newsfirstkannada.com

ಸಚಿನ್​ ತೆಂಡೂಲ್ಕರ್​ಗಿದೆ ಆ ವಿಚಿತ್ರ ಕಾಯಿಲೆ.. ನಿದ್ದೆಯಲ್ಲಿರುವಾಗ ಏನ್ ಮಾಡ್ತಾರೆ ಮಾಸ್ಟರ್ ಬ್ಲಾಸ್ಟರ್?

Share :

10-09-2023

    ಸಖತ್ ಸ್ಟೋರಿಯಲ್ಲಿ ಸಚಿನ್ ತೆಂಡೂಲ್ಕರ್​ರ ಆ ಕಾಯಿಲೆ ಏನು?

    ಕ್ರಿಕೆಟ್​ ಆಡುವಾಗಲೂ ಇದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ

    ಸಂದೀಪ್​ ಪಾಟೀಲ್,​ ಕ್ಲೇಥಾನ್​​ ಮುರ್​ಜೆಲ್ಲೊ ಹೇಳೋದೇನು?

ಸಚಿನ್ ತೆಂಡೂಲ್ಕರ್​​ ಗಾಡ್ ಆಫ್​​​​ ಕ್ರಿಕೆಟ್​ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಚಿನ್​​ ಬಗ್ಗೆ ಹೇಳಿ ಅಂದ್ರೆ ಸುಲಲಿತವಾಗಿ ಬ್ರೇಕ್​​​​​​ ಕೊಡದೇ ಮಾತಾಡಬಲ್ಲ ಜನರಿದ್ದಾರೆ. ಆದರೆ ಸಚಿನ್​​ಗೆ ಒಂದು ವಿಚಿತ್ರ ಕಾಯಿಲೆ ಇತ್ತು. ಅದು ಇಲ್ಲಿ ತನಕ ಕ್ರಿಕೆಟ್​​​​ ಜಗತ್ತಿಗೆ ತಿಳಿದಿಲ್ಲ. ಅದೇನ್ ಅನ್ನೋದನ್ನ ನೋಡೋಣ ಇವತ್ತಿನ ಸಖತ್ ಸ್ಟೋರಿಯಲ್ಲಿ.

ನಿವೃತ್ತಿ ಕೊಟ್ಟು ದಶಕ ಕಳೆದ್ರೂ ಆ ಕಾಯಿಲೆ ಮ್ಯಾಟರ್ ನಿಗೂಢ

ಸಚಿನ್​​​​​ ತೆಂಡೂಲ್ಕರ್​​​ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯ ಹೃದಯದಲ್ಲಿ ಹಾಸು ಹೊಕ್ಕಾಗಿದ್ದಾರೆ. ಕ್ರಿಕೆಟ್​ ಮೈದಾನದ ಭೂಪಟದಲ್ಲಿ ಸಚಿನ್​ ಹೆಸರು ಎಂದೆಂದೂ ಅಜರಾಮರ. ಶತಕಗಳ ಶತಕ ರಾಜ. ಮನೋಜ್ಞ ಬ್ಯಾಟಿಂಗ್​​ನಿಂದ ಮಂತ್ರಮುಗ್ಧರನ್ನಾಗಿಸಿದ ಬ್ಯಾಟಿಂಗ್ ಮಾಂತ್ರಿಕ. ಇಂತಹ ಸಾರ್ವಕಾಲಿಕ ಬ್ಯಾಟ್ಸ್​​ಮನ್ ಸೆಂಚುರಿಗೊಬ್ಬ ಸಿಗಲು ಸಾಧ್ಯ. ಎರಡು ದಶಕಕ್ಕೂ ಅಧಿಕ ಕಾಲ ಝಗಮಗಿಸಿದ ಈ ತ್ರಿವಿಕ್ರಮನಿಗೆ ಒಂದು ವಿಚಿತ್ರ ಕಾಯಿಲೆ ಇತ್ತು. ಅವರು ಕ್ರಿಕೆಟ್ ಆಡಿದಷ್ಟು ಕಾಲ ಈ ಕಾಯಿಲೆ ಬಗ್ಗೆ ಯಾರಿಗೂ ಗೊತ್ತಾಗಲೇ ಇಲ್ಲ. ನಿವೃತ್ತಿ ಕೊಟ್ಟು ದಶಕ ಕಳೆದ್ರೂ ಆ ಕಾಯಿಲೆ ಮ್ಯಾಟರ್ ನಿಗೂಢವಾಗಿತ್ತು.

ಸಚಿನ್ ತೆಂಡೂಲ್ಕರ್​​

ಈಗ ಸಚಿನ್​ಗಿದ್ದ ಆ ಕಾಯಿಲೆ ಯಾವುದು ಅನ್ನೋ ಸತ್ಯ ಹೊರ ಬಿದ್ದಿದೆ. ಅಷ್ಟಕ್ಕೂ ಕ್ರಿಕೆಟ್ ದೇವರಿದ್ದ ಆ ಕಾಯಿಲೆ ಏನು?. ನಿದ್ದೆಗಣ್ಣಲ್ಲಿ ನಡೆಯೋದು ಮತ್ತು ನಿದ್ದೆಗಣ್ಣಲ್ಲಿ ಮಾತಾಡೋದು. ಹೌದು, ಕ್ರಿಕೆಟ್ ಲೋಕದ ಭೀಷ್ಮನಿಗೆ ನಿದ್ದೆಗಣ್ಣಲ್ಲಿ ನಡೆಯುವ ಖಯಾಲಿ ಇತ್ತು. ಗಾಢ ನಿದ್ದೆ ಮಾಡ್ತಿದ್ದ ಸಚಿನ್ ಅವರು ಏಕ್​ಧಮ್​ ಎದ್ದು ನಿದ್ದೆಗಣ್ಣಲ್ಲಿ ನಡೆದಾಕೋಕೆ ಶುರುಮಾಡ್ತಿದ್ರಂತೆ.

ಇದರ ಜೊತೆ ನಿದ್ದೆಗಣ್ಣಲ್ಲಿ ಮಾತಾಡುವ ಅಭ್ಯಾಸ ಬೇರೆ ಇತ್ತು. ನಿದ್ರೆ ಮಾಡುತ್ತಿದ್ದಾಗಲೇ ಥಟ್ಟನೇ ಎದ್ದು ಸಚಿನ್​ ತಮ್ಮಷ್ಟಕ್ಕೆ ತಾವೇ ಏನೇನೋ ಮಾತನಾಡಿಕೊಳ್ತಿದ್ರು. ಇದನ್ನ ಕಂಡು ಸಚಿನ್​ ಕುಟುಂಬಸ್ಥರು ಗಾಬರಿ ಆಗಿದ್ದು ಇದೆ. ಈ ವಿಚಾರವನ್ನ ಕ್ರಿಕೆಟ್ ಎಕ್ಸ್​ಫರ್ಟ್ಸ್​​ಗಳಾದ ಸಂದೀಪ್​ ಪಾಟೀಲ್​ ಮತ್ತು ಕ್ಲೇಥಾನ್​​ ಮುರ್​ಜೆಲ್ಲೊ ಬಹಿರಂಗಪಡಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಸಚಿನ್​ ತೆಂಡೂಲ್ಕರ್​ಗಿದೆ ಆ ವಿಚಿತ್ರ ಕಾಯಿಲೆ.. ನಿದ್ದೆಯಲ್ಲಿರುವಾಗ ಏನ್ ಮಾಡ್ತಾರೆ ಮಾಸ್ಟರ್ ಬ್ಲಾಸ್ಟರ್?

https://newsfirstlive.com/wp-content/uploads/2023/08/Sachin-Tendulkar-1-2.jpg

Load More