/newsfirstlive-kannada/media/post_attachments/wp-content/uploads/2023/09/BPL.jpg)
ಬಿಲೋ ಪಾವರ್ಟಿ ಲೈನ್​​ ಬಡತನ ರೇಖೆಗಿಂತ ಕೆಳಗಿರುವ ಸಮುದಾಯ. ಇದೇ BPL ಕಾರ್ಡ್ ನೆಚ್ಚಿಕೊಂಡಿದ್ದ ಜನ ಸದ್ಯ ಕಂಗಾಲಾಗಿದ್ದಾರೆ. ಬಿಪಿಎಲ್​ದಾರರ ಮೇಲಿನ ಈ ಅನಿರೀಕ್ಷಿತ ಆತಂಕ ರೇಷನ್ ಅಂಗಡಿಗಳ ಬಳಿ ಗೋಳಾಟ ಕಾಣಿಸುತ್ತಿದೆ. ಜನರ ಕಣ್ಣೀರು ರಾಜಕೀಯ ದಾಳವಾಗಿದೆ.
ಬಿಪಿಎಲ್ ಅಂದರೆ ಬಡತನ ರೇಖೆಗಿಂತ ಕೆಳಗಿರುವ ಸಮುದಾಯಕ್ಕೆ ನೀಡುವ ಕಾರ್ಡ್ ಆಗಿದೆ. ಇದೇ BPL ಕಾರ್ಡ್ ನೆಚ್ಚಿಕೊಂಡಿದ್ದ ಜನ ಸದ್ಯ ಕಂಗಾಲಾಗಿದ್ದಾರೆ. ಬಿಪಿಎಲ್​ದಾರರ ಮೇಲಿನ ಈ ಅನಿರೀಕ್ಷಿತ ಆತಂಕ ರೇಷನ್ ಅಂಗಡಿಗಳ ಬಳಿ ಗೋಳಾಟ ಕಾಣಿಸುತ್ತಿದೆ.
/newsfirstlive-kannada/media/post_attachments/wp-content/uploads/2024/11/CT_RAVI-1.jpg)
ರಾಮನಗರದಲ್ಲಿ ಅನರ್ಹ ಪಡಿತರರ ವಿರುದ್ಧ ಅಧಿಕಾರಿಗಳ ಛಾಟಿ
ಇತ್ತೀಚಿಗೆ ರಾಜ್ಯ ಸರ್ಕಾರ ಅನರ್ಹ ಫಲಾನುಭವಿಗಳ ಬಿಪಿಎಲ್ ಕಾರ್ಡ್​ಗಳನ್ನ ರದ್ದು ಮಾಡಲು ಮುಂದಾಗಿದೆ. ರಾಮನಗರ ಜಿಲ್ಲೆಯಲ್ಲಿ ಅನರ್ಹ ಪಡಿತರದಾರರ ವಿರುದ್ಧ ಅಧಿಕಾರಿಗಳ ಛಾಟಿ ಮುಂದುವರೆದಿದ್ದು ಜಿಲ್ಲೆಯಲ್ಲಿ ಒಟ್ಟು 11,094 ಮಂದಿ ಬಿಪಿಎಲ್‌ಕಾರ್ಡ್​ಗಳು ರದ್ದಾಗಿವೆ.
ತುಮಕೂರು, ವಿಜಯಪುರಕ್ಕೂ ತಟ್ಟಿದ ಬಿಪಿಎಲ್ ಬಿಸಿ
ತುಮಕೂರಲ್ಲಿ 20 ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್​ಗಳು ರದ್ದಾಗಿದ್ದು​ ಇತ್ತ ವಿಜಯಪುರ ಜಿಲ್ಲೆಗೂ ಬಿಪಿಎಲ್​ ಬಿಸಿ ಮುಟ್ಟಿ, ಒಟ್ಟು 4 ಸಾವಿರದ 359 ರೇಷನ್ ಕಾರ್ಡ್​ಗಳು ರದ್ದಾಗಿದೆ. ಇದಕ್ಕೆಲ್ಲಾ ನಾನೇ ಹೊಣೆ ಅಂತಾ ಆಹಾರ ಸಚಿವ ಕೆ.ಹೆಚ್​.ಮುನಿಯಪ್ಪ ಕೂಡ ಒಪ್ಪಿಕೊಂಡಿದ್ದಾರೆ. ಅದಾಗಿಯೂ ವಿಪಕ್ಷಗಳ ಟೀಕೆ ಮುಂದುವರೆದಿದೆ.
ಬಿಪಿಎಲ್ ಕಾರ್ಡ್​ ರದ್ದುಪಡಿಸಿರೋದ್ರಲ್ಲಿ ಬಡವರು ಇದ್ರೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡ್ತೀರಾ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನೆ ಮಾಡಿದ್ದಾರೆ.
ಬಡವರಿದ್ದರೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತೀರಾ?
ಲಕ್ಷ ಗಟ್ಟಲೇ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ ಎಂದು ಮಾಹಿತಿ ಇದೆ. ಇನ್ನು 15, 20 ಲಕ್ಷ ಕಾರ್ಡ್ದಾರರಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಸುದ್ದಿ ಇದೆ. ಇದರಲ್ಲಿ ಬಡವರಿದ್ದರೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತೀರಾ?. ವಿಧವೆ ಸೇರಿ ಒಂದು ಗುಂಟೆನೂ ಜಮೀನು ಇಲ್ಲದಿರುವ ಜನರ ಕಾರ್ಡ್ ಕೂಡ ರದ್ದು ಪಡಿಸಿದ್ದೀರಿ. ಯಾವ ಅಧಿಕಾರಿ ಮೇಲೆ ಸಿಎಂ ಕ್ರಮ ತೆಗೆದುಕೊಳ್ಳುತ್ತಾರೆ?.
ಸಿ.ಟಿ ರವಿ, ಮಾಜಿ ಸಚಿವ
ಇನ್ನೂ ಬಿಪಿಎಲ್ ಕಾರ್ಡ್​ ರದ್ದು ವಿಚಾರ ಬಗ್ಗೆ ಕಾರವಾರದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ ಮಾತನಾಡಿದ್ದು, ಯಾವುದೇ ಬಿಪಿಎಲ್, ಎಪಿಎಲ್ ಕಾರ್ಡ್​ಗಳನ್ನ ರದ್ದು ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/09/DK_SHIVAKUMAR-1.jpg)
ಯಾವ ಬಿಪಿಎಲ್ ಇಲ್ಲ, ಯಾವ ಕಾರ್ಡ್ ಕೂಡ ರದ್ದು ಮಾಡೋದಿಲ್ಲ. ಯಾವ ಐದು ಗ್ಯಾರಂಟಿನೂ ರದ್ದು ಮಾಡುವ ಮಾತೇ ಇಲ್ಲ. ಇನ್ನು 8ವರೆ ವರ್ಷ ಹೀಗೆ ಮುಂದುವರೆಯಲಿದೆ.
ಡಿ.ಕೆ ಶಿವಕುಮಾರ್, ಡಿಸಿಎಂ
ಪಡಿತರ ಚೀಟಿ ಪರಿಷ್ಕರಣೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ, ರಾಜಕೀಯದಲ್ಲಿ ಟಾಕ್​ ವಾರ್​ ಶುರುವಾಗಿದೆ. ಇತ್ತ ಜನ ಕೂಡ ಬಿಪಿಎಲ್​ ಕಾರ್ಡ್​ನಿಂದ ರೇಷನ್​ ಪಡೀತಿದ್ವಿ. ಆಸ್ಪತ್ರೆಗೆ ತೋರಿಸಿಕ್ಳೊತಿದ್ವಿ. ಈಗ ನಮನೆ ಗತಿ ಏನು ಅಂತಾ ಕಣ್ಣೀರು ಹಾಕಿದ್ದಾರೆ. ಇದೆಕೆಲ್ಲಾ ಸರ್ಕಾರ ಆದಷ್ಟು ಬೇಗ ಫುಲ್​ ಸ್ಟಾಪ್​ ಇಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us