ಮೊದಲ ಟೆಸ್ಟ್ ಪಂದ್ಯದಲ್ಲೇ ಬಾಂಗ್ಲಾದೇಶ ವಿರುದ್ಧ ಪಾಕ್ಗೆ ಹೀನಾಯ ಸೋಲು
ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟರ್ ಬಸಿತ್ ಅಲಿ
ಭಾರತವನ್ನು ನೋಡಿ ಕಲಿಯಿರಿ ಎಂದ ಪಾಕಿಸ್ತಾನ ತಂಡದ ಮಾಜಿ ಆಟಗಾರ!
ಇತ್ತೀಚೆಗೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲೇ ಬಾಂಗ್ಲಾದೇಶ ವಿರುದ್ಧ ಪಾಕ್ ತಂಡ ಹೀನಾಯ ಸೋಲು ಕಂಡಿದೆ. ಆಗಸ್ಟ್ 30ರಿಂದ ಎರಡನೇ ಟೆಸ್ಟ್ ಪಂದ್ಯ ಶುರುವಾಗಲಿದ್ದು, ಪಾಕಿಸ್ತಾನಕ್ಕೆ ಇದು ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಇನ್ನು, ಪಂದ್ಯಕ್ಕೆ ಮುನ್ನವೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ಮಾಜಿ ಆಟಗಾರ ಗೆಲುವಿನ ಸೂತ್ರ ತಿಳಿಸಿದ್ದಾರೆ. ಟೀಮ್ ಇಂಡಿಯಾವನ್ನು ನೋಡಿ ಕಲಿಯಿರಿ ಎಂದು ಪಿಸಿಬಿಗೆ ಬುದ್ದಿ ಮಾತು ಹೇಳಿದ್ದಾರೆ.
ಭಾರತ ನೋಡಿ ಕಲಿಯಿರಿ ಎಂದ ಕ್ರಿಕೆಟರ್
ಖಾಸಗಿ ಚಾನೆಲ್ವೊಂದರಲ್ಲಿ ಮಾತಾಡಿದ ಮಾಜಿ ಕ್ರಿಕೆಟರ್ ಬಸಿತ್ ಅಲಿ ಪಿಸಿಬಿಗೆ ಬಿಸಿ ಮುಟ್ಟಿಸಿದ್ದಾರೆ. ಟೆಸ್ಟ್ ಸರಣಿ ನಂತರ ಪಾಕಿಸ್ತಾನದಲ್ಲಿ 2025ರ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡವನ್ನು ಫಾಲೋ ಮಾಡಬೇಡಿ. ಕ್ರಿಕೆಟ್ ವಿಚಾರದಲ್ಲಿ ನಮ್ಮ ನೆರೆರಾಷ್ಟ್ರ ಭಾರತವನ್ನು ಫಾಲೋ ಮಾಡಿ. ಭಾರತ ಏನು ಮಾಡುತ್ತಿದೆ ಎಂಬುದನ್ನು ನೋಡಿ ಕಲಿಯಿರಿ ಎಂದರು.
ಇದೇ ಸಂದರ್ಭದಲ್ಲಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಭಾರತ ಬರುವುದು ಬಹುತೇಕ ಖಚಿತ. ಜಯ್ ಶಾ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೂಡ ಬೆಂಬಲ ನೀಡಿದೆ ಎಂದರ್ಥ. ಈ ಬೆಳವಣಿಗೆ ಭಾರತ ಪಾಕಿಸ್ತಾನಕ್ಕೆ ಬರುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದರು.
ಇದನ್ನೂ ಓದಿ: ಐಪಿಎಲ್ನಲ್ಲೂ KL ರಾಹುಲ್ ಅವಕಾಶ ಕಿತ್ತುಕೊಂಡ ರೋಹಿತ್; ಕನ್ನಡಿಗನ ಕ್ಯಾಪ್ಟನ್ಸಿಗೂ ಕೊಕ್ಕೆ ಹಾಕಿದ್ದೇಕೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ