ಪ್ರತಿ ವರ್ಷ 10 ಸಾವಿರಕ್ಕೂ ಅಧಿಕ ಕೇಸ್ ದಾಖಲು
4 ವಿಭಾಗಗಳಾಗಿ ವಿಂಗಡಿಸಿ ಡಿಸಿಪಿಗಳಿಗೆ ಜವಾಬ್ದಾರಿ
ಸೈಬರ್ ಅಪರಾಧಿಗಳು ತಪ್ಪಿಸಿಕೊಳ್ಳೋದು ಸುಲಭ ಇಲ್ಲ
ಬೆಂಗಳೂರು: ನಗರದಲ್ಲಿ ಸೈಬರ್ ಕ್ರಿಮಿನಲ್ಸ್ ಹಾವಳಿ ಮಿತಿ ಮೀರಿ ಹೋಗಿದೆ. ಪ್ರತಿ ವರ್ಷ ಹತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ಸಾರ್ವಜನಿಕರ ಜೇಬಿನಿಂದ ಲಕ್ಷ ಲಕ್ಷ ಹಣವನ್ನು ದೋಚುತ್ತಿದ್ದಾರೆ. ಇಂತಹ ಸೈಬರ್ ಕ್ರಿಮಿನಲ್ಗಳನ್ನು ಮಟ್ಟ ಹಾಕಲು ಕಮಿಷನರ್ ಬಿ.ದಯಾನಂದ್ ಹೊಸ ಹೆಜ್ಜೆ ಇಟ್ಟಿದ್ದಾರೆ.
ನಾಲ್ಕು ವಿಭಾಗಗಳಾಗಿ ವಿಂಗಡನೆ
ಸೈಬರ್ ಕ್ರಿಮಿನಲ್ಗಳ ಪತ್ತೆಯ ಹೊಣೆಯನ್ನು ನಾಲ್ಕು ಡಿಸಿಪಿಗಳ ಹೆಗಲಿಗೆ ವಹಿಸಿ ಆದೇಶ ನೀಡಿದ್ದಾರೆ. ಪ್ರತಿಯೊಂದು ವಂಚನೆಯ ತನಿಖೆಯನ್ನು ಡಿಸಿಪಿಗಳ ಹೆಗಲಿಗೆ ನೀಡಿದ್ದು.. ಸೈಬರ್ ಕ್ರೈಮ್ ಪತ್ತೆ, ತನಿಖೆ, ಆರೋಪಿಗಳ ತ್ವರಿತ ಬಂಧನಕ್ಕೆ ಸೂಚನೆ ನೀಡಿದ್ದಾರೆ. ಸೈಬರ್ ವಂಚನೆ ನಿಲ್ಲಿಸಲು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದಾರೆ. ಒಂದೊಂದು ವಿಭಾಗಕ್ಕೂ ಒಬ್ಬೊಬ್ಬ ಡಿಸಿಪಿಯನ್ನು ಇನ್ಚಾರ್ಜ್ ಆಗಿ ನೇಮಿಸಿದ್ದಾರೆ.
ನಾಲ್ಕು ವಿಭಾಗಗಳು ಯಾವುದು..?
ಆಧಾರ್ ಕಾರ್ಡ್ ಹೆಸರಲ್ಲಿ ನಡೆಯುವ ಫ್ರಾಡ್ ಕೇಸ್ಗಳ ತನಿಖೆಯನ್ನು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರಿಗೆ ನೀಡಿದ್ದಾರೆ. FedEx ಕೋರಿಯ್ ಫ್ರಾಡ್ ಮಟ್ಟ ಹಾಕಲು ಪೂರ್ವ ವಿಭಾಗ ಸಂಚಾರ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರನ್ನು, ಆನ್ಲೈನ್ ಜಾಬ್ ಚೀಟಿಂಗ್ ವಿರುದ್ಧ ದಕ್ಷಿಣ ವಿಭಾಗ ಸಂಚಾರ ಡಿಸಿಪಿ ಶಿವಪ್ರಕಾಶ್ ದೇವರಾಜ್ ಅವರನ್ನು ನೇಮಿಸಿದ್ದಾರೆ. ಅದೇ ರೀತಿ ಸೆಕ್ಸ್ ಟ್ರಾಕ್ಷನ್ ಕೇಸ್ಗಳ ತನಿಖೆಯ ಹೊಣೆಯನ್ನು ಉತ್ತರ ವಿಭಾಗದ ಸಂಚಾರ ಡಿಸಿಪಿ ಸಚಿನ್ ಘೋರ್ಪಡೆ ನೀಡಲಾಗಿದೆ.
ಈಗಾಗಲೇ ಒಂದೊಂದು ವಿಭಾಗದಲ್ಲಿ ಸಾವಿರಕ್ಕೂ ಅಧಿಕ ಕೇಸ್ಗಳು ದಾಖಲಾಗಿವೆ. ಬರೀ ಕೇಸ್ ಮಾತ್ರ ದಾಖಲಾಗುತ್ತಿದೆ ಆದರೆ ತನಿಖೆ ಆಗುತ್ತಿಲ್ಲ. ಆರೋಪಿಗಳು ಪತ್ತೆಯಿಲ್ಲ, ಹಣ ರಿಕವರಿ ಆಗುತ್ತಿಲ್ಲ. ಆದ್ದರಿಂದ ತನಿಖೆಗೆ ಸಹಾಯ, ಆರೋಪಿಗಳ ಬಂಧನಕ್ಕೆ ಬಲೆ ಬೀಸುವುದು ಇವರುಗಳ ಜವಾಬ್ದಾರಿ ಆಗಿದೆ.
ಆಧಾರ್ ಕಾರ್ಡ್ ಬಳಸಿಕೊಂಡು ಸಾರ್ವಜನಿಕರ ಹಣವನ್ನು ಅದೆಷ್ಟೋ ಮಂದಿ ಗುಳುಂ ಮಾಡುತ್ತಿದ್ದಾರೆ. ಹಾಗೂ ಅಶ್ಲೀಲ ಫೋಟೋ ವಿಡಿಯೋ ತೋರಿಸಿ ಜನರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ವಿಡಿಯೋ ಕರೆ ಮಾಡಿ ಜನರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ. ಕೆಲಸ ಕೊಡಿಸುವುದು, ಗಿಪ್ಟ್ ಹೆಸರಲ್ಲಿ ಮಕ್ಮಲ್ ಟೋಪಿ ಹಾಕುವ ಪ್ರಕರಣಗಳ ತನಿಖೆಗೆ ಕಮಿಷನರ್ ಇದೀಗ ಸೂಚನೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ