newsfirstkannada.com

ದೀಪಾವಳಿ ಹಬ್ಬದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಮನೆಗೆ ಬಳಸಿದ ಕರೆಂಟ್ ಎಷ್ಟು? ಹಾಕಿದ ದಂಡ ಎಷ್ಟು?

Share :

Published November 17, 2023 at 4:39pm

    ಕುಮಾರಸ್ವಾಮಿ ಮನೆಗೆ ಲೈಟ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ

    1 ಕಿಲೋ ವ್ಯಾಟ್​ಗಿಂತ ಕಡಿಮೆ ಬರುತ್ತೆ ಅಂತ ನನ್ನ ಆಪ್ತರು ಹೇಳಿದ್ದಾರೆ

    ದಂಡ ಕಟ್ಟಿದ ಬಿಲ್ ಅನ್ನು​ ಪುನರ್‌ ವಿಮರ್ಶೆ ಮಾಡಲು ಹೆಚ್‌ಡಿಕೆ ಒತ್ತಾಯ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಜೆ.ಪಿ ನಗರದ ನಿವಾಸ ದೀಪಾಲಂಕಾರದಿಂದ ಝಗಮಗಿಸಿತ್ತು. ಈ ಬೆಳಕಿನ ಮಧ್ಯೆ ಕರೆಂಟ್‌ ಕದ್ದ ಕಳಂಕ ಕುಮಾರಸ್ವಾಮಿ ಅವರ ವಿರುದ್ಧ ಕೇಳಿ ಬಂದಿತ್ತು. ಇದೀಗ ಮಾಜಿ ಸಿಎಂ ಹೆಚ್‌ಡಿಕೆ, ಈ ಪ್ರಕರಣದಲ್ಲಿ ಹಾಕಿದ ದಂಡವನ್ನು ಕಟ್ಟೋ ಮೂಲಕ ಕರೆಂಟ್ ಕಳ್ಳತನದ ಕಿತ್ತಾಟಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ಅವರ ಮನೆಗೆ ಲೈಟ್ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದ ವಿಡಿಯೋವನ್ನು ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿತ್ತು. ಕರೆಂಟ್ ಕಳ್ಳತನ ಆರೋಪ ಕಾಂಗ್ರೆಸ್‌, ಜೆಡಿಎಸ್ ನಾಯಕರ ಕಿತ್ತಾಟಕ್ಕೆ ಕಾರಣವಾಗಿತ್ತು. ಜೆಡಿಎಸ್‌ ಕಚೇರಿಯ ಕಾಂಪೌಂಡ್‌ಗೆ ಪೋಸ್ಟರ್ ಅಂಟಿಸಿ ವ್ಯಂಗ್ಯ ಮಾಡಲಾಗಿತ್ತು. ಇದರ ವಿರುದ್ಧ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಕರೆಂಟ್ ಕಳ್ಳ.. ಕರೆಂಟ್ ಕಳ್ಳ ಎಂದ ಕಾಂಗ್ರೆಸ್ ನಾಯಕರಿಗೆ ಹೆಚ್.ಡಿ ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯುತ್ ಶಕ್ತಿ ಕಳ್ಳ ಅಂತ ಕಾಂಗ್ರೆಸ್ ಮಹಾ ನಾಯಕರು ನನಗೆ ಲೇಬಲ್ ಕೊಟ್ಟಿದ್ದಾರೆ. ಯಾರೋ ಮಾಡಿದ ತಪ್ಪನ್ನ ನಾನೇ ಒಪ್ಪಿಕೊಂಡಿದ್ದೇನೆ. ಇದಕ್ಕಾಗಿ 68,525 ರೂಪಾಯಿ ದಂಡ ವಿಧಿಸಿದ್ದಾರೆ. ದಂಡದ ಪೂರ್ತಿ ಮೊತ್ತವನ್ನು ಕಟ್ಟಿದ್ದೇನೆ ಎಂದು ದಂಡ ಪಾವತಿ ಮಾಡಿದ ರಸೀತಿಯನ್ನು ಬಿಡುಗಡೆ ಮಾಡಿದ್ದಾರೆ.

ವಿದ್ಯುತ್ ಕಳ್ಳತನದ ಆರೋಪದಲ್ಲಿ 2.5 ಕಿಲೋ ವ್ಯಾಟ್ ವಿದ್ಯುತ್ ದುರುಪಯೋಗ ಪಡಿಸಿಕೊಂಡಿದ್ದೇನೆ ಅಂತ ಹೇಳಿದ್ದಾರೆ. 1 ಕಿಲೋ ವ್ಯಾಟ್​ಗಿಂತ ಕಡಿಮೆ ಬರುತ್ತೆ ಅಂತ ನನ್ನ ಆಪ್ತರು ಹೇಳಿದ್ದಾರೆ. ಆದರೆ 2.5 ಕಿಲೋ ವ್ಯಾಟ್ ಬಳಸಿದ್ದೇನೆ ಎಂದು ದಂಡ ವಿಧಿಸಿದ್ದಾರೆ. ಹೀಗಾಗಿ ವಿದ್ಯುತ್ ಬಿಲ್ ಅನ್ನು​ ಪುನರ್‌ ವಿಮರ್ಶೆ ಮಾಡಬೇಕು ಎಂದು ಹೆಚ್‌ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಇದೇ ವೇಳೆ ನಿತ್ಯ ನನ್ನ ಮನೆಗೆ 33 ಕಿಲೋ ವ್ಯಾಟ್ ಪರ್ಮಿಷನ್ ತಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೀಪಾವಳಿ ಹಬ್ಬದಲ್ಲಿ ಹೆಚ್‌.ಡಿ ಕುಮಾರಸ್ವಾಮಿ ಮನೆಗೆ ಬಳಸಿದ ಕರೆಂಟ್ ಎಷ್ಟು? ಹಾಕಿದ ದಂಡ ಎಷ್ಟು?

https://newsfirstlive.com/wp-content/uploads/2023/11/Hd-KUmaraswamy-3.jpg

Load More