ದಟ್ಟಾರಣ್ಯ, ಕ್ರೂರ ಮೃಗಗಳು, ವಿಷಕಾರಿ ಹಾವು
ಅಮೆಜಾನ್ ಕಾಡಿನಲ್ಲಿ 40 ದಿನ ಹೇಗಿದ್ರು ಮಕ್ಕಳು
ಕೊಲಂಬಿಯಾ ದೇಶದಲ್ಲಿ ಸಂಭ್ರಮವೋ ಸಂಭ್ರಮ
ಅಮೆಜಾನ್ ಕಾಡು ಅಂದ್ರೆ ಭಯಾನಕ ದೃಶ್ಯಗಳು ಕಣ್‌ಮುಂದೆ ಬರುತ್ತೆ. ದಟ್ಟಾರಣ್ಯ, ಕ್ರೂರ ಮೃಗಗಳು, ವಿಷಕಾರಿ ಹಾವು, ಹೆಜ್ಜೆ, ಹೆಜ್ಜೆಗೂ ಅಪಾಯದ ತಾಣವೇ ಅಮೆಜಾನ್. ಒಂಭತ್ತು ರಾಷ್ಟ್ರಗಳ ಭೂಪ್ರದೇಶವನ್ನು ಹೊಂದಿರೋ ಅಮೆಜಾನ್ ಮಳೆಕಾಡು ನಿಜಕ್ಕೂ ಭಯಾನಕವಾದದ್ದು. ಈ ಅಮೆಜಾನ್ ಕಾಡಿನಲ್ಲಿ 40 ದಿನ ಜೀವ ಉಳಿಸಿಕೊಂಡಿದ್ದ 4 ಮಕ್ಕಳನ್ನ ರಕ್ಷಿಸಲಾಗಿದೆ.
ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ 4 ಮಕ್ಕಳನ್ನ 40 ದಿನಗಳ ಬಳಿಕ ಕಾಪಾಡಿರೋದು ಇಡೀ ವಿಶ್ವದ ಗಮನ ಸೆಳೆದಿದೆ. 160 ಸೈನಿಕರು, 70 ಸ್ಥಳೀಯರು ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸತತ 40 ದಿನಗಳ ಕಾರ್ಯಾಚರಣೆ ಬಳಿಕ 4 ಮಕ್ಕಳನ್ನು ರಕ್ಷಿಸಿದ್ದು ಕೊಲಂಬಿಯಾ ದೇಶಕ್ಕೆ ದೇಶವೇ ಸಂಭ್ರಮಾಚರಣೆ ಮಾಡಿದೆ. ಕೊಲಂಬಿಯಾ ಅಧ್ಯಕ್ಷ ಗುಸ್ತಾವೊ ಪೆಟ್ರೋ ಮಕ್ಕಳ ರಕ್ಷಣೆಯ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 12ನೇ ತರಗತಿ ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್‌ನಲ್ಲಿ ಜಾಲಿ ರೈಡ್ ಭಾಗ್ಯ
ಕಳೆದ ಮೇ 1ರಂದು ವಿಮಾನವೊಂದು ಎಂಜಿನ್ ಫೇಲ್ ಆಗಿ ಈ ಅಮೆಜಾನ್ ಕಾಡಿನಲ್ಲಿ ಪತನವಾಗಿತ್ತು. ಈ ವಿಮಾನದಲ್ಲಿ ಒಟ್ಟು 7 ಮಂದಿ ಪ್ರಯಾಣ ನಡೆಸಿದ್ದರು. ಪೈಲಟ್, ಕೋ ಪೈಲಟ್ ಹಾಗೂ ಮಕ್ಕಳ ತಾಯಿ ಸಾವನ್ನಪ್ಪಿದ್ದು ಮೃತದೇಹಗಳು ಪತ್ತೆಯಾಗಿತ್ತು. ವಿಮಾನದ ಅವಶೇಷಗಳು ಸಿಕ್ಕಾಗ 4 ಮಕ್ಕಳು ಬದುಕಿಲ್ಲ ಅಂತಾನೇ ಭಾವಿಸಲಾಗಿತ್ತು. ಈ ಘಟನೆಗೆ ಆತಂಕ ವ್ಯಕ್ತಪಡಿಸಿದ್ದ ಕೊಲಂಬಿಯಾ ರಕ್ಷಣಾ ಕಾರ್ಯ ನಡೆಸಿತ್ತು. ಬರೋಬ್ಬರಿ 40 ದಿನದ ಬಳಿಕ 4 ಮಕ್ಕಳು ಜೀವಂತವಾಗಿ ಸಿಕ್ಕಿದ್ದಾರೆ. ಪತ್ತೆಯಾದ ಮಕ್ಕಳಿಗೆ 13 ವರ್ಷ, 9 ವರ್ಷ, 4 ವರ್ಷ ಮತ್ತೊಂದು 12 ತಿಂಗಳ ಮಗು ಎಂದು ಗುರುತಿಸಲಾಗಿದೆ.
ಈ ನಾಲ್ಕು ಮಕ್ಕಳು ವಿಮಾನ ಪತನವಾದ ಬಳಿಕ 40 ದಿನ ಅಮೆಜಾನ್ ಕಾಡಿನಲ್ಲಿ ಕಾಲ ಕಳೆದಿದ್ದಾರೆ. ಜೀವ ಉಳಿಸಿಕೊಳ್ಳಲು ಈ ಮಕ್ಕಳು ಮಾಡಿದ ಸಾಹಸ ನಿಜಕ್ಕೂ ಗ್ರೇಟ್. ಈ ಮಕ್ಕಳ ರಕ್ಷಣಾ ಕಾರ್ಯ, 40 ದಿನ ಈ ಮಕ್ಕಳು ಬದುಕಿಳಿಯಲು ನಡೆಸಿದ ಹೋರಾಟ ಯಾವ ಹಾಲಿವುಡ್ ಸಿನಿಮಾಗೂ ಕಡಿಮೆಯಿಲ್ಲ ಎನ್ನಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ