‘ಸಿದ್ದರಾಮಯ್ಯ ಸರ್ಕಾರದ ಆಪರೇಷನ್ ನಾಟಕಗಳು ವರ್ಕೌಟ್ ಆಗಲ್ಲ’
ಆಪರೇಷನ್ ಹಸ್ತಕ್ಕೆ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ತಿರುಗೇಟು
ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಸಮಸ್ಯೆ ಬಯಲು
ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಮೆಗಾ ಆಪರೇಷನ್ ನಡೆಯುವ ಸುಳಿವು ಸಿಕ್ಕಿದೆ. ಬಿಜೆಪಿ ಬಿಟ್ಟು ಯಾರೂ ಕಾಂಗ್ರೆಸ್‌ಗೆ ಹೋಗಲ್ಲ. ಮುಳುಗುತ್ತಿರುವ ಪಕ್ಷಕ್ಕೆ ಏನು ಸಿಗುತ್ತದೆಂದು ಹೋಗುತ್ತಾರೆ ಅಂತಾ ಆಪರೇಷನ್ ಹಸ್ತದ ಬಗ್ಗೆ ಮಾಜಿ ಡಿಸಿಎಂ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್ ಅವರು ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಾ.ಸಿ.ಎನ್ ಅಶ್ವತ್ಥ್ ನಾರಾಯಣ್ ಅವರು ಕಾಂಗ್ರೆಸ್‌ನವರಿಗೆ ತಮ್ಮ ಪಕ್ಷದವರನ್ನೇ ಉಳಿಸಿಕೊಳ್ಳಲು ಆಗುತ್ತಿಲ್ಲ ಇನ್ನು ಆಪರೇಷನ್ ಹಸ್ತ ಎಲ್ಲಿಂದ ಮಾಡುತ್ತಾರೆ. ಹಲವು ಸಚಿವರು, ಶಾಸಕರು ತಮ್ಮದೇ ಸರ್ಕಾರದ ವಿರುದ್ಧ ಮಾತಾಡುತ್ತಿದ್ದಾರೆ. ಇವರ ರಾಜಕೀಯ ಸರ್ಕಸ್, ನಾಟಕಗಳು ವರ್ಕೌಟ್ ಆಗಲ್ಲ ಎಂದು ಹೇಳಿದ್ದಾರೆ.
ಮುಳುಗ್ತಿರೋ ಕಾಂಗ್ರೆಸ್‌ಗೆ ಯಾರ್ ಹೋಗ್ತಾರೆ ಅಂತಾ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರು ಕಾಂಗ್ರೆಸ್‌ಗೆ ಟಾಂಗ್ ನೀಡಿದ್ದಾರೆ.@drashwathcn #AshwathNarayan #BJP #Congress #NewsFirstKannada pic.twitter.com/eHbTbtNqt3
— NewsFirst Kannada (@NewsFirstKan) August 19, 2023
ಅಧಿಕಾರ ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜನರು ಇವರನ್ನು ಕ್ಷಮಿಸುವುದಿಲ್ಲ. ಇವರ ಯಾವ ಪ್ರಯತ್ನಗಳು ಯಶಸ್ವಿಯಾಗಲ್ಲ. ಮುಂಬರುವ ಎಲೆಕ್ಷನ್ನಲ್ಲಿ ಬಿಜೆಪಿ ಬಹುಮತ ಸಾಧಿಸಲಿದೆ. 3 ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರದಲ್ಲಿ ಹಲವು ಸಮಸ್ಯೆಗಳಿವೆ. ಆದ್ರೆ ಬಿಜೆಪಿಯಿಂದ ಯಾರೂ ಬಿಟ್ಟು ಹೋಗಲ್ಲ. ಬೇರೆಯವರ ಮನಸ್ಥಿತಿಯಲ್ಲಿ ಏನೇನು ಇದೆ ಎಂದು ನಾನು ಹೇಳುವುದಕ್ಕೆ ಆಗಲ್ಲ. ಸರ್ಕಾರದ ಮೇಲಿರುವ ಭ್ರಷ್ಟಾಚಾರ, ಕುಂಠಿತವಾಗಿರುವ ಅಭಿವೃದ್ಧಿಯನ್ನು ಮುಚ್ಚಿ ಹಾಕಲು ಆಪರೇಷನ್ ಹಸ್ತವೆಂದು ವಿಷಯಾಂತರ ಮಾಡುತ್ತಿದ್ದಾರೆ. ಮುಳುಗುತ್ತಿರುವ ಪಕ್ಷಕ್ಕೆ ಏನು ಸಿಗುತ್ತದೆ ಎಂದು ಹೋಗುತ್ತಾರೆ ಹೇಳಿ. ಅಲ್ಲಿರುವವರಿಗೆ ಭರವಸೆಯಿಲ್ಲ ಎಂದು ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ