಿಕೆಟ್ ಆಕಾಂಕ್ಷಿ ಅಲ್ಲ ಎಂದಿದ್ದಾರೆ. ಇದೇ ವೇಳೆ, ಕಾಂಗ್ರೆಸ್ ಸೇರೋ ಅವಶ್ಯಕತೆ ನನಗೆ ಈಗಿಲ್ಲ ಎಂದಿದ್ದಾರೆ.
ಒಟ್ಟಾರೆ ಬಿಜೆಪಿಯಲ್ಲಿ ವಿಜಯೇಂದ್ರ ಆಯ್ಕೆಯಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಿಸಿದೆ. ಆದ್ರೆ, ಹಿರಿಯ ನಾಯಕರಲ್ಲಿ ಕುದಿಮೌನ ಆವರಿಸಿದೆ. ಇಂದು ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ವಿಪಕ್ಷ ನಾಯಕನ ಆಯ್ಕೆ ಆದಲ್ಲಿ ಈ ಕುದಿಮೌನ, ಜ್ವಾಲಾಮುಖಿ ಆಗಿ ಸ್ಫೋಟಿಸುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ