ಉತ್ತರ ಪ್ರದೇಶದ ಮೀರತ್ನಲ್ಲಿ ದುರ್ಘಟನೆ
ಟೆಸ್ಟ್, ODI, ಟಿ-20 ಪಂದ್ಯಗಳನ್ನು ಆಡಿರುವ ಆಟಗಾರ
ಇತ್ತೀಚೆಗೆ ರಿಷಬ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿದ್ದರು
ಟೀಂ ಇಂಡಿಯಾ ಸ್ಟಾರ್ ರಿಷಬ್ ಪಂತ್ ಭೀಕರ ರಸ್ತೆ ಅಪಘಾತಕ್ಕೆ ಒಳಗಾಗಿರುವ ಕಹಿ ಘಟನೆ ಇನ್ನೂ ಹಾಗೆಯೇ ಇದೆ. ಇದರ ಮಧ್ಯೆ, ಭಾರತ ತಂಡದ ಮಾಜಿ ವೇಗಿ ಪ್ರವೀಣ್ ಕುಮಾರ್ ರಸ್ತೆ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಸುದ್ದಿ ಹೊರಬಿದ್ದಿದೆ.
ನಿನ್ನೆ ರಾತ್ರಿ ತಮ್ಮ ಪುತ್ರನ ಜೊತೆ SUV ಕಾರಿನಲ್ಲಿ ಹೋಗುತ್ತಿದ್ದಾಗ ಉತ್ತರ ಪ್ರದೇಶದ ಮೀರತ್ ಬಳಿ ಟ್ರಕ್ ಬಂದು ಗುದ್ದಿದೆ. ಈ ದುರ್ಘಟನೆಯಲ್ಲಿ ದೊಡ್ಡ ಅನಾಹುತ ಸೃಷ್ಟಿಯಾಗಬೇಕಿತ್ತು, ಅದೃಷ್ಟವಶಾತ್ ಮಾಜಿ ಕ್ರಿಕೆಟಿಗ ಹಾಗೂ ಅವರ ಪುತ್ರ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
36 ವರ್ಷದ ಪ್ರವೀಣ್ ಕುಮಾರ್, ಟೀಂ ಇಂಡಿಯಾ ಪರ 6 ಟೆಸ್ಟ್ ಮ್ಯಾಚ್, 68 ಏಕದಿನ ಹಾಗೂ 10 ಟಿ-20 ಪಂದ್ಯಗಳನ್ನು ಆಡಿದ್ದಾರೆ. ದುರ್ಘಟನೆ ಬಗ್ಗೆ ಮಾತನಾಡಿರುವ ಪ್ರವೀಣ್, ನಿನ್ನೆಯ ದಿನ ತುಂಬಾ ಕೆಟ್ಟದಾಗಿತ್ತು. ದೇವರ ದಯೆ ಇತ್ತು. ಹೀಗಾಗಿ ನಾನು ನಿಮ್ಮ ಜೊತೆ ಇಂದು ಮಾತನಾಡ್ತಿದ್ದೇನೆ. ದೇವರಿಗೆ ಧನ್ಯವಾದ ತಿಳಿಸುತ್ತೇನೆ. ನಿನ್ನೆ ರಾತ್ರಿ 9.30 ಸುಮಾರಿಗೆ ನನ್ನ ಕಾರಿಗೆ ಟ್ರಕ್ ಬಂದು ಗುದ್ದಿದೆ. ನನ್ನ ಕಾರು ದೊಡ್ಡದಿತ್ತು, ಹೀಗಾಗಿ ಯಾವುದೇ ಗಾಯಕೂಡ ಆಗಲಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಕಾರಿಗೆ ತುಂಬಾ ಡ್ಯಾಮೇಜ್ ಆಗಿದೆ. ಕಾರಿನ ಬಂಪರ್ ಕಿತ್ತು ಬಂದಿದೆ ಅಂತಾ ತಿಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್