newsfirstkannada.com

‘ಅನ್ನರಾಮಯ್ಯ ಬಿರುದು ಸುಖಾ ಸುಮ್ಮನೆ ಸಿಗಲ್ಲ’- ಉಳಿದ 4 ಗ್ಯಾರಂಟಿ ಹಳ್ಳ ಹಿಡಿಯೋದು ಪಕ್ಕಾ ಎಂದ ಈಶ್ವರಪ್ಪ

Share :

19-06-2023

    ಸರ್ಕಾರ ಮೊದಲು ಎಷ್ಟು ಕೆಜಿ ಅಕ್ಕಿ ಕೊಡುತ್ತೇವೆ ಅನ್ನೋದನ್ನ ಸ್ಪಷ್ಟಪಡಿಸಲಿ

    ಅಕ್ಕಿ ಕೊಡದೇ ಬರೀ ಅನ್ನರಾಮಯ್ಯ ಬಿರುದು ತೆಗೆದುಕೊಂಡು ಬಿಟ್ರೆ ಸಾಕಾ?

    ಒಂದೊಂದೇ ಗ್ಯಾರಂಟಿ ಯೋಜನೆ ಹಳ್ಳ ಹಿಡಿಸುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 10 ಕೆಜಿ ಅಕ್ಕಿ ಕೊಡುವ ಅನ್ನಭಾಗ್ಯ ಯೋಜನೆ ಜಾರಿ ವಿಳಂಬವಾಗುವ ಸುಳಿವು ಸಿಗ್ತಿದ್ದಂತೆ ಬಿಜೆಪಿ ನಾಯಕರೆಲ್ಲಾ ಸಿದ್ದರಾಮಯ್ಯ ಸರ್ಕಾರದ ಮೇಲೆ ಮುಗಿಬೀಳುತ್ತಿದ್ದಾರೆ. ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಈಗ ಸಿದ್ದರಾಮಯ್ಯರ ಮುಂದೆ ಇರುವುದು ಒಂದೇ ಒಂದು ಆಯ್ಕೆ. ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ‘ದುಡ್ಡು ಕೊಡ್ತೀವಿ ಅಂದ್ರೂ ಅಕ್ಕಿ ಕೊಡ್ತಿಲ್ಲ’- ಮೋದಿ ಸರ್ಕಾರದ ಮೇಲೆ ಸಿಎಂ ಸಿದ್ದರಾಮಯ್ಯ ಮತ್ತೊಂದು ಆರೋಪ

ಅನ್ನರಾಮಯ್ಯ ಎಂಬ ಬಿರುದು ಸುಮ್ಮನೆ ಸಿಗೋದಿಲ್ಲ. ಸಿದ್ದರಾಮಯ್ಯ ಅನ್ನರಾಮಯ್ಯ ಆಗಲು ಶ್ರಮವಹಿಸಬೇಕಿತ್ತು. ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಾಯಕರು ಗ್ಯಾರಂಟಿಗಳನ್ನು ಘೋಷಿಸುವ ಮುನ್ನಾ ಯೋಚಿಸಬೇಕಿತ್ತು. ಮೊದಲಿನಿಂದಲೂ ಕೇಂದ್ರ ಸರ್ಕಾರ ಬಡವರಿಗೆ 5 ಕೆಜಿ ಅಕ್ಕಿ ನೀಡುತ್ತಾ ಬಂದಿದೆ. ಜನರಿಗೆ ತಪ್ಪು ಮಾಹಿತಿಯನ್ನು ಸಿದ್ದರಾಮಯ್ಯ ರವಾನೆ ಮಾಡುವುದು ಬೇಡ. ಕೇಂದ್ರ ಸರ್ಕಾರ ನೀಡುವ 5 ಕೆಜಿಗೆ ಇನ್ನು 5 ಕೆಜಿ ಸೇರಿಸಿ 10 ಕೆಜಿ ನೀಡುತ್ತಾರೋ? ಅಥವಾ ಕೇಂದ್ರ ಸರ್ಕಾರದ 5 ಕೆಜಿ ಬಿಟ್ಟು ತಾವೇ 10 ಕೆಜಿ ನೀಡುತ್ತಾರೋ ಗೊತ್ತಿಲ್ಲ. ಅನ್ನಭಾಗ್ಯ ಯೋಜನೆಯಲ್ಲಿ ಬಡವರಿಗೆ ಎಷ್ಟು ಪ್ರಮಾಣದ ಅಕ್ಕಿ ನೀಡುತ್ತಾರೆ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಲಿ. ಇದನ್ನು ಬಿಟ್ಟು ಅನ್ನರಾಮಯ್ಯ, ಅನ್ನರಾಮಯ್ಯ ಅಂತಾ ಬಿರುದು ತೆಗೆದುಕೊಂಡು ಬಿಟ್ಟರೇ ಸಾಕಾ? ಎಂದು ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸುವ ಮುನ್ನಾ ನಿಮಗೆ ಬುದ್ಧಿ ಇರಲಿಲ್ಲವೇ? 10 ಕೆಜಿ ಅಕ್ಕಿ ಕೊಡುತ್ತೇನೆ ಎಂದಿದ್ದೀರಿ ಕೊಡಿ. ಸುಖಾ ಸುಮ್ಮನೆ ಕೇಂದ್ರ ಸರ್ಕಾರದ ವಿರುದ್ಧ ಆಪಾದನೆ ಸರಿಯಲ್ಲ. ಇದನ್ನು ರಾಜ್ಯ ಬಿಜೆಪಿ ಒಪ್ಪುವುದಿಲ್ಲ. ನೀವು ಅಕ್ಕಿಯನ್ನು ನೀಡುವ ಯೋಜನೆ ಘೋಷಿಸಿದ್ದೀರಿ. ಅಕ್ಕಿ ತರಲು ಹಾದಿಯನ್ನು ಹುಡುಕುತ್ತಿದ್ದೀರಿ ಮೊದಲು ಅದನ್ನು ಮಾಡಿ. ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಬೇಡಿ. ಈಗ ಅಕ್ಕಿ ನೀಡಲಿಲ್ಲವಾದ್ರೆ ಹೋರಾಟದ ಹಾದಿಯಂತೂ ಹಿಡಿಯುವುದು ನಿಶ್ಚಿತ. ಈಗಾಗಲೇ ಯುವನಿಧಿ ಯೋಜನೆಯಡಿಯಲ್ಲಿ ಪದವೀಧರ ನಿರುದ್ಯೋಗಿಗಳಿಗೆ ಸಹಾಯಧನ ಸಿಗದಂತೆ ಮಾಡಿದ್ದಾರೆ. ಇನ್ನು ನಾಲ್ಕು ಯೋಜನೆಗಳು ಹಳ್ಳ ಹಿಡಿಯಲಿದೆ. ಒಂದೊಂದೇ ಯೋಜನೆಯನ್ನು ಹಳ್ಳ ಹಿಡಿಸಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

‘ಅನ್ನರಾಮಯ್ಯ ಬಿರುದು ಸುಖಾ ಸುಮ್ಮನೆ ಸಿಗಲ್ಲ’- ಉಳಿದ 4 ಗ್ಯಾರಂಟಿ ಹಳ್ಳ ಹಿಡಿಯೋದು ಪಕ್ಕಾ ಎಂದ ಈಶ್ವರಪ್ಪ

https://newsfirstlive.com/wp-content/uploads/2023/06/K-S-Eshwarappa.jpg

Load More