newsfirstkannada.com

ರೈತರ ಪ್ರತಿಭಟನೆ ವರದಿ ಮಾಡ್ತಿರುವ ಖಾತೆಗಳನ್ನು ಬ್ಲಾಕ್ ಮಾಡುವಂತೆ ಒತ್ತಡ ಇದೆ -ಮೋದಿ ಸರ್ಕಾರದ ವಿರುದ್ಧ ‘ಟ್ವೀಟರ್ ಬಾಂಬ್’

Share :

13-06-2023

    ಟ್ವಿಟರ್ ಮಾಜಿ‌ ಸಿಇಒ ಜಾಕ್ ಡೋರ್ಸಿ ಗಂಭೀರ ಆರೋಪ

    ರೈತರ ಪ್ರತಿಭಟನೆ ವರದಿ ಮಾಡುತ್ತಿದ್ದವರ ಮೇಲೆ ಒತ್ತಡ

    ಇದು ಸತ್ಯ ಎಂದ ಹೋರಾಟಗಾರ ರಾಕೇಶ್ ಟಿಕಾಯತ್‌

ನವದೆಹಲಿ: ಟ್ವಿಟರ್ ಮಾಜಿ‌ ಸಿಇಒ ಜಾಕ್ ಡೋರ್ಸಿ ಮಾಡಿರೋ ಗಂಭೀರ ಆರೋಪ ಇವತ್ತು ದೇಶಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿದೆ. ಟಿವಿ ಚಾನೆಲ್‌ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಾಕ್ ಡೋರ್ಸಿ, ಭಾರತದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲು ಒತ್ತಡವಿತ್ತು ಎಂದು ಹೇಳಿಕೆ ನೀಡಿದ್ದಾರೆ ಜಾಕ್‌ ಡೋರ್ಸಿ ಕೊಟ್ಟಿರುವ ಈ ಸ್ಟೇಟ್‌ಮೆಂಟ್ ದೊಡ್ಡ ಸಂಚಲನ ಸೃಷ್ಟಿಸಿದೆ.

ಇದೇ ಸಂದರ್ಶನದಲ್ಲಿ ಮುಂದುವರಿದ ಜಾಕ್ ಡೋರ್ಸಿ ಅವರು 2020-21ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಭಾರತದಲ್ಲಿ ರೈತರ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲು ಒತ್ತಡ ಹಾಕಿತ್ತು. ಭಾರತದ ಟ್ವಿಟರ್ ಕಂಪನಿ ಉದ್ಯೋಗಿಗಳನ್ನು ರೇಡ್ ಮಾಡುವ, ಬಂಧಿಸುವ ಬೆದರಿಕೆ ಆಗಿತ್ತು. ಇದು ಭಾರತ, ಪ್ರಜಾಪ್ರಭುತ್ವ ದೇಶ ಎಂದು ವ್ಯಂಗ್ಯವಾಗಿ ನಗುತ್ತಾ ಜಾಕ್ ಡೋರ್ಸಿ ಹೇಳಿದ್ದಾರೆ.

ಆರೋಪ ಸುಳ್ಳು ಎಂದ ಕೇಂದ್ರ ಸರ್ಕಾರ
ಜಾಕ್ ಡೋರ್ಸಿ ಅವರ ಈ ಆರೋಪಕ್ಕೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು ಇದೆಲ್ಲ ಸುಳ್ಳು ಎಂದಿದೆ. ಕೇಂದ್ರ ಎಲೆಕ್ಟ್ರಾನಿಕ್, ಟೆಕ್ನಾಲಜಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಟ್ವಿಟರ್‌ನಲ್ಲಿ ಜಾಕಾ ಡೋರ್ಸಿ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ. ಟ್ವಿಟರ್‌ನಿಂದ ಭಾರತದಲ್ಲಿ ಯಾರೂ ಜೈಲಿಗೆ ಹೋಗಿಲ್ಲ. ಟ್ವಿಟರ್ ಅನ್ನು ಭಾರತದಲ್ಲಿ ಮುಚ್ಚಿರಲಿಲ್ಲ. ಜಾಕ್ ಡೋರ್ಸಿ ಟ್ವಿಟರ್ ಸಿಇಒ ಆಗಿದ್ದಾಗ ಭಾರತದ ಸಾರ್ವಭೌಮತ್ವದ ಕಾನೂನು ಒಪ್ಪಿಕೊಳ್ಳಲು ಅವರಿಗೆ ಸಮಸ್ಯೆ ಇತ್ತು. ಭಾರತದ ಕಾನೂನು ತಮಗೆ ಅನ್ವಯಿಸಲ್ಲ ಎಂಬಂತೆ ಅವರು ವರ್ತಿಸಿದ್ದರು. ಜಾಕ್ ಡೋರ್ಸಿ ಟ್ವಿಟರ್ ಸಿಇಒ ಆಗಿದ್ದ 2020-2022 ರವರಗೆ ಅವರು ಭಾರತದ ಕಾನೂನು ಪಾಲಿಸಿಲ್ಲ ಎಂಬುದು ಸತ್ಯ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ವಿರೋಧ ಪಕ್ಷಗಳ ಕೈಗೆ ಹೊಸ ಅಸ್ತ್ರ
ಟ್ವಿಟರ್ ಮಾಜಿ CEO ಜಾಕ್ ಡೋರ್ಸಿ ಹೇಳಿಕೆ ಸಂಚಲನ ಸೃಷ್ಟಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ, ರೈತರ ಹೋರಾಟದ ಸಂದರ್ಭದಲ್ಲಿ ಮೋದಿ ಸರ್ಕಾರ ಟ್ವಿಟರ್‌ ಖಾತೆಗಳನ್ನು ಬ್ಲಾಕ್ ಮಾಡಲು ಒತ್ತಡ ಹಾಕಿದೆ. ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದ ಪ್ರತಕರ್ತರ ಖಾತೆಗಳನ್ನು ಬ್ಲಾಕ್ ಮಾಡಿದೆ. ಜಾಕ್ ಡೋರ್ಸಿ ಅವರು ಸಂದರ್ಶನದಲ್ಲಿ ಆರೋಪ ಮಾಡಿದ್ದು, ಮೋದಿ ಸರ್ಕಾರ ಉತ್ತರಿಸುತ್ತಾ ಎಂದು ಪ್ರಶ್ನಿಸಿದ್ದಾರೆ.

ಇದು ಸತ್ಯ ಎಂದ ರಾಕೇಶ್ ಟಿಕಾಯತ್‌
2020-21ರ ಅವಧಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಬೃಹತ್ ಹೋರಾಟ ನಡೆಸಿದ್ದ ರೈತ ನಾಯಕ ರಾಕೇಶ್ ಟಿಕಾಯತ್ ಅವರು ಜಾಕ್ ಡೋರ್ಸಿ ಅವರು ಮಾಡಿರುವ ಆರೋಪ ಸತ್ಯವಾದದ್ದು. ಫೇಸ್‌ಬುಕ್, ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲು ಕೇಂದ್ರ ಸರ್ಕಾರ ಒತ್ತಡ ಹಾಕಿತ್ತು ಅನ್ನೋದರ ಬಗ್ಗೆ ನಮಗೂ ಮಾಹಿತಿ ಇತ್ತು. ಆದರೆ ಟ್ವಿಟರ್‌ನಂತಹ ಕಂಪನಿಗಳು ಒತ್ತಡಕ್ಕೆ ಮಣಿದಿಲ್ಲ. ಜಾಕ್ ಡೋರ್ಸಿ ಹೇಳಿರುವುದೆಲ್ಲ ಸರಿಯಾಗಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೈತರ ಪ್ರತಿಭಟನೆ ವರದಿ ಮಾಡ್ತಿರುವ ಖಾತೆಗಳನ್ನು ಬ್ಲಾಕ್ ಮಾಡುವಂತೆ ಒತ್ತಡ ಇದೆ -ಮೋದಿ ಸರ್ಕಾರದ ವಿರುದ್ಧ ‘ಟ್ವೀಟರ್ ಬಾಂಬ್’

https://newsfirstlive.com/wp-content/uploads/2023/06/TWTTER.jpg

Load More