newsfirstkannada.com

ಸುಂದರ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಕೇಸ್; ಪ್ರಭಾವಿ ರಾಜಕಾರಣಿ ಗೋಪಾಲ್ ಕಾಂಡ ನಿರ್ದೋಷಿ..!

Share :

25-07-2023

  ದೇಶಾದ್ಯಂತ ಸುದ್ದಿಯಾಗಿದ್ದ ಗಗನಸಖಿ ಗೀತಿಕಾ ಶರ್ಮಾ ಪ್ರಕರಣ

  ಆರೋಪಿ ಗೋಪಾಲ್ ಕಾಂಡ ರಾಜಕೀಯ ಹಿನ್ನೆಲೆ ಏನು..?

  ನಿರ್ದೋಷಿ ಆದ ಗೋಪಾಲ್ ವಿರುದ್ಧ ಎಷ್ಟು ಕೇಸ್​ಗಳಿವೆ

ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಹರಿಯಾಣದ ಮಾಜಿ ಸಚಿವ ಗೋಪಾಲ್ ಕಾಂಡ ನಿರ್ದೋಷಿ ಎಂದು ದೆಹಲಿ ಕೋರ್ಟ್​ ತೀರ್ಪು ನೀಡಿದೆ.

ಗೋಪಾಲ ಕಾಂಡ ಹಾಗೂ ಅವರ ಸಹಾಯಕ ಅರುಣ್ ಚಂದಾ ಮೇಲೆ ದಾಖಲಾಗಿದ್ದ ಆತ್ಮಹತ್ಯೆಗೆ ಪ್ರಚೋದನೆ, ಅಪರಾಧಕ್ಕೆ ಪಿತೂರಿ, ಸಾಕ್ಷ್ಯಗಳ ನಾಶ ಪ್ರಕರಣವನ್ನು ವಜಾ ಮಾಡಿರುವ ವಿಶೇಷ ಕೋರ್ಟ್​​ನ ನ್ಯಾಯಾಧೀಶ ವಿಕಾಶ್ ಧುಲ್ಲ್, ‘ತಪ್ಪಿತಸ್ಥರಲ್ಲ’ ಎಂದು ಆದೇಶ ಹೊರಡಿಸಿದ್ದಾರೆ.

ಯಾರು ಈ ಗಗನಸಖಿ..?

ಗೀತಿಕಾ ಶರ್ಮಾ, ಗೋಪಾಲ್ ಕಂದಾ ಒಡೆತನದ MLDR ಏರ್​ಲೈನ್ಸ್​ನ ಮಾಜಿ ಗಗನಸಖಿ ಆಗಿದ್ದರು. ನಂತರ ಇವರನ್ನು ಕಂದಾಗೆ ಸೇರಿದ ಸಂಸ್ಥೆಯ ಡೈರೆಕ್ಟರ್​ ಆಗಿ ನಿಯುಕ್ತಿಗೊಳಿಸಲಾಗಿತ್ತು. ಆಗಸ್ಟ್ 5, 2012ರಂದು ದೆಹಲಿಯ ಅಶೋಕ್ ವಿಹಾರ್​​ನಲ್ಲಿರುವ ನಿವಾಸದಲ್ಲಿ ಗೀತಿಕಾ ಮೃತದೇಹ ಪತ್ತೆಯಾಗಿತ್ತು.

ಡೆತ್​ನೋಟ್ ಬರೆದಿಟ್ಟು ಆಗಸ್ಟ್​ 4 ರಂದು ಗೀತಿಕಾ ಆತ್ಮಹತ್ಯೆಗೆ ಶರಣಾಗಿದ್ದರು. ನನ್ನ ಸಾವಿಗೆ ಗೋಪಾಲ್ ಕಂಡಾ ಮತ್ತು ಅರುಣ್ ಚಂದಾ ಅವರೇ ಕಾರಣ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖ ಮಾಡಿದ್ದರು. ಮಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳಲ್ಲೇ ಗೀತಿಕಾ ಶರ್ಮಾ ಅವರ ತಾಯಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದರು. ಇಷ್ಟಕ್ಕೆಲ್ಲ ಕಾರಣ, ಪೊಲೀಸ್ ಅಧಿಕಾರಿಗಳ ಕಿರುಕುಳ ಎಂದು ಕುಟುಂಬಸ್ಥರು ಆರೋಪಿಸಿದ್ದರು.

ಯಾರು ಈ ಗೋಪಾಲ್ ಕಂಡಾ..?

ಗೋಪಾಲ್ ಕಾಂಡ (46) ಪ್ರಭಾವಶಾಲಿ ರಾಜಕಾರಣಿ ಮತ್ತು ಉದ್ಯಮಿಯಾಗಿದ್ದಾರೆ. ಹರಿಯಾಣದ ಭುಪಿಂದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್​ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಅಂದು ಸಚಿವರಾಗಿದ್ದ ಸಂದರ್ಭದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಒತ್ತಾಯಪೂರ್ವಕವಾಗಿ ರಾಜೀನಾಮೆ ನಿಡಬೇಕಾಗಿ ಬಂತು.

ಸದ್ಯ ಇವರು, ‘ಹರಿಯಾಣ ಲೋಕಹಿತ್ ಪಕ್ಷ’ದ (Haryana Lokhit Party) ನಾಯಕರಾಗಿದ್ದು ಸಿರ್ಜಾ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. 2019ರಲ್ಲಿ ಮನೋಹರ್ ಲಾಲ್ ಖಟ್ಟರ್​ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೇಷರತ್ತು ಬೆಂಬಲ ಸೂಚಿಸಿದ್ದರು. ಇತ್ತೀಚೆಗೆ ಎನ್​ಡಿಎ ಒಕ್ಕೂಟಗಳು ಸಭೆ ನಡೆಸಿದ್ದವು. ಇವರನ್ನೂ ಕೂಡ ಸಭೆಗೆ ಆಹ್ವಾನ ಮಾಡಲಾಗಿತ್ತು.

ಗೋಪಾಲ್ ವಿರುದ್ಧ ಯಾವೆಲ್ಲ ಕೇಸ್​ಗಳು?

ಗೋಪಾಲ್ ಕಾಂಡ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಐಪಿಸಿ (Indian Penal Code) ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 506 (ಅಪರಾಧ ಮಾಡುವ ಬೆದರಿಕೆ), 201 (ಸಾಕ್ಷ್ಯ ನಾಶ), 120B (ಕ್ರಿಮಿನಲ್ ಪಿತೂರಿ) ಮತ್ತು 466 (ಪೋರ್ಜರಿ) ಕೇಸ್​ಗಳು ದಾಖಲಾಗಿವೆ. ಮಾತ್ರವಲ್ಲ, ಅತ್ಯಾಚಾರ (ಐಪಿಸಿ 376) ಮತ್ತು ಅನ್​ನ್ಯಾಚುರಲ್ ಸೆಕ್ಸ್​ (ಐಪಿಸಿ 377) ಕೇಸ್​ಗಳು ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿವೆ.

ತೀರ್ಪು ಪ್ರಕಟ ಆಗ್ತಿದ್ದಂತೆಯೇ ಖಾಸಗಿ ಮಾಧ್ಯಮವೊಂದಕ್ಕೆ ಮಾತನಾಡಿರುವ ಗೋಪಾಲ್ ಕಾಂಡ, ನನ್ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳು ರಾಜಕೀಯ ಪ್ರೇರಿತ ಮತ್ತು ಪಿತೂರಿ ಆಗಿತ್ತು. ನನ್ನ ಮೇಲಿನ ಆರೋಪಕ್ಕೆ ಯಾವುದೇ ದಾಖಲೆಗಳು ಕೂಡ ಇಲ್ಲ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸುಂದರ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಕೇಸ್; ಪ್ರಭಾವಿ ರಾಜಕಾರಣಿ ಗೋಪಾಲ್ ಕಾಂಡ ನಿರ್ದೋಷಿ..!

https://newsfirstlive.com/wp-content/uploads/2023/07/Gopal-Kanda.jpg

Load More