newsfirstkannada.com

WATCH: ನನಗೆ 6 ತಿಂಗಳು ಬೇಡ, ಬರೀ 100 ದಿನ ಸಾಕು; ಮೋದಿ, ಅಮಿತ್ ಶಾಗೆ ವಿ. ಸೋಮಣ್ಣ ಪತ್ರ ಬರೆದಿದ್ದೇಕೆ?

Share :

23-06-2023

  ಲೋಕಸಭಾ ಚುನಾವಣೆಗೂ ಮುಂಚೆ BJP ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ

  ವಿ. ಸೋಮಣ್ಣಗೆ ಅಧ್ಯಕ್ಷ ಸ್ಥಾನ ನೀಡಲು ಬಿಜೆಪಿ ಹೈಕಮಾಂಡ್​ನ ಚಿಂತನೆ?

  ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿರೋ ನಾಯಕನಿಗೆ ಪಟ್ಟಾಭಿಷೇಕ

ಬೆಂಗಳೂರು: ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಬಿರುಗಾಳಿಯೇ ಬೀಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ರೇಸ್‌ಗೆ ಮಾಜಿ ಸಚಿವ ವಿ. ಸೋಮಣ್ಣ ಎಂಟ್ರಿ ಕೊಟ್ಟಿದ್ದಾರೆ. ನಾನೂ ಕೂಡ ಪಕ್ಷದಲ್ಲಿ ಹಿರಿಯ. ಅನುಭವಿ ರಾಜಕಾರಣಿ ಇದ್ದೀನಿ. ನಾನೇ ರಾಜ್ಯಾಧ್ಯಕ್ಷ ಹುದ್ದೆ ಕೊಡಿ ಎಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ನಾಯಕರಾದ ಅಮಿತ್ ಶಾ, ಜೆ.ಪಿ.ನಡ್ಡಾರಿಗೆ ಪತ್ರ ಬರೆದು ವಿನಂತಿ ಮಾಡಿದ್ದೇನೆ ಎಂದು ಸೋಮಣ್ಣ ಹೇಳಿದ್ದಾರೆ.

ನಾನು 24 X 7 ಕಾಯಕವನ್ನೇ ನಂಬಿರುವವನು. ನನಗೆ 6 ತಿಂಗಳು ಬೇಡ, ಬರೀ 100 ದಿನ ರಾಜ್ಯಾಧ್ಯಕ್ಷನಾಗಿ ಅವಕಾಶ ಕೊಡಲಿ. ಹಿನ್ನಡೆಯಾಗಿರುವುದನ್ನು ಮುನ್ನಡೆಗೆ ತರುವುದು ನನ್ನ ಜವಾಬ್ದಾರಿ. ಹಾಗೇ ಆಗಿಲ್ಲ ಎಂದಾಗ ನನ್ನ ರಾಜೀನಾಮೆ ಪಡೆಯಲಿ‌. ನನಗೆ ಪಕ್ಷ ಕೊಟ್ಟಂತಹ ಎಲ್ಲಾ ಟಾಸ್ಕ್‌ಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಅದೆಲ್ಲವೂ ಪರಿಗಣಿಸಿ, ನನಗೆ ಸ್ಥಾನ ನೀಡಲಿ ಎಂದ ವಿ. ಸೋಮಣ್ಣ ಅವರು ಬಿಜೆಪಿ ವರಿಷ್ಠರಿಗೆ ಅವಕಾಶ ಕೊಡಿ ಎಂದಿದ್ದಾರೆ.

ಇನ್ನು, ಕಳೆದ ಒಂದೂವರೆ ತಿಂಗಳಿಂದ ಸುಮ್ಮನೆ ಮನೆಯಲ್ಲಿರುವ ಸ್ಥಿತಿ ಬಂದಿದೆ. ಹೀಗಾಗಿ, ಈಗ ಹೊರಗೆ ಬಂದಿದ್ದೇನೆ. ನಾನೇ ಪತ್ರ ಬರೆದು ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ ಎಂದು ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ನಾನು ಎಲ್ಲರ ಜೊತೆಗೂ ಒಟ್ಟಿಗೆ ಕೆಲಸ ಮಾಡುವ ಸಾಮರ್ಥ್ಯವಿರುವ ನಾಯಕ. ಹೀಗಾಗಿ ರಾಷ್ಟ್ರೀಯ ನಾಯಕರಲ್ಲಿ ನಾನು ಮನವಿ ಮಾಡಿದ್ದೇನೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬಳಿಯೂ ಮಾತನ್ನಾಡಿದ್ದೇನೆ. ಅವಕಾಶ ಕೊಟ್ಟರೇ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಶಕ್ತಿ ನನಗಿದೆ ಎಂದು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

ವಿ. ಸೋಮಣ್ಣಗೆ ಅಮಿತ್ ಶಾ ಆಫರ್‌?
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನೆಡೆಯಾದ ಹಿನ್ನೆಲೆ ಸಂಘಟನೆ, ಆಡಳಿತದಲ್ಲಿ ಕೆಲವು ಬದಲಾವಣೆಗೆ ಬಲ ತುಂಬಲು ಬಿಜೆಪಿ ನಿರ್ಧಾರ ಮಾಡಿದೆ. ಈ ಭಾಗವಾಗಿ ಮಾಜಿ ಸಚಿವ ವಿ. ಸೋಮಣ್ಣಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಕರೆ ಮಾಡಿದ್ದಾರೆ ಎನ್ನಲಾಗಿದೆ. 5 ನಿಮಿಷಗಳ ಕಾಲ ಸೋಮಣ್ಣ ಜೊತೆ ಮಾತನಾಡಿರುವ ಅಮಿತ್ ಶಾ ಅವರು, ಲೋಕಸಭೆ ಚುನಾವಣೆ ಎದುರಾಗ್ತಿದೆ. ನೀವು ಪಕ್ಷದ ಹಿರಿಯರು. ನಿಮ್ಮ ಶ್ರಮದ ಬಗ್ಗೆ ಗೌರವವಿದೆ. ನೀವು ಌಕ್ಟಿವ್ ಆಗಬೇಕು. ನಳಿನ್ ಕುಮಾರ್ ಕಟೀಲ್​ರ ಸ್ಥಾನವನ್ನ ಭರ್ತಿ ಮಾಡಬಹುದು ಎನ್ನುವ ವಿಚಾರವನ್ನು ವಿ. ಸೋಮಣ್ಣ ಮುಂದೆ ಅಮಿತ್ ಶಾ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷರ ಬದಲಾವಣೆಗೆ ಕಸರತ್ತು ಶುರುವಾಗಿದೆ. ಲೋಕಸಭಾ ಚುನಾವಣೆಗೂ ಮೊದಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಥಾನ ಬದಲಾವಣೆ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಈ ಮಧ್ಯೆ ವಿ. ಸೋಮಣ್ಣಗೆ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್​ನ ಚಿಂತನೆ ನಡೆಸಿದೆ. ಸೋಮಣ್ಣ ಅವರು ಪ್ರಬಲ ವೀರಶೈವ-ಲಿಂಗಾಯತ ಸಮುದಾಯಕ್ಕೆ ಸೇರಿರುವ ನಾಯಕ. ಕಳೆದ ನಾಲ್ಕೂವರೆ ದಶಕಗಳಿಂದ ರಾಜಕಾರಣದಲ್ಲಿ ಇರುವವರು. ಅನುಭವಿ, ಹಳೇ ಮೈಸೂರು ಭಾಗದಲ್ಲಿ ತಮ್ಮದೇ ಹಿಡಿತ ಹೊಂದಿದ್ದಾರೆ. ಸದ್ಯ ಆಡಳಿತಾತ್ಮಕವಾಗಿ ಸೋಮಣ್ಣಗೆ ಯಾವುದೇ ಉನ್ನತ ಹುದ್ದೆ ಇಲ್ಲ. ಹೀಗಾಗಿ ವಿ. ಸೋಮಣ್ಣರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ನನಗೆ 6 ತಿಂಗಳು ಬೇಡ, ಬರೀ 100 ದಿನ ಸಾಕು; ಮೋದಿ, ಅಮಿತ್ ಶಾಗೆ ವಿ. ಸೋಮಣ್ಣ ಪತ್ರ ಬರೆದಿದ್ದೇಕೆ?

https://newsfirstlive.com/wp-content/uploads/2023/06/V-Somanna.jpg

Load More