ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಅವಿರತಶ್ರಮ ಪಟ್ಟಿದ್ದ PB ಆಚಾರ್ಯ
ಸಾಮಾನ್ಯ ಜನರಿಗೆ ರಾಜಭವನ ಮುಕ್ತವಾಗಿ ತೆರೆದಿಟ್ಟಿದ್ದ ರಾಜ್ಯಪಾಲ
ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಶಿಕ್ಷಣ ಕೊಡಿಸುತ್ತಿದ್ದರು
ಉಡುಪಿ: ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಶ್ರಮಿಸಿದ್ದ ಮಾಜಿ ರಾಜ್ಯಪಾಲ ಉಡುಪಿಯ ಪದ್ಮನಾಭ ಬಾಲಕೃಷ್ಣ ಆಚಾರ್ಯ (92) ಅವರು ಇಂದು ಮುಂಬೈನಲ್ಲಿ ನಿಧನ ಹೊಂದಿದ್ದಾರೆ. ಇವರು ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು.
ಪಿ.ಬಿ ಆಚಾರ್ಯ (92) ಅವರು ಪತ್ನಿ, ಮಗಳು ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಇವರು ಉಡುಪಿಯ ಬಾಲಕೃಷ್ಣ, ರಾಧಾ ಆಚಾರ್ಯ ದಂಪತಿ ಪುತ್ರನಾಗಿ 1931ರಲ್ಲಿ ಅ.8 ರಂದು ತೆಂಕಪೇಟೆಯ ಆಚಾರ್ಯ ಮಠದಲ್ಲಿ ಜನಿಸಿದ್ದರು. ಕ್ರಿಶ್ಚಿಯನ್ ಶಾಲೆಯಲ್ಲಿ ಮೆಟ್ರಿಕ್ಯೂಲೆಶನ್ ಮುಗಿಸಿದ್ದರು.
ಬಳಿಕ ಮುಂಬೈಗೆ ತೆರಳಿದ್ದ ಆಚಾರ್ಯ ಅವರು ಉನ್ನತ ವ್ಯಾಸಂಗ ಸೇರಿದಂತೆ ಉದ್ಯೋಗವೆಲ್ಲ ಅಲ್ಲೇ ಮಾಡಲು ಆರಂಭಿಸಿದರು. ಆರ್ಎಸ್ಎಸ್ ಕಾರ್ಯಕರ್ತರಾಗಿ ಕೆಲಸ ಮಾಡಲು ಆರಂಭಿಸಿದರು. ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದರು. ಸಾಮಾನ್ಯ ಜನರಿಗೆ ರಾಜಭವನ ಮುಕ್ತವಾಗಿ ತೆರೆದಿಟ್ಟಿದ್ದರು. ಬಡ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಶಿಕ್ಷಣ ಕೊಡಿಸುತ್ತಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ