newsfirstkannada.com

68ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಸುಪ್ರೀಂಕೋರ್ಟ್​ನ ಹಿರಿಯ ವಕೀಲ.. ವಿವಾಹ ಸಮಾರಂಭ ನಡೆದಿದ್ದೇಲ್ಲಿ?

Share :

04-09-2023

    ಸುಪ್ರೀಂಕೋರ್ಟ್​ನ​ ಪ್ರಮುಖ ವಕೀಲರಲ್ಲಿ ಇವರು ಒಬ್ಬರು

    ಹಿರಿಯ ವಕೀಲರಿಂದ 2020ರಲ್ಲಿ ಮೊದಲ ಪತ್ನಿಗೆ ಡಿವೋರ್ಸ್

    ಸದ್ಯ ಇದೀಗ ಟ್ರೀನಾ ಎನ್ನುವರನ್ನು ಮದುವೆಯಾದ ವಕೀಲ​

ಭಾರತದ ಮಾಜಿ ಸಾಲಿಸೀಟರ್ ಜನರಲ್ ಹಾಗೂ ಹಿರಿಯ ವಕೀಲರಾದ ಹರೀಶ್​ ಸಾಳ್ವೆ (68) ಅವರು 3ನೇ ಮದುವೆ ಆಗಿ ಆಶ್ಚರ್ಯ ಮೂಡಿಸಿದ್ದಾರೆ. ಇವರು 2020ರಲ್ಲಿ ತಮ್ಮ ಮೊದಲ ಪತ್ನಿಗೆ ಡಿವೋರ್ಸ್​ ನೀಡಿದ್ದರು.

ಹರೀಶ್ ಸಾಳ್ವೆ ಅವರು ಇತ್ತೀಚೆಗೆ ಲಂಡನ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ಟ್ರಿನಾ ಎನ್ನುವರನ್ನು ವಿವಾಹವಾಗಿದ್ದಾರೆ. ಕೆಲವೇ ಕೆಲ ಸಂಬಂಧಿಕರ ನಡುವೆ ಹರೀಶ್ ಸಾಳ್ವೆ-ಟ್ರಿನಾ ಕೇಕ್ ಕತ್ತರಿಸಿ ಒಬ್ಬರಿಗೊಬ್ಬರು ತಿನಿಸಿದರು. ಈ ವಿವಾಹ ಸಮಾರಂಭದಲ್ಲಿ ಭಾರತದ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಭಾಗಿಯಾಗಿದ್ದರು. ಉದ್ಯಮಿಗಳಾದ ಸುನಿಲ್ ಮಿತ್ತಲ್, ಎಲ್‌ಎನ್ ಮಿತ್ತಲ್, ಎಸ್‌ಪಿ ಲೋಹಿಯಾ ಮತ್ತು ಗೋಪಿ ಹಿಂದುಜಾ, ಲಲಿತ್​ ಮೋದಿ ಸೇರಿದಂತೆ ಇತರ ಪ್ರಮುಖ ಉದ್ಯಮಿಗಳು ಭಾಗವಹಿಸಿದ್ದರು.

ಎರಡನೇ ಮದುವೆಯಲ್ಲಿ ಸಾಳ್ವೆ ಮತ್ತು ಕ್ಯಾರೋಲಿನ್ ಬ್ರೌಸಾರ್ಡ್

ಹರೀಶ್​ ಸಾಳ್ವೆಯವರು ತಮ್ಮ ಮೊದಲ ಪತ್ನಿ ಮೀನಾಕ್ಷಿ ಸಾಳ್ವೆಗೆ 2020ರಲ್ಲಿ ಡಿವೋರ್ಸ್​ ನೀಡಿದ್ದರು. ಈ ಇಬ್ಬರಿಗೆ ಸಾಕ್ಷಿ ಮತ್ತು ಸಾನಿಯಾ ಎಂಬ ಎರಡು ಮಕ್ಕಳಿದ್ದಾವೆ. ನಂತರದ ದಿನಗಳಲ್ಲಿ ಕ್ಯಾರೋಲಿನ್ ಬ್ರೌಸಾರ್ಡ್ ಎನ್ನುವರನ್ನು ಮದುವೆಯಾದರು. ಇವರಿಗೂ ಡಿವೋರ್ಸ್​ ನೀಡಿದ್ದಾರೆ. ಸದ್ಯ ಇದೀಗ 3ನೇ ಪತ್ನಿಯಾಗಿ ಟ್ರೀನಾ ಅವರನ್ನು ಲಂಡನ್​ನಲ್ಲಿ ವರಿಸಿದ್ದಾರೆ.

ಸುಪ್ರೀಂಕೋರ್ಟ್​ ಪ್ರಮುಖ ವಕೀಲರಲ್ಲಿ ಹರೀಶ್​ ಸಾಳ್ವೆ ಕೂಡ ಒಬ್ಬರಾಗಿದ್ದಾರೆ. ಇವರು ಕುಲಭೂಷಣ್ ಜಾಧವ್, ಸಲ್ಮಾನ್ ಖಾನ್ ಹಿಟ್ ಅಂಡ್ ರನ್, ಕೃಷ್ಣ ಗೋದಾವರಿ ಜಲಾನಯನ ವಿವಾದಂತಹ ಪ್ರಮುಖ ಪ್ರಕರಣಗಳನ್ನು ನಿರ್ವಹಿಸಿದ್ದಾರೆ. ಸಾಳ್ವೆ ಅವರು ನವೆಂಬರ್ 1999 ರಿಂದ ನವೆಂಬರ್ 2002 ರವರೆಗೆ ಭಾರತದ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

68ನೇ ವಯಸ್ಸಿನಲ್ಲಿ 3ನೇ ಮದುವೆಯಾದ ಸುಪ್ರೀಂಕೋರ್ಟ್​ನ ಹಿರಿಯ ವಕೀಲ.. ವಿವಾಹ ಸಮಾರಂಭ ನಡೆದಿದ್ದೇಲ್ಲಿ?

https://newsfirstlive.com/wp-content/uploads/2023/09/HAREESH_SALVE.jpg

Load More