ತಾಕತ್ ಇದ್ರೆ ಅಕ್ರಮದ ದಾಖಲೆ ಬಿಡಲಿ ನೋಡೋಣ ಎಂದ ಶಿವಲಿಂಗೇಗೌಡ
ಜನತಾದಳಕ್ಕೆ ಇನ್ನೂ ತಾಕತ್ತಿದೆ ಎಂದು ಟೈಮ್ ಬಾಂಬ್ ಇಟ್ಟ ಕುಮಾರಸ್ವಾಮಿ
ಹಗಲು ದರೋಡೆ ಮಾಡೋಕೆ ಇನ್ನೂ ಬಹಳ ಸಮಯವಿದೆ ಈಗಲೇ ಯಾಕೆ?
ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ ಶಿವಲಿಂಗೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಧ್ಯೆ ಇವತ್ತು ಭಾರೀ ವಾಗ್ಯುದ್ಧ ನಡೆದಿದೆ. ವಿಧಾನಸಭೆಗೆ ಆಗಮಿಸೋ ಮುನ್ನ ಶಿವಲಿಂಗೇಗೌಡ್ರು ಹೆಚ್‌ಡಿಕೆಗೆ ತಾಕತ್ತಿನ ಸವಾಲು ಹಾಕಿದ್ರೆ, ಮಾಜಿ ದಳಪತಿ ಮೇಲೆ ಸದನದ ಒಳಗೂ, ಹೊರಗೂ ಹೆಚ್.ಡಿ ಕುಮಾರಸ್ವಾಮಿ ಕೆರಳಿ ಕೆಂಡವಾಗಿದ್ದಾರೆ.
ಇವತ್ತು ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ ಶಾಸಕ ಶಿವಲಿಂಗೇಗೌಡ್ರು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆ ಕೊಟ್ರು. ಸಿಎಂ ಗೃಹಕಚೇರಿಯಲ್ಲಿ ಲಂಚ ಸ್ವೀಕರಿಸೋ ಆರೋಪದಲ್ಲಿ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡಬಾರದು. ಯಾವುದಾದರೂ ದಾಖಲೆ ಇದ್ರೆ ಬಿಡುಗಡೆ ಮಾಡಲಿ. ಬಾಯಿಗೆ ಬಂದಂತೆ ಕುಮಾರಸ್ವಾಮಿ ಮಾತನಾಡಬಾರದು. ಕುಮಾರಸ್ವಾಮಿಗೆ ತಾಕತ್ ಇದ್ರೆ ಅಕ್ರಮದ ದಾಖಲೆ ಬಿಡಲಿ ಎಂದು ಖಡಕ್ ಸವಾಲು ಹಾಕಿದರು.
ಸಿಎಂ ಆಫೀಸ್ನಲ್ಲಿ ₹30 ಲಕ್ಷದ ಆರೋಪ ಮಾಡ್ತಿದ್ದಾರಲ್ಲ ಕುಮಾರಸ್ವಾಮಿ ದಾಖಲೆ ಇಲ್ದೇ ಮಾತಾಡಬಾರದು. ತಾಕತ್ ಇದ್ರೆ ವಿಡಿಯೋ ಬಿಡಲಿ ಎಂದು MLA ಕೆ.ಎಂ ಶಿವಲಿಂಗೇಗೌಡ ಸವಾಲ್ ಹಾಕಿದರು. #Newsfirstlive #Assemblysession #MLA #KMShivalingegowda #HDKumaraswamy #session pic.twitter.com/vgxjB34Bf3
— NewsFirst Kannada (@NewsFirstKan) July 4, 2023
ಈ ಆರೋಪಕ್ಕೆ ವಿಧಾನಸೌಧದಲ್ಲೇ ಉತ್ತರಿಸಿದ ಹೆಚ್.ಡಿ ಕುಮಾರಸ್ವಾಮಿ ಅವರು ಶಿವಲಿಂಗೇಗೌಡರ ವಿರುದ್ಧ ಗುಡುಗಿದರು. ಶಿವಲಿಂಗೇಗೌಡರನ್ನ ಅವನ್ಯಾವನೋ ಎಂದು ಪ್ರಶ್ನಿಸಿದ ಹೆಚ್‌ಡಿಕೆ, ನನ್ ತಾಕತ್ತು ಇರ್ಲಿ ನಿಮ್ಗೆ ಧಮ್ ಇದ್ಯಾ ಎಂದು ಟಾಂಗ್ ಕೊಟ್ಟರು. ಒಂದೇ ತಿಂಗಳಲ್ಲಿ ಕಾಂಗ್ರೆಸ್ ನಾಯಕರು ಹಗಲು ದರೋಡೆ ಮಾಡೋಕೆ ಹೊರಟಿದ್ದೀರಿ. ಬೀದಿಯಲ್ಲಿ ಈ ಬಗ್ಗೆ ಜನ ಮಾತಾಡುತ್ತಿದ್ದಾರೆ. ಹಗಲು ದರೋಡೆ ಮಾಡೋಕೆ ಇನ್ನೂ ಸಮಯವಿದೆ. ವರ್ಗಾವಣೆ ದಂಧೆಗೆ ಹಣ ನಿಗದಿ ಮಾಡೋದನ್ನ ಕಾಂಗ್ರೆಸ್ ನಾಯಕರು ನಿಲ್ಲಿಸಬೇಕು ಎಂದರು.
ನಿಮ್ಮ ಕೈಯಲ್ಲಿ ದಾಖಲೆ ಕೊಡಲು ತಾಕತ್ತಿಲ್ಲ. ಕುಮಾರಸ್ವಾಮಿ, ಜನತಾದಳಕ್ಕೆ ಇನ್ನೂ ತಾಕತ್ತಿದೆ. ದಾಖಲೆ ಬಿಡುಗಡೆ ಮಾಡಲು ಟೈಮ್ ಬರುತ್ತೆ. ಆಗ ದಾಖಲೆ ಬಿಡುಗಡೆ ಮಾಡಿ ಅನ್ನೋರ ಆಸೆ ನೆರವೇರಿಸಿಕೊಡುತ್ತೇನೆ. ದಾಖಲೆ ಕೊಟ್ಟಾಗ ಯಾವ ಇಲಾಖೆಯಲ್ಲಿ ಯಾವ ಮಂತ್ರಿಯ ಸುಪರ್ದಿಯಲ್ಲಿ ನಡೆದಿದೆ ಅನ್ನೋದನ್ನ ಹೇಳ್ತೀನಿ. ಆ ಮಂತ್ರಿ ವಿರುದ್ಧ ಕ್ರಮ ಕೈಗೊಳ್ಳುವ ತಾಕತ್ತು ನಿಮಗಿದ್ಯಾ ಎಂದು ಹೆಚ್‌ಡಿಕೆ ಸವಾಲು ಹಾಕಿದ್ದಾರೆ. ಸದನದ ಒಳಗೂ ಅಬ್ಬರಿಸಿದ ಹೆಚ್.ಡಿ ಕುಮಾರಸ್ವಾಮಿ ಅವರು ಕೊಬ್ಬರಿ ಬೆಳೆಗಾರರಿಗೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಕೊಟ್ಟಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನ ಹೆಚ್ಚಿಸುವುದಾಗಿ ಹೇಳಿದ್ದರು ಅದನ್ನೂ ಮಾಡಿಲ್ಲ. ಈಗ ನಾಚಿಕೆ ಬಗ್ಗೆ ಮಾತಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನನ್ನ ತಾಕತ್ ಇರಲಿ, ನಿಮಗೆ ತಾಕತ್ ಇದಿಯಾ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ಕಿಡಿ ಕಿಡಿಯಾದ್ರು. #Newsfirstlive #HDKumaraswamy #session2023 #JDS #Assemblysession #Congress pic.twitter.com/lyCZ0xk4S3