newsfirstkannada.com

ಎದೆ ತಟ್ಟಿ ಹೇಳಿ ನೋಡೋಣ.. ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಗುಡುಗಿದ ಹೆಚ್‌.ಡಿ ದೇವೇಗೌಡ; ಕಾರಣವೇನು?

Share :

28-08-2023

    ರಾಮನಗರವನ್ನು ಜಿಲ್ಲೆ ಮಾಡಿದ್ದು ಯಾರು ಎಂದು ಎದೆ ತಟ್ಟಿ ಹೇಳಿ

    ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ಆಪಾದನೆ ಮಾಡೋದು ಸರಿಯಲ್ಲ

    ಡಿಸಿಎಂ ಡಿ.ಕೆ ಶಿವಕುಮಾರ್​ ವಿರುದ್ಧ ಹೆಚ್​ಡಿ ದೇವೇಗೌಡರ ವಾಗ್ದಾಳಿ

ಬೆಂಗಳೂರು:  ರಾಮನಗರ ಮೆಡಿಕಲ್ ಕಾಲೇಜು ಶಿಫ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ​ಜೆಡಿಎಸ್-ಕಾಂಗ್ರೆಸ್​ ನಡುವಿನ ಜಗಳ ತಾರಕಕ್ಕೇರಿದೆ. ಖುದ್ದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಈ ವಿಚಾರಕ್ಕೆ ಎಂಟ್ರಿ ಕೊಟ್ಟಿದ್ದು ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಹೆಚ್​.ಡಿ ದೇವೇಗೌಡರು, ಬೇಕಾದರೆ ಸರ್ಕಾರದಿಂದ ಕನಕಪುರಕ್ಕೆ ಇನ್ನೊಂದು ಕಾಲೇಜು ಮಂಜೂರು ಮಾಡಿ. ರಾಮನಗರ ಸೆಂಟರ್​ ಎಂದು ಹೆಚ್​.ಡಿ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಮೆಡಿಕಲ್ ಕಾಲೇಜ್ ಮಂಜೂರು ಮಾಡಿದ್ದರು. ಈಗ ಅದನ್ನು ರಾಮನಗರದಿಂದ ಕನಕಪುರಕ್ಕೆ ಶಿಫ್ಟ್​ ಮಾಡುತ್ತಿರುವುದು ನೋವಿನ ಸಂಗತಿ ಎಂದರು.

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ

ರಾಮನಗರವನ್ನು ಜಿಲ್ಲೆ ಮಾಡಿದ್ದು ಯಾರು ಎಂದು ಎದೆ ತಟ್ಟಿ ಹೇಳಿ. ಸದ್ಯ ಮೆಡಿಕಲ್ ಕಾಲೇಜು ವಿಷಯದಲ್ಲಿ ಯಾರೂ ರಾಜಕೀಯ ಬೆರಸಬೇಡಿ. ನಿಮ್ಮದೇ ಸರ್ಕಾರ ಇದೆ. ಬೇಕಾದ್ರೆ ಕನಕಪುರಕ್ಕೆ ಇನ್ನೊಂದು ಕಾಲೇಜು ಮಾಡಿಕೊಳ್ಳಿ. ಆದ್ರೆ ಕುಮಾರಸ್ವಾಮಿ ಬಗ್ಗೆ ಆಪಾದನೆ ಮಾಡಬೇಡಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್​ ವಿರುದ್ಧ ಪರೋಕ್ಷವಾಗಿ ಹೆಚ್​ಡಿ ದೇವೇಗೌಡ್ರು ವಾಗ್ದಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎದೆ ತಟ್ಟಿ ಹೇಳಿ ನೋಡೋಣ.. ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಗುಡುಗಿದ ಹೆಚ್‌.ಡಿ ದೇವೇಗೌಡ; ಕಾರಣವೇನು?

https://newsfirstlive.com/wp-content/uploads/2023/08/HDD_DKS.jpg

Load More