ಸತತ ಸೋಲು ವಿಶ್ವಕಪ್ನಿಂದ ಹೊರಬಿದ್ದ ವೆಸ್ಟ್ ಇಂಡೀಸ್
ನೆದರ್ಲ್ಯಾಂಡ್ಸ್, ಸ್ಕಾಟ್ಲೆಂಡ್ ವಿರುದ್ಧ ಕೆರಿಬಿಯನ್ರಿಗೆ ಸೋಲು
ಅತಿಯಾದ ಆತ್ಮವಿಶ್ವಾಸ ಟೀಮ್ ಇಂಡಿಯಾಕ್ಕೆ ಒಳ್ಳೆಯದಲ್ಲ
ಈ ಬಾರಿಯ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೆ ಏರಲು ಟೀಮ್ ಇಂಡಿಯಾ ತುದಿಗಾಲಲ್ಲಿ ನಿಂತಿದೆ. ಹೋಮ್ ಅಡ್ವಾಂಟೇಜ್ ಇದೆ, ಸುಲಭಕ್ಕೆ ಕಪ್ ಗೆಲ್ತೀವಿ ಅನ್ನೋ ಲೆಕ್ಕಾಚಾರ ತಂಡದಲ್ಲಿದೆ. ಆದ್ರೆ, ಸ್ವಲ್ಪ ಯಾಮಾರಿದ್ರೂ ಮುಖಭಂಗಕ್ಕೆ ಒಳಗಾಗಬೇಕಾಗುತ್ತೆ. ಓವರ್ ಕಾನ್ಫಿಡೆನ್ಸ್ನಲ್ಲಿ ಕಣಕ್ಕಿಳಿದ್ರೆ ವೆಸ್ಟ್ ಇಂಡೀಸ್ಗೆ ಆದ ಗತಿಯೇ ಆಗಲಿದೆ.
10 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ ಪಟ್ಟ ಅಲಂಕರಿಸಲು ಟೀಮ್ ಇಂಡಿಯಾಗೆ ಇದೇ ಬೆಸ್ಟ್ ಚಾನ್ಸ್. ತಂಡದಲ್ಲಿ ಮ್ಯಾಚ್ ವಿನ್ನರ್ಗಳ ದಂಡೇ ಇದೆ. ಬ್ಯಾಟಿಂಗ್, ಬೌಲಿಂಗ್ & ಫೀಲ್ಡಿಂಗ್ 3 ವಿಭಾಗಗಳಲ್ಲೂ ಸಾಲಿಡ್ ಪ್ಲೇಯರ್ಗಳಿದ್ದಾರೆ. ಇದರ ಜೊತೆಗೆ ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ಶ್ರೀರಕ್ಷೆಯಂತೆ ಕಾಯಲಿದೆ. ಹೋಮ್ ಅಡ್ವಾಂಟೇಜ್ ಅನ್ನ ಸಮರ್ಪಕವಾಗಿ ಬಳಸಿಕೊಂಡ್ರೆ, ಕಪ್ ಗೆಲ್ಲೋದು ಕಷ್ಟವೇ ಅಲ್ಲ. ಹಾಗಂತ ಅತಿಯಾದ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿದ್ರೆ, ಮಕಾಡೆ ಮಲಗೋದು ಪಕ್ಕಾ.
ಇಂಡೀಸ್ ಸೋಲು, ಟೀಮ್ ಇಂಡಿಯಾಗೆ ಪಾಠ.!
ವೆಸ್ಟ್ ಇಂಡೀಸ್ 70ರಿಂದ 90ರ ದಶಕದವರೆಗೆ ಈ ಹೆಸರನ್ನ ಕೇಳಿದ್ರೆ ವಿಶ್ವ ಕ್ರಿಕೆಟ್ ಲೋಕ ಬೆಚ್ಚಿ ಬೀಳ್ತಾಯಿತ್ತು. ಎಂತದ್ದೇ ಫೀಲ್ಡಿಂಗ್ ಸೆಟ್ ಮಾಡಿಕೊಂಡು ಎಂತಾ ಅದ್ಭುತ ಎಸೆತವನ್ನ ಹಾಕಿದ್ರೂ ಸಲೀಸಾಗಿ ಬೌಂಡರಿ ಗೆರೆ ದಾಟಿಸ್ತಾ ಇದ್ದ ಬ್ಯಾಟ್ಸ್ಮನ್ಗಳ ದಂಡೇ ಇತ್ತು. ಬೌಲರ್ಗಳಂತೂ 22 ಯಾರ್ಡ್ನ ಪಿಚ್ನಲ್ಲೇ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ನರಕದರ್ಶನ ಮಾಡಿಸ್ತಿದ್ರು. ಆಗ ಅಕ್ಷರಶಃ ಕ್ರಿಕೆಟ್ ಲೋಕಕ್ಕೆ ಇಂಡೀಸ್ ಅಧಿಪತಿಯಾಗಿತ್ತು. ಆದ್ರೆ, ಈಗ ವಿಶ್ವಕಪ್ ಟೂರ್ನಿಯಿಂದಲೇ ಹೊರ ಬಿದ್ದಿದೆ.
ಕ್ಲೈವ್ಲಾಯ್ಡ್, ಗ್ಯಾರಿ ಸೋಬರ್ಸ್, ವಿವಿಯನ್ ರಿಚರ್ಡ್ಸ್, ಬ್ರಿಯನ್ ಲಾರಾ, ಚಂದ್ರಪಾಲ್, ಕ್ರಿಸ್ ಗೇಲ್.. ಒಂದಾ.. ಎರಡಾ..? ಹೇಳ್ತಾ ಹೋದ್ರೆ ಪಟ್ಟಿ ಇಂಡೀಸ್ ಲೆಜೆಂಡ್ಗಳ ಪಟ್ಟಿ ದೊಡ್ಡದಿದೆ. ಇಷ್ಟೇಲ್ಲ ದಿಗ್ಗಜರ ಕೊಡುಗೆ ನೀಡಿದ ಮೊದಲ 2 ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ವೆಸ್ಟ್ ಇಂಡೀಸ್, ಈಗ ಟೂರ್ನಿಯಿಂದ ಹೊರ ಬಿದ್ದಿದೆ. ಇದಕ್ಕೆಲ್ಲ ಕಾರಣ ಓವರ್ ಕಾನ್ಪಿಡೆನ್ಸ್.
ವಿಶ್ವಕಪ್ ನೇರವಾಗಿ ಕ್ವಾಲಿಫೈ ಆಗುವಲ್ಲಿ ಫೇಲ್ ಆದ ಇಂಡೀಸ್ ಕ್ವಾಲಿಫೈಯರ್ ಸ್ಟೇಜ್ನಲ್ಲಿ ಗೆದ್ದು ಬರಬೇಕಿತ್ತು. ಶ್ರೀಲಂಕಾ, ಜಿಂಬಾಬ್ವೆ ಹೊರತಾಗಿ ಉಳಿದೆಲ್ಲ ತಂಡಗಳು ಕ್ರಿಕೆಟ್ ಜಗತ್ತಿನಲ್ಲಿ ಕೂಸುಗಳು ಅನಿಸಿಕೊಂಡ ಕಾರಣಕ್ಕೋ ಏನೋ ಸುಲಭಕ್ಕೆ ಗೆಲ್ತೀವಿ ಎಂದು ಇಂಡೀಸ್ ಕಣಕ್ಕಿಳಿತು. ಆದ್ರೆ, ನೀಡಿದ್ದು ದಯನೀಯ ಪ್ರದರ್ಶನ. ಮೊದಲ 2 ಪಂದ್ಯ ಗೆದ್ದ ಇಂಡೀಸ್ 3ನೇ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಮಕಾಡೆ ಮಲಗಿತು. ಆ ಬಳಿಕ ನೆದರ್ಲೆಂಡ್ ವಿರುದ್ಧ ಸೂಪರ್ ಓವರ್ನಲ್ಲಿ ಹೀನಾಯ ಸೋಲು ಕಾಣ್ತು. ಕೊನೆಗೆ ಸ್ಕಾಟ್ಲೆಂಡ್ ವಿರುದ್ಧ ಮಣ್ಣು ಮುಕ್ಕಿ ಟೂರ್ನಿಯಿಂದ ಹೊರ ಬಿದ್ದಿದೆ.
ಎಚ್ಚರ ಟೀಮ್ ಇಂಡಿಯಾ ಎಚ್ಚರ..!
ಈ ಬಾರಿ ವಿಶ್ವಕಪ್ ನಡೀತಾ ಇರೋದು ಭಾರತದಲ್ಲೇ. ಇಲ್ಲಿ ಪ್ರತಿಯೊಂದು ಸ್ಟೇಡಿಯಂಗಳು, ಪಿಚ್ಗಳು, ಪ್ಲೇಯಿಂಗ್ ಕಂಡೀಷನ್ ಬಗ್ಗೆ ಟೀಮ್ ಇಂಡಿಯಾಗೆ ಇಂಚಿಂಚೂ ಮಾಹಿತಿಯಿದೆ. ವಿಶ್ವಕಪ್ನ ಪ್ಲೇಯಿಂಗ್ ಇಲೆವೆನ್ನಲ್ಲಿರಬಹುದಾದ ಫಸ್ಟ್ ಚಾಯ್ಸ್ ಆಟಗಾರರಿಗೆಲ್ಲಾ ಈ ಮೈದಾನಗಳಲ್ಲಿ ಆಡಿದ ಅನುಭವವಿದೆ. ಇದು ಕಾನ್ಫಿಡೆನ್ಸ್ ಆಗಿರಬೇಕೆ ಹೊರತು ಓವರ್ಕಾನ್ಪಿಡೆನ್ಸ್ ಆಗಬಾರ್ದು.. ಯಾಕಂದ್ರೆ, ಟೀಮ್ ಇಂಡಿಯಾ ಮುಂದಿರೋದು ಟಫ್ ಚಾಲೆಂಜ್.
ಇದನ್ನು ಓದಿ: ಇಂಗ್ಲೆಂಡ್-ಆಸ್ಟ್ರೇಲಿಯಾ 2ನೇ ಟೆಸ್ಟ್.. ಭಾರೀ ವಿವಾದಕ್ಕೆ ಕಾರಣವಾಗಿರುವ ಬೈರ್ಸ್ಟೋವ್ ರನೌಟ್ ವಿಡಿಯೋ..!
ಓವರ್ ಕಾನ್ಪಿಡೆನ್ಸ್ನಲ್ಲಿ ಯಾಮಾರಿದ್ರೆ ಮುಖಭಂಗ ಪಕ್ಕಾ.!
ವಿಶ್ವಕಪ್ನ ಲೀಗ್ ಸ್ಟೇಜ್ನಲ್ಲಿ ಟೀಮ್ ಇಂಡಿಯಾದ ಮುಂದೆ ಕಠಿಣ ಸವಾಲೇ ಇದೆ. ಅದರ ಜೊತೆಗೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಜೊತೆಗೆ ಈಗ ಕ್ವಾಲಿಫೈಯರ್ ರೌಂಡ್ನಿಂದ ಬರೋ 2 ತಂಡಗಳ ಜೊತೆಗೆ ಪಂದ್ಯಗಳಿವೆ. ಆನ್ ಪೇಪರ್ ಅಷ್ಟೇನು ಬಲಿಷ್ಠ ಅನ್ನಿಸದಂತಹ ಈ ತಂಡಗಳನ್ನ ಸುಲಭಕ್ಕೆ ಪರಿಗಣಿಸುವಂತೇ ಇಲ್ಲ. ಓವರ್ ಕಾನ್ಫಿಡೆನ್ಸ್ನಲ್ಲಿ ಯಾಮಾರಿದ್ರೆ, ಮುಖಭಂಗ ಅನುಭವಿಸಬೇಕಾಗುತ್ತದೆ.
ಈ ಬಾರಿಯ ವಿಶ್ವಕಪ್ ಟೂರ್ನಿ ಟೀಮ್ ಇಂಡಿಯಾ ಪಾಲಿಗೆ ಸಿಕ್ಕಾಪಟ್ಟೆ ಟಫ್ ಚಾಲೆಂಜ್. ಸಾಲು ಸಾಲು ಸವಾಲುಗಳಿವೆ. ಈ ಎಲ್ಲ ಚಾಲೆಂಜ್ಗಳನ್ನ ತಂಡ ದಿಟ್ಟತನದಿಂದ ಎದುರಿಸಲಿ. ಟ್ರೋಫಿ ಗೆಲ್ಲಲಿ ಅನ್ನೋದೇ ಅಸಂಖ್ಯ ಅಭಿಮಾನಿಗಳ ಪ್ರಾರ್ಥನೆ ಆಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ