MS ಧೋನಿಗೆ ಆ ಬೈಕ್ ಓಡಿಸಬೇಕು ಅಂತಾ ತುಂಬಾ ಆಸೆ ಇತ್ತು
ಸೀನಿಯರ್ ಬೈಕ್ ಓಡಿಸಲು ಧೋನಿ ಮಾಡಿದ ಐಡಿಯಾ ಸೂಪರ್
ಸ್ಕೂಲ್‌ನಲ್ಲಿ ಕೂಲ್ ಕ್ಯಾಪ್ಟನ್ನ ಲೈಫ್ ಚೇಂಜ್ ಮಾಡಿದ್ದೆ ಆ ಬೈಕ್!
ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ ಕಂಡ ಗ್ರೇಟೆಸ್ಟ್ ವಿಕೆಟ್ ಕೀಪರ್. ಇವರ ಚಾಣಾಕ್ಷ ವಿಕೆಟ್ ಕೀಪಿಂಗ್ಗೆ ಮರುಳಾಗದವರಿಲ್ಲ. ಮಾಹಿ ಶ್ರೇಷ್ಠ ವಿಕೆಟ್ ಕೀಪರ್ ಆಗಿರುವುದೇ ರೋಚಕ. ಆ ಸತ್ಯವನ್ನ ಇವತ್ತಿನ ಸಖತ್ ಸ್ಟೋರಿಯಲ್ಲಿ ತಿಳಿದುಕೊಳ್ಳಿ.
ಎಂಎಸ್ ಧೋನಿ ಬಹು ಪ್ರತಿಭಾನ್ವಿತ ಕ್ರಿಕೆಟಿಗ. ಆಟಗಾರನಾಗಿ, ನಾಯಕನಾಗಿ ಅಷ್ಟೇ ಏಕೆ ವಿಕೆಟ್ ಕೀಪರ್ ಆಗಿ ಜನಜನಿತ. ಅದ್ರಲ್ಲೂ ವಿಕೆಟ್ ಹಿಂದೆ ಮಾಹಿ ಸೃಷ್ಟಿಸಿದ ಮ್ಯಾಜಿಕ್ ನಿಜಕ್ಕೂ ಅದ್ಭುತ. ಇದ್ರಲ್ಲಿ ಧೋನಿಗೆ ಧೋನಿನೇ ಸಾಟಿ. ಕಿಂಗ್ ಆಫ್ ವಿಕೆಟ್ ಕೀಪರ್ ಅಂದ್ರು ತಪ್ಪಲ್ಲ. ಆದರೆ ಒಂದು ಬೈಕ್, ಮಿಸ್ಟರ್ ಕೂಲ್ ಲೈಫನ್ನ ಬದಲಿಸ್ತು ಅಂದ್ರೆ ನೀವು ನಂಬ್ತೀರಾ ಹೇಳಿ. ಇದು ಅಚ್ಚರಿ ಅನ್ನಿಸಿದ್ರು ಸತ್ಯ. ಒಂದೇ ಒಂದು ಬೈಕ್ ಧೋನಿಯನ್ನ ಸರ್ವಶ್ರೇಷ್ಠ ವಿಕೆಟ್ ಕೀಪರ್ ಆಗಿ ಹೊರ ಹೊಮ್ಮುವಂತೆ ಮಾಡಿತು.
ಆಗಿನ್ನು ಧೋನಿಗೆ 16 ವರ್ಷ. ಶಾಲೆಯಲ್ಲಿ ತನಗಿಂತ ಹಿರಿಯನೊಬ್ಬ ಬೈಕ್ ಅನ್ನು ಧೋನಿ ಹಿಂದೆ ನಿಲ್ಲಿಸುತ್ತಿದ್ರು. ಧೋನಿಗೆ ಆ ಬೈಕ್ ಓಡಿಸಬೇಕು ಅಂತಾ ತುಂಬಾ ಆಸೆ ಇತ್ತು. ಅದಕ್ಕಾಗಿ ಧೋನಿ ಒಂದು ಪ್ಲಾನ್ ಮಾಡಿದ್ರು. ಅದೇನಂದ್ರೆ, ಒಂದೂ ಬಾಲ್ ಕೂಡ ಅವರ ಹಿಂದೆ ಹೋಗಿ ಬೈಕ್ಗೆ ಟಚ್ ಆಗದಂತೆ ತಡೆಯುತ್ತಿದ್ದರು. ಧೋನಿಯ ಸ್ಕಿಲ್ ನೋಡಿ ಆ ಸೀನಿಯರ್ ಸಿಕ್ಕಾಪಟ್ಟೆ ಇಂಪ್ರೆಸ್ ಆದ್ರು. ಇದೇ ನೋಡಿ ಮಾಹಿಯನ್ನ ವಿಕೆಟ್ ಕೀಪರ್ ಆಗುವಂತೆ ಪ್ರೇರೇಪಿಸಿದ್ದು. ಹೀಗಂತ ದಿ ಲೆಜೆಂಡ್ ಧೋನಿ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ