ಅಪೋಲೊ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಹೆಚ್.ಡಿ ಕುಮಾರಸ್ವಾಮಿ
20 ನಿಮಿಷದಲ್ಲಿ ಬಿಡದಿಯ ತೋಟದ ಮನೆಯಿಂದ ಆಸ್ಪತ್ರೆಗೆ ಬಂದೆ
ಮಧ್ಯರಾತ್ರಿ ನನಗೆ ಆ ಗೋಲ್ಡನ್ ಅವರ್ ಬಹಳ ಮುಖ್ಯವಾಗಿತ್ತು
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಗುಣಮುಖರಾಗಿದ್ದು, ಅಪೋಲೊ ಆಸ್ಪತ್ರೆಯಲ್ಲಿ ಮಹತ್ವದ ಸುದ್ದಿಗೋಷ್ಟಿ ನಡೆಸಿದ್ದಾರೆ. ತಮ್ಮ ಅನಾರೋಗ್ಯದ ಬಗ್ಗೆ ಖುದ್ದು ವಿವರಣೆ ನೀಡಿದ ಕುಮಾರಸ್ವಾಮಿ ಅವರು ಅಂದು ಮಧ್ಯರಾತ್ರಿ ಏನಾಯ್ತು ಅನ್ನೋದನ್ನು ಬಿಚ್ಚಿಟ್ಟಿದ್ದಾರೆ.
ಅಂದು ಮಧ್ಯರಾತ್ರಿ 2 ಗಂಟೆಗೆ ಎಚ್ಚರ ಆಯ್ತು. ತಕ್ಷಣವೇ ಭಗವಂತನಲ್ಲಿ ಪ್ರಾರ್ಥನೆ ಮಾಡಿ ವೈದ್ಯರಿಗೆ ಕರೆ ಮಾಡಿದೆ. 20 ನಿಮಿಷದಲ್ಲಿ ಬಿಡದಿಯ ತೋಟದ ಮನೆಯಿಂದ ಅಪೋಲೊ ಆಸ್ಪತ್ರೆಗೆ ಬಂದೆ. ಆ ಗೋಲ್ಡನ್ ಅವರ್ ಬಹಳ ಮುಖ್ಯವಾಗಿದೆ. ಬೆಳಗ್ಗೆ ಹೋಗೋಣ ಎಂದು ನಾನು ಸುಮ್ಮನಾಗಿದ್ರೆ, ನಾನು ಇಂದು ನಿಮ್ಮ ಮುಂದೆ ಮಾತನಾಡಲು ಆಗುತ್ತಿರಲಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಸ್ಟ್ರೋಕ್ ಆದ ಸಮಯದಲ್ಲಿ ಏನಾಯ್ತು ಅನ್ನೋದನ್ನು ಹಂಚಿಕೊಂಡ ಹೆಚ್.ಡಿ ಕುಮಾರಸ್ವಾಮಿ ಅವರು ಅಂದು ರಾತ್ರಿ ಎಚ್ಚೆತ್ತುಕೊಳ್ಳದೇ ನಾನು ಬೆಳಗ್ಗೆ ಆಸ್ಪತ್ರೆಗೆ ಬಂದಿದ್ರೆ, ಶಾಶ್ವತವಾಗಿ ಬೆಡ್‌ನಲ್ಲಿ ಇರಬೇಕಿತ್ತು. ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ ನಾನು 3-4 ತಿಂಗಳು ಬೆಡ್ ರಿಡನ್ ಆಗ್ಬೇಕಿತ್ತು. ವೈದ್ಯರ ಶ್ರಮದಿಂದ ಇಂದು ಸಾರಾಗವಾಗಿ ಮಾತನಾಡುತ್ತಿದ್ದೇನೆ. ಹೀಗಾಗಿ ಎಲ್ಲರಿಗೂ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಕರೆ ಕೊಟ್ಟರು.
ಬೆಳಿಗ್ಗೆ ಆಸ್ಪತ್ರೆಗೆ ಹೋಗೋಣ ಅಂದಿದ್ರೆ ನಾನೇ ಇರ್ತಿರ್ಲಿಲ್ಲ..@hd_kumaraswamy#HDKumaraswamy #ApolloHospital #HDK #Discharge #Bangalore #NewsFirstKannada pic.twitter.com/GQWkjbo5Oy
— NewsFirst Kannada (@NewsFirstKan) September 3, 2023
ಗೋಲ್ಡನ್ ಅವರ್‌ನ ಪರಿಸ್ಥಿತಿಗಳನ್ನ ನಿರ್ಲಕ್ಷ್ಯ ಮಾಡಬೇಡಿ. ಸಮಯ ವ್ಯರ್ಥ ಮಾಡದೆ, ಗೋಲ್ಡನ್ ಅವರ್ ಹಾಳು ಮಾಡದೆ ಆಸ್ಪತ್ರೆಗೆ ಬನ್ನಿ. ನಮ್ಮ ರಾಜ್ಯದಲ್ಲಿ ಪರಿಣಿತ ವೈದ್ಯರಿದ್ದಾರೆ. ಹಣಕ್ಕಾಗಿ ವೈದ್ಯರು ಸೇವೆ ಮಾಡ್ತಿಲ್ಲ. ಖರ್ಚು ವೆಚ್ಚಗಳು ಬೇರೆ, ಹಣ ಖರ್ಚು ಆಗೇ ಆಗುತ್ತದೆ. ಜೀವದ ಮುಂದೆ ಹಣ ಮುಖ್ಯವಲ್ಲ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ