newsfirstkannada.com

ಕುಂಬ್ಳೆ ಅಧಿಕ ವಿಕೆಟ್​ ಉರುಳಿಸಲು ಈ ಮಾಜಿ ಕ್ಯಾಪ್ಟನ್​ ಕಾರಣ.. ಲೆಗ್ ಸ್ಪಿನ್ನರ್‌ಗೆ ಟ್ವಿಸ್ಟ್‌ ಕೊಟ್ಟ ಸಖತ್ ಸ್ಟೋರಿ ಇಲ್ಲಿದೆ

Share :

Published July 30, 2023 at 1:08pm

Update July 30, 2023 at 1:20pm

    ಕುಂಬ್ಳೆ ಹೆಸರನ್ನ ಲಿಸ್ಟ್​ನಲ್ಲಿ ಹಾಕುವರೆಗೆ ಸಭೆಯಿಂದ ಹೋಗಲಿಲ್ಲ

    ನಾಯಕನ ಪಟ್ಟಕ್ಕಿತ್ತು ಕುತ್ತು; ಕ್ಯಾಪ್ಟನ್​ ಕೈಗೊಂಡಿದ್ದ ನಿರ್ಧಾರವೇನು?

    ಆದರೂ ಆ ತೀರ್ಮಾನದಿಂದ ಗೆದ್ದಿದ್ದು ಕುಂಬ್ಳೆ; ಕ್ಯಾಪ್ಟನ್ ಏನಂದ್ರು..?

ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಸ್ಪಿನ್ನರ್. ಆದರೆ ಕುಂಬ್ಳೆ ಈ ಸಾಧನೆ ಮಾಡೋಕೆ ಆ ಮಾಜಿ ಕ್ರಿಕೆಟಿಗನೇ ಕಾರಣ. ಆ ದಿಗ್ಗಜ ಇಲ್ಲದಿದ್ರೆ, ಇಂದು ಟೆಸ್ಟ್ ಕ್ರಿಕೆಟ್‌ನಲ್ಲಿ ಕುಂಬ್ಳೆ ಮಿಂಚೋಕೆ ಆಗ್ತಾನೆ ಇರಲಿಲ್ಲ. ಅನಿಲ್ ಕುಂಬ್ಳೆ ಮತ್ತು ಆ ದಿಗ್ಗಜನ ಕಥೆ ಹೇಳ್ತೀವಿ ಇವತ್ತಿನ ಸಖತ್ ಸ್ಟೋರಿಯಲ್ಲಿ.

2003 ಆಸ್ಟ್ರೇಲಿಯಾ ಪ್ರವಾಸ. ಈ ಮಹತ್ವದ ಟೆಸ್ಟ್ ಸರಣಿಯಲ್ಲಿ ಸೆಲೆಕ್ಟರ್ಸ್ ಅನಿಲ್ ಕುಂಬ್ಳೆಯನ್ನ ಕೈ ಬಿಟ್ಟಿದ್ದರು. ಆದ್ರೆ, ಅಂದು ಕೋಚ್ ಜಾನ್ ರೈಟ್ ಹಾಗೂ ನಾಯಕ ಸೌರವ್ ಗಂಗೂಲಿ ಸೇರಿ ಅನಿಲ್ ಕುಂಬ್ಳೆ ಪರ ನಿಂತಿದ್ದರು. ಅನಿಲ್ ಕುಂಬ್ಳೆ ಬದಲಿಗೆ ಸೆಲೆಕ್ಟರ್ಸ್ ಮುರಳಿ ವಿಜಯ್​ರನ್ನು ಆಸ್ಟ್ರೇಲಿಯಾಗೆ ಕರೆದೊಯ್ಯಲು ಸೂಚಿಸಿದ್ರು. ಅದರೆ ಅಂದು ಕ್ಯಾಪ್ಟನ್ ಗಂಗೂಲಿ, ಕುಂಬ್ಳೆ ಬೇಕೇ ಬೇಕು. ಕುಂಬ್ಳೆ ಹೆಸರು ಲಿಸ್ಟ್​ನಲ್ಲಿ ಆ್ಯಡ್ ಮಾಡೋವರೆಗೂ ಮೀಟಿಂಗ್​ನಿಂದ ಹೊರ ನಡೆಯಲ್ಲ ಎಂದು ಪಟ್ಟು ಹಿಡಿದಿದ್ರು.

ಅನಿಲ್ ಕುಂಬ್ಳೆ, ಸೌರವ್ ಗಂಗೂಲಿ

ಗಂಗೂಲಿ ಹಠಕ್ಕೆ ಕೊನೆಗೂ ಬಗ್ಗಿದ ಆಯ್ಕೆಗಾರರು, ನಂತರ ಟೀಮ್​ನಲ್ಲಿ ಅನಿಲ್ ಕುಂಬ್ಳೆ ಹೆಸರನ್ನ ಸೇರಿಸ್ತಾರೆ. ಆದರೆ, ಹೆಸರು ಸೇರಿಸುವ ಮುನ್ನ ಗಂಗೂಲಿಗೆ ಒಂದು ಕಂಡೀಷನ್ ಹಾಕ್ತಾರೆ. ಅದೇನೆಂದ್ರೆ, ಕುಂಬ್ಳೆ ಏನಾದರೂ ಟೆಸ್ಟ್ ಸಿರೀಸ್​ನಲ್ಲಿ ವೈಫಲ್ಯ ಅನುಭವಿಸಿದ್ರೆ. ಕುಂಬ್ಳೆಗಿಂತ ಮುಂಚೆ ನೀನು ನಾಯಕ ಪಟ್ಟ ಕಳೆದುಕೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡ್ತಾರೆ. ಇದ್ಯಾವುದಕ್ಕೂ ಕೇರ್ ಮಾಡದ ಗಂಗೂಲಿ, ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸ್ತಾರೆ.

ಆದರೆ ಆ ಟೆಸ್ಟ್ ಸರಣಿಯಲ್ಲಿ ಅನಿಲ್ ಕುಂಬ್ಳೆ ಅತ್ಯುತ್ತಮ ಪ್ರದರ್ಶನ ನೀಡಿ ನಾಯಕ ಗಂಗೂಲಿ ನಂಬಿಕೆ ಉಳಿಸಿಕೊಳ್ತಾರೆ. ಅಷ್ಟೇ ಅಲ್ಲ, ಆ ವರ್ಷ ಅನಿಲ್ ಕುಂಬ್ಳೆ 80ಕ್ಕೂ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆಯುತ್ತಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಕುಂಬ್ಳೆ ಅಧಿಕ ವಿಕೆಟ್​ ಉರುಳಿಸಲು ಈ ಮಾಜಿ ಕ್ಯಾಪ್ಟನ್​ ಕಾರಣ.. ಲೆಗ್ ಸ್ಪಿನ್ನರ್‌ಗೆ ಟ್ವಿಸ್ಟ್‌ ಕೊಟ್ಟ ಸಖತ್ ಸ್ಟೋರಿ ಇಲ್ಲಿದೆ

https://newsfirstlive.com/wp-content/uploads/2023/07/ANIL_KUMBLE_Sourav_ganguly.jpg

Load More