newsfirstkannada.com

‘ಭಾರತ ಚಂದ್ರನನ್ನು ತಲುಪಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ’- ಪಾಕ್​ ಮಾಜಿ ಪ್ರಧಾನಿ ನವಾಜ್​​​ ಷರೀಫ್​​

Share :

19-09-2023

    ಪಾಕಿಸ್ಥಾನದ ಪರಿಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ನವಾಜ್ ಷರೀಫ್ ಪ್ರಶ್ನೆ!

    ಚಂದ್ರಯಾನ 3, ಜಿ-20 ಶೃಂಗಸಭೆ ಬಗ್ಗೆ ಹಾಡಿ ಹೊಗಳಿದ ಮಾಜಿ ಪ್ರಧಾನಿ

    ಪಾಕ್​ ಹೀಗೆ ಪರಿ ಪರಿಯಾಗಿ ಭಿಕ್ಷೆ ಬೇಡಲು ಮುಖ್ಯ ಕಾರಣ ಇವರೇ? ಎಂದ್ರು

ನವದೆಹಲಿ: ಇತ್ತ ಭಾರತ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್‌ ಸೇಫ್​ ಆಗಿ ಇಳಿಸಿ ಭಾರತ ಇತಿಹಾಸ ನಿರ್ಮಿಸಿದೆ. ಈ ಮೂಲಕ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಪ್ರಥಮ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಜತೆಗೆ ಜಿ20 ಶೃಂಗಸಭೆ ಆಯೋಜಿಸಿ ಅಂತರಾಷ್ಟ್ರೀಯ ವಿಚಾರಗಳನ್ನು ಚರ್ಚಿಸುತ್ತಿದೆ. ಇನ್ನೊಂದೆಡೆ ಭಾರತ ಕಟ್ಟರ್​ ಎನಿಮಿ ರಾಷ್ಟ್ರ ಎಂದೇ ಖ್ಯಾತಿ ಹೊಂದಿರೋ ಪಾಕ್​ನಲ್ಲಿ ಮಾತ್ರ  ಆರ್ಥಿಕ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಹೀಗಾಗಿ ಒಂದೊಂದು ರೂಪಾಯಿಗೂ ಪಾಕ್​​ ಜಗತ್ತಿನ ಮುಂದೆ ಬಿಕ್ಷೆ ಬೇಡುವ ಸ್ಥಿತಿಗೆ ತಲುಪಿದೆ. ಈ ಮಧ್ಯೆ ಪಾಕ್​ ಆರ್ಥಿಕ ಅಧಃಪತನಕ್ಕೆ ಮಾಜಿ ಸೇನಾಧಿಕಾರಿಗಳು ಮತ್ತು ನ್ಯಾಯಧೀಶರೇ ಕಾರಣ ಎಂದು ಮಾಜಿ ಪ್ರಧಾನಿ ನವಾಜ್ ಷರೀಫ್ ಆಕ್ರೋಶ ಹೊರಹಾಕಿದ್ದಾರೆ.

ಯೆಸ್​​, ಹೀಗೆ ಹೇಳಿದ್ದು ಬೇಱರು ಅಲ್ಲ. ಬದಲಿಗೆ ಪಾಕ್​ ಮಾಜಿ ಪ್ರಧಾನಿ ಎಂಬುದೇ ಆಶ್ಚರ್ಯಕರ ವಿಷಯ. ಇಂದು ತನ್ನ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ ಷರೀಫ್​​, ನಮ್ಮ ದೇಶದ ಪ್ರಧಾನಿ ಚೀನಾ, ಅರಬ್​​​ ಹೀಗೆ ನೆರೆ ರಾಷ್ಟ್ರಗಳಿಗೆ ಹಣಕ್ಕಾಗಿ ಬಿಕ್ಷೆ ಬೇಡುತ್ತಿದ್ದಾರೆ. ಇನ್ನೊಂದೆಡೆ ಭಾರತ ಮಾತ್ರ ಚಂದ್ರನ ಅಂಗಳಕ್ಕೆ ತಲುಪಿದೆ, ಜಿ20 ಶೃಂಗಸಭೆಯನ್ನು ಮಾಡಿದೆ. ಭಾರತದ ಈ ಸಾಧನೆಯನ್ನು ಪಾಕ್​​ ಮಾಡಲು ಏಕೆ ಸಾಧ್ಯವಿಲ್ಲ? ಇದಕ್ಕೆ ಹೊಣೆ ಯಾರು? ಎಂದು ಪ್ರಶ್ನಿಸಿದ್ದಾರೆ.

ನಾವು ಇಂದು ಒಂದೊಂದು ಡಾಲರ್​ಗೂ ಬೇರೆ ರಾಷ್ಟ್ರಗಳ ಬಳಿ ಕೇಳಲು ಕಾರಣವೇ ಈ ಜನ. ನಿವೃತ್ತ ಸೇನಾ ಮುಖ್ಯಸ್ಥ ಜನರಲ್​​​ ಕಮರ್​ ಜಾವೇದ್​​ ಬಾಜ್ವಾ, ಮಾಜಿ ಐಎಸ್ಐ ಚೀಫ್​​​​​ ಫೈಜ್​​ ಹಮೀದ್​​, ನಿವೃತ್ತ ನ್ಯಾ. ಮಿಯಾನ್​​​ ಸಾಕೀಬ್​ ನಿಸಾರ್​​ ಎಂಬುವರು ದೇಶದ ಈ ಸ್ಥಿತಿಗೆ ಮುಖ್ಯ ಕಾರಣ ಎಂದು ಕೆಂಡಕಾರಿದ್ದಾರೆ. ಷರೀಫ್​​ ಈ ಹೇಳಿಗೆ ಸುತ್ತ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಭಾರತ ಚಂದ್ರನನ್ನು ತಲುಪಿದೆ, ನಾವು ಭಿಕ್ಷೆ ಬೇಡುತ್ತಿದ್ದೇವೆ’- ಪಾಕ್​ ಮಾಜಿ ಪ್ರಧಾನಿ ನವಾಜ್​​​ ಷರೀಫ್​​

https://newsfirstlive.com/wp-content/uploads/2023/09/pakistan-1.jpg

Load More