newsfirstkannada.com

ಬಿಜೆಪಿಯಲ್ಲಿ ಬಿಎಸ್​​ವೈ, ಶೆಟ್ಟರ್​​ ಸೈಡ್ಲೈನ್​​ ರಹಸ್ಯ ಬಿಚ್ಚಿಟ್ಟ ರೇಣುಕಾಚಾರ್ಯ.. ಏನಿದು ಹೊಸ ಸ್ಟೋರಿ?

Share :

07-11-2023

  BJP- JDS ಒಂದಾಗಿ ಸಿಎಂ ಕನಸು ಕಾಣ್ತಿದ್ರು- ರೇಣುಕಾಚಾರ್ಯ

  ಬಸವರಾಜ್ ಬೊಮ್ಮಾಯಿ ಬುದ್ಧಿವಂತ, ಯಡಿಯೂರಪ್ಪ ಹೋರಾಟಗಾರ

  ರೇಣುಕಾಚಾರ್ಯ ಮಾತ್ರ ಸೌಂಡ್​​ ಮಾಡ್ತಿರೋದು ಕುತೂಹಲಕ್ಕೆ ಕಾರಣ!

ಎಲೆಕ್ಷನ್​ ಮುಗಿದು ಐದು ತಿಂಗಳು ಕಳೆದೋಯ್ತು. ಆದ್ರೆ, ಆ ಸೋಲಿನ ಕನವರಿಕೆ ಮಾತ್ರ ಬಿಜೆಪಿಯನ್ನ ಹಿಂಡಿ ಹಿಪ್ಪೆ ಮಾಡ್ತಿದೆ. ದಯನೀಯವಾಗಿ ಸೋತ ಬಿಜೆಪಿ, ಹಲವು ಕಾರಣಗಳನ್ನ ಪಟ್ಟಿ ಮಾಡಿದೆ. ಇತ್ತ, ಸೋಲಿಗೆ ನಿಜವಾದ ಕಾರಣ ಏನು ಅನ್ನೋದನ್ನ ರೇಣುಕಾಚಾರ್ಯ ರಿವೀಲ್​ ಮಾಡ್ತಿದ್ದಾರೆ. ಅಷ್ಟಕ್ಕೂ ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಬಾಂಬ್​​​​ ಸಿಡಿಸಿದ್ರೆ, ಡೆಲ್ಲಿ ಅಂಗಳ ಟಾರ್ಗೆಟ್​​ ಆಗಿದೆ.

ಎಲೆಕ್ಷನ್​​​ನಲ್ಲಿ ಗಲ್ಲಿ ಗಲ್ಲಿ ತಿರುಗಿದ ಡೆಲ್ಲಿ ದೊರೆಗಳು, ಸೋತ ಬಳಿಕ ಸಣ್ಣ ಸಾಂತ್ವನವೂ ಇಲ್ಲ. ಬಜೆಟ್​​​ ಅಧಿವೇಶನಕ್ಕೆ ಮೊದಲ ಸಲ ನಾಯಕನಿಲ್ಲದೇ ಅನುಭವಿಸಿದ ಅವಮಾನ, ಮಾನ ಕಳೆದಿದೆ. ಮುಂದಿನ ತಿಂಗಳು ಚಳಿಗಾಲ ಅಧಿವೇಶನಕ್ಕೂ ತನ್ನ ನಾಯಕನ ಆಯ್ಕೆ ಅನಿಶ್ಚಿತವಾಗಿದೆ. ಇತ್ತ, ಪಕ್ಷದ ಒಳಗೆ ಅಸಮಾಧಾನ ಅನ್ನೋದು ಅಗ್ನಿ ಕುಂಡವಾಗಿ ಮಾರ್ಪಟ್ಟಿದೆ. ಮಾಜಿ ಸಚಿವ ರೇಣುಕಾಚಾರ್ಯ ಬೀಸ್ತಿರುವ ಚಾಟಿ, ಕೇಸರಿ ಪಡೆ ವರಿಷ್ಠರ ಕಣ್ಣು ಕೆಂಪಾಗಿಸ್ತಿದೆ.

ರೇಣುಕಾಚಾರ್ಯ, ಮಾಜಿ ಸಚಿವ

‘ನಮ್ಮವರೇ ಬಿಜೆಪಿ ನೂರು ಸ್ಥಾನ ಬರಬಾರದು ಅಂತ ಕಾಯ್ತಿದ್ರು’

ನಾವಿಕನಿಲ್ಲದ ದೋಣಿ ಆದ ರಾಜ್ಯ ಕೇಸರಿ ಪಡೆ, ಭರ್ಜರಿ ಗೆಲುವು ದಾಖಲಿಸಿದ ಕಾಂಗ್ರೆಸ್​​ ಎದುರು ಅಸಹಾಯಕ ಸ್ಥಿತಿಯಲ್ಲಿದೆ.. ಯದ್ವಾತದ್ವಾ ಪ್ರಯೋಗಕ್ಕೆ ಸಾಕ್ಷಿಯಾದ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಆಳಿಗೊಂದು ಕಲ್ಲು ಬೀಳ್ತಿದೆ.. ಸಿಕ್ಕ ಸಿಕ್ಕವರೆಲ್ಲ ಸೋತ ಕಮಲಕ್ಕೆ ಲೆಫ್ಟ್​​-ರೈಟ್​​ ತಗೊಳ್ತಿದ್ದಾರೆ. ಯಡಿಯೂರಪ್ಪ ಪಾಲಿನ ಆಂಜನೇಯ ಮಾಜಿ ಸಚಿವ ರೇಣುಕಾಚಾರ್ಯ, ಸೋಲಿಗೆ ಹೊಸ ಕಾರಣಗಳ ಪಟ್ಟಿಯನ್ನೇ ನೀಡಿ ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ.

ಅಧಿಕಾರಕ್ಕೆ ಬರಬಾರದಂತ ಬಿಜೆಪಿಯಲ್ಲೇ ಪಿತೂರಿ

ಮಾಜಿ ಸಚಿವ ರೇಣುಕಾಚಾರ್ಯ, ಎಲೆಕ್ಷನ್​​​ ಸೋಲಿನ ರಹಸ್ಯವೊಂದನ್ನ ಸ್ಫೋಟಿಸಿದ್ದಾರೆ. ನಮ್ಮವರೇ ಬಿಜೆಪಿ 100 ಸ್ಥಾನ ಬರದಂತೆ ಕಾಯ್ತಾಯಿದ್ರು ಅಂತ ಹೇಳಿಕೆ ನೀಡಿ ಹೊಸ ಬಾಂಬ್​ ಎಸೆದಿದ್ದಾರೆ. ಬಿಜೆಪಿ-ಜೆಡಿಎಸ್​​ ಒಂದಾಗಿ ಅವರೇ ಮುಖ್ಯಮಂತ್ರಿ ಆಗಬೇಕು ಅಂತ ಹಗಲು ಗನಸು ಕಾಣ್ತಿದ್ರು. ಇದು ನನ್ನ ಹೆತ್ತ ತಾಯಿ ಆಣೆಗೂ ಸತ್ಯ ಅಂತ ಡೆಲ್ಲಿ 4 ನಾಯಕನತ್ತ ಬೊಟ್ಟು ತಿರುಗಿಸಿದ್ದಾರೆ.

ರಿಂಗ್​ ಮಾಸ್ಟರ್​ನ ದಾಖಲೆ ರಿಲೀಸ್​​ಗೆ ರೆಡಿ!

ಕೇವಲ ಇಷ್ಟಕ್ಕೆ ನಿಲ್ಲದ ರೇಣುಕಾಚಾರ್ಯ, ಡೆಲ್ಲಿ 4 ನಾಯಕನನ್ನ ಸರ್ವಾಧಿಕಾರಿ ಅಂತ ಹೆಸರು ನಾಮಕರಣ ಮಾಡಿದ್ದಾರೆ. ಆ ಸರ್ವಾಧಿಕಾರಿಯಿಂದ ಪಕ್ಷಕ್ಕೆ ಈ ಸ್ಥಿತಿ ಬಂದಿದೆ ಅಂತ ಪ್ರಯೋಗಗಳ ಮಾಸ್ಟರ್​​ ವಿರುದ್ಧ ಕೆಂಡಕಾರಿದ್ದಾರೆ. ಅಲ್ಲದೆ, ರಾಜ್ಯ ಬಿಜೆಪಿಯಲ್ಲಿ ಎಲ್ಲರೂ ಅವರ ಕೈಗೊಂಬೆಗಳೇ ಅಂತ ಖಡಕ್​​ ಆಗಿ ಶಟಲ್​​ ಕಾಕ್​ ಆಡಿದ ರೇಣುಕಾಚಾರ್ಯ, ದಾಖಲೆ ರಿಲೀಸ್​​​ ಮಾಡ್ತೀನಿ ವೇಟ್​​​ & ಸೀ ಅಂತ ಶಾರ್ಪ್​ ಶಾಟ್​​ ನೀಡಿದ್ದಾರೆ.

ಮಾಜಿ ಸಚಿವರಿಂದ ಈಶ್ವರಪ್ಪ, ಶೆಟ್ಟರ್​​​ ಸೈಡ್​​ಲೈನ್​​​​ ರಹಸ್ಯ!

ಇನ್ನು, ರಾಜ್ಯದಲ್ಲಿ ಪಕ್ಷ ಕಟ್ಟಿಬೆಳೆಸಿದ ಸೀನಿಯರ್​ ಲೀಡರ್​​ಗಳನ್ನ ಹೇಗೆಲ್ಲ ಮೂಲೆ ಗುಂಪಾದ್ರೂ ಅನ್ನೋ ಸಸ್ಪೆನ್ಸ್​​​ ರಿವೀಲ್​​​ ಮಾಡಿದ್ದಾರೆ. ಬೊಮ್ಮಾಯಿಗೆ ಬುದ್ಧಿವಂತನ ಪಟ್ಟ ಕಟ್ಟಿದ್ರೆ, ಬಿಎಸ್​ವೈ ಹೋರಾಟಗಾರ, ಈಶ್ವರಪ್ಪ ಹಾಲುಮತದ ನಾಯಕ ಶೆಟ್ಟರ್​​ಗೆ ಸೈಡ್​​ಲೈನ್​ ಮಾಡ್ಲಾಯ್ತು. ಇದಕ್ಕಾಗಿ ಬಿಜೆಪಿಯಲ್ಲಿ ಕಾರ್ಪೋರೇಟ್​​​ ತಂಡವಿದೆ ಅಂತ ಹೇಳಿದ್ದಾರೆ.

ಬಿಎಸ್​ ಯಡಿಯೂರಪ್ಪ, ಮಾಜಿ ಸಿಎಂ

ಈ ಹೇಳಿಕೆಗಳ ಮಧ್ಯೆ ಪದೆಪದೇ ಇನ್ನೊಂದು ವಿಷಯ ಸ್ಪಷ್ಟೀಕರಣ ನೀಡ್ತಾ ಸಾಗಿದ ಮಾಜಿ ಸಚಿವ ರೇಣುಕಾಚಾರ್ಯ, ತಾವು ಪಕ್ಷ ಬೀಡಲ್ಲ ಅಂತ ಸ್ಪಷ್ಟಪಡಿಸಿದ್ರು. ಜನರ ಅಭಿಪ್ರಾಯ ಆಧರಿಸಿ ತೀರ್ಮಾನ ಎಂದು ತಮ್ಮ ನಡೆಯನ್ನು ನಿಗೂಢವಾಗಿ ಉಳಿಸಿದ್ರು. ಜಿಲ್ಲೆಗೆ ಬಿಜೆಪಿ ಬರ ಅಧ್ಯಯನ ತಂಡ ಬಂದಿದೆ. ಇಲ್ಲೂ ಸಹ ರೇಣುಕಾರ್ಯರನ್ನು ದೂರ ಇಟ್ಟು ನಾಯಕತ್ವ ರಾಜಕಾರಣಕ್ಕಿಳಿದಿದೆ. ಇದಕ್ಕೂ ರೇಣುಕಾಚಾರ್ಯ ಸೆಡ್ಡು ಹೊಡೆದು ಹೊನ್ನಾಳಿಯಲ್ಲಿ ರೌಂಡ್ಸ್​​ ಹಾಕಿದ್ದಾರೆ. ಸೋತ ಹಲವು ಶಾಸಕರು ಮೂಲೆ ಸೇರಿ ಮೌನ ಹೊದ್ದಿದ್ದರೆ, ರೇಣುಕಾಚಾರ್ಯ ಮಾತ್ರ ಸೌಂಡ್​​ ಮಾಡ್ತಿರೋದು ಕುತೂಹಲಕ್ಕೆ ಕಾರಣ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿಯಲ್ಲಿ ಬಿಎಸ್​​ವೈ, ಶೆಟ್ಟರ್​​ ಸೈಡ್ಲೈನ್​​ ರಹಸ್ಯ ಬಿಚ್ಚಿಟ್ಟ ರೇಣುಕಾಚಾರ್ಯ.. ಏನಿದು ಹೊಸ ಸ್ಟೋರಿ?

https://newsfirstlive.com/wp-content/uploads/2023/11/RENUKACHARYA_MP.jpg

Load More